Wednesday, April 8, 2020


ಹುಳಿ ಹಿಂಡುವ ಮುಳ್ಳು ಗೋಗು :
ಹೊಸ ತಲೆಮಾರಿನ  ಅಡುಗೆ  ಪ್ರವೀಣ/ಣೆಯರು ತರಹೇವಾರಿ ಅಡುಗೆಯನ್ನು ಮಾಡಬಲ್ಲರು.ಆದರೆ  ನಮ್ಮ ಮುತ್ತಜ್ಜಿ ಹಿರಿಯರ ಕಾಲದವರು  ತಯಾರಿಸುತ್ತಿದ್ದ ಅಡುಗೆ ಪಾಕಗಳ ಹಿಂದೆ ಅತ್ಯಂತ  ಆರೋಗ್ಯಕರ ಹಾಗೂ ವೈಜ್ಞಾನಿಕ ಹಿನ್ನಲೆಯಿತ್ತು.ಅಡುಗೆಗೆ ಸಂಬಧಿಸಿದ ಅದೆಷ್ಟೋ ಸರಳ ಸೂತ್ರಗಳು ಈಗಾಗಲೇ ನಶಿಸಿ ಹೋಗಿವೆ.ಹಳೆಯ ಕಾಲದ ಪಾಕ ಪುಸ್ತಕಗಳನ್ನು ಓದಿದರೆ ನಮ್ಮ ಭಾರತದಅಡುಗೆ ಪದ್ದತಿಗಳು ಎಷ್ಟು ಗುಣ ಮಟ್ಟದ್ದಾಗಿದ್ದವು ಎಂದು ತಿಳಿಯಬಹುದು. 
ಅಂದ ಹಾಗೆ ಹುಳಿ ಹಿಂಡದ  ಯಾವುದಾದರೂ ಮನೆಗಳಿವೆಯೇ?! ತಪ್ಪು ತಿಳಿಯಬೇಡಿ..
ದಿನ ನಿತ್ಯದ ಅಡುಗೆಯಲ್ಲಿ ಹುಳಿಯ ಬಳಕೆ ಇದ್ದೇ ಇದೆ.ಈಗ ಎಪ್ರಿಲ್ ತಿಂಗಳು  ಹುಣಸೆ ಹುಳಿ ಸೀಸನ್ ಬೇರೆ.  ಕಿಲೋ ಒಂದಕ್ಕೆ 300 ವರೆಗೆ ತೆತ್ತಾದರೂ ಒಳ್ಳೆ ಹುಳಿ ಸ್ವಲ್ಪ ಸಿಕ್ಕರೆ ಸಾಕು ಎಂಬುದು ಅಡುಗೆ ಪ್ರಿಯರ ಅಂಬೋಣ.
ಏನಾದರೂ ಸರಿ "ಕೇನೆ ಕರಿ" ಗೆ ಹುಳಿನೀರು ಬೇಕೇ ಬೇಕು.ಕೇನೆ ಹೋಳುಮಾಡುವಾಗಲೇ ಕೈ ತುರಿ ಆರಂಭ.ಹೋಳನ್ನು ಬೇಯಿಸಿದ ನೀರನ್ನು ಚೆಲ್ಲಿ ಪುನಹ ಹುಣಸೆ ಹುಳಿ ಕಿವುಚಿದ ನೀರಿನಲ್ಲೂ ಬೇಯಿಸಿದಾಗಲೇ ಈ ಕಿರಿ ಕಿರಿಗೆ ಮುಕ್ತಿ.ಇದಕ್ಕೆ ಹುಣಸೆ ಹುಳಿ ಅಲ್ಲದೇ ಬೇರೆ ಉಪಾಯವೂ ಇದೆ ನಮ್ಮ ಹಿರಿಯರ ಕೈಯಲ್ಲಿ !!. 

ಸುವರ್ಣ ಗಡ್ಡೆ/ಕೇನೆ


Hibiscus surattensis ಅಥವಾ ಮುಳ್ಳು ಗೋಗನ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.ದಾಸವಾಳ ಕುಟುಂಬವಾದ Malvaceae ಗೆ ಸೇರಿದ ಕಾಟುಪುಳಿಕ್ಕಾಯ್ ಎಂದೇ ಕೇರಳೀಯರು ಕರೆಯುವ ಹುಳಿ ಸೊಪ್ಪಿನ ಗಿಡ. ಗಿಡ ತುಂಬಾ ಸಣ್ಣ ಮುಳ್ಳುಗಳಿರುವ ಬಳ್ಳಿಯಾಗುವ ಪೊದೆ ಸಸ್ಯ.ಹಳದಿ ದಳದ ಮದ್ಯೆ ಕೆಂಬಣ್ಣದ ಬೊಟ್ಟು ಇರುವ ದಾಸವಾಳದಂತಹ ಹೂವು ನೋಡಲು ಚಂದ.ಸಾಧಾರಣವಾಗಿ ತೋಟದ ಅಂಚಿನಲ್ಲಿ,ಬೇಲಿ ಬದಿಯಲ್ಲಿ ಕಾಣಸಿಗುವ ಇದನ್ನು ಕಳೆಯೆಂದು ಬುಡಸಮೇತ ಕೀಳದಿರಿ.
ಹಲವಾರು ಒಷಧೀಯ ಗುಣಗಳಿರುವ ಸಸ್ಯವಿದು.ನಮ್ಮ ಉಪಯೋಗಕ್ಕೆ ಹೇಳುವುದಾದರೆ ಸುವರ್ಣ ಗಡ್ಡೆ ಹೋಳುಗಳನ್ನು ಬೇಯಿಸುವಾಗ ಅದಕ್ಕೆ ಒಂದುಹಿಡಿ ಮುಳ್ಳು  ಗೋಗನ ಎಲೆಗಳನ್ನು ಜಜ್ಜಿ ರಸ ಹಿಂಡಬೇಕು (ಎಲೆಗಳ ಸಂಖ್ಯೆ ಹೋಳುಗಳಿಗೆ ಅನುಸಾರವಾಗಿ).ಎಂತಹ ನಾಲಿಗೆ ತುರಿಕೆ ತರುವ ಕೇನೆಯಾದರೂ ಸರಿ ಈ ಹುಳಿ ಹಿಂಡಿದರೆ ಸಾಕು.ಹೂ ದಳದ ಗೊಜ್ಜು  ಕೂಡಾ ಬೆಳ್ಳುಳ್ಳಿ ಒಗ್ಗರಣೆಯೊಂದಿಗೆ ಊಟಕ್ಕೆ ಹಿತ.
ನಿಮ್ಮನೆ ಹಿತ್ತಲಿನ ಮೂಲೆಯಲ್ಲಿ ಈ ಕಾಡುಗೋಗ ಇದ್ದರೆ ಅದರ  ಉಪಯೋಗವನ್ನರಿಯಿರಿ. ಹೊಲದ ಸ್ಥಳಾವಕಾಶವಿದ್ದರೆ ಒಂದೆರಡು ಬೀಜ ತಂದು ಬಿತ್ತಿರಿ.
ಮುಳ್ಳು ಗೋಗು

























Wednesday, April 1, 2020

Conserve & Consume


Since I am a Botany teacher, Most often I disuss about edible wild plants avaible in our locality with my students.I can make out one thing that technology is changing our relationship with nature as we know it.For many indigenous peoples, the contributions of wild edible plants go well beyond nourishment; they are often also used as  part of culture,medicines etc. Historical and contemporary processes of land grabbing, monoculture of crops, acculturation, and lifestyle changes may erode the transmission of plant knowledge to new generations. However, younger generations are not learning about ecofriendly concepts of living,  what their ancestors had. The lack of access to forests,ignorance the formal school regime,modern generation parental care are the main factors interrupting the transmission of knowledge.Yes this is the high time for you to take up green challenges.Teach your kids to recognise local plants,birds and insects.

THIS IS NOT AN ARGUMENT OR HYPOTHESIS.Hygenic Organic life style is part of Indian culture.But please avoid high use of pesticides,insectides to be obessed with artificial sanitized environment just to maintain your lawn grass or to stop ants marathon.

As part of this Challenge/need/passion for Coexistance with nature, I here by introducing a recipe of Tambuli.Thambuli is a type of Raita eaten in the Indian state of Karnataka. Thambuli, being a curd based cuisine, is consumed with rice. Tambuli is derived from Kannada word thampu. (ತಂಪು+ಹುಳಿ ---->ತಂಬುಳಿ).I have added tender leaves of seven wild species for this - Holigarna (Causes Allergic reactions in some therfore dont collect),Mango,Cashew,Syzigium,Guava,Ixora,Careya.

handfull of leaves boiled with water.After 5 minutes grind boiled leaves with a cup of grated coconut .Add a cup of buttermilk+pinch of salt and boil.For tempering use Garlic.

Collection of wild edibles
Thambuli to beat the heat

Sunday, June 23, 2019


«©üõÀt£À ªÉÆzÀ® ¸ÀA±ÉÆMzsÀ£É:
£ÀªÀÄUÉ ªÀÄUÀ ºÀÄnÖzÁUÀ DvÀ£À ºÉ¸ÀgÀÄ aPÀÌzÁV ¸ÀgÀ¼ÀªÁVgÀ° JAzÀÄ "«¨sÀÄ" CAvÀ ªÉÆzÀ® £ÁªÀÄ¥ÀzÀ ªÁVAiÀÄÆ,JgÀqÀ£ÉAiÀÄ G¥À£ÁªÀĪÁV "±ÀªÀÄð" JAzÀÆ PÀgÉzɪÀÅ.DzÀgÉ PÉÆAqÁlzÀ ªÀiÁtÂAiÀÄ£ÀÄß £ÁªÉà §Æ§,©§Ä CAvÀ gÁUÀ J¼ÉzÀÄ PÀgÉzÀgÉ,£ÉgÉ PÀgÉ AiÀÄ CdÓA¢gÀÄ "«©üõÀt"£ÉAzÀÄ PÀgÉAiÀÄvÉÆqÀVzÀÝgÀÄ.¸ÀºÀ¥ÁpUÀ½UÉ "¨sÉÆµÀt" £ÁzÀ EªÀ, 6gÀgÀ ¥ÉÆÃgÀÀ £À£Àß eÉÆvÉ  ¸ÀA±ÉÆNzsÀ£ÉUÉ,¸ÀªÉÄäüÀ£ÀPÉÌ CAvÀ ºÉÆÃV EªÀvÀÄÛ C®àªÁV Qæ«Ä-QÃlUÀ¼À£ÀÆß, PÉ® ¸À¸ÀåUÀ¼À£ÀÆß,¥ÁætÂUÀ¼À£ÀÆß UÀÄgÀÄw¸À§®è.EªÀ£À F D¸ÀQÛ ¨É¼ÉzÀÄ ºÉªÀÄägÀªÁUÀ° ªÀÄÄAzÉ ¥Àj¸ÀgÀ ¸ÀAgÀPÀìPÀ£ÁUÀ° JAzÉà D²¸ÀĪÀ £ÁtÄ(£Á-£Á£ÀÄ,tÄ-ªÉÃtÄ).EªÀvÀÄÛ £À£Àß ªÀÄUÀ ªÀiÁrzÀ ªÉÆzÀ® ¥Àj¸ÀgÀzÀ ¸ÀA±ÉÆNzsÀ£É AiÉÄà F ¯ÉÃR£ÀzÀ DvÀä.
ªÀļÉUÁ® DgÀA¨sÀªÁVzÉ.E£ÉßãÀÄ J¯Éè®Æè fêÀ PÀ¼É.¤ªÀÄä ªÀÄ£É ¸ÀÄvÀÛ EgÀĪÀ fêÀ ¸ÀAZÁjUÀ¼À£ÀÄß UÀªÀĤ¹.»wÛ¯Éà ¨ÉÃqÀªÉAzÀÄ vÀ£Àß ºÉ¸ÀjUÉ ¸ÉÃjzÀ £É®PÉÌ (PÀPÀ̸ÀzÀ UÀÄAr MAzÀÄ ©lÄÖ) PÀ®ÄèUÁgÉ ºÁQ¹zÀgÀÆ ªÀļÉUÁ®zÀ°è ºÀoÀPÉÌ ©zÀÝAvÉ £ÉʸÁV ¨É¼ÉAiÀÄĪÀ ¥Áa ¸À¸ÀåUÀ¼À ¯ÉÆÃPÀªÉà MAzÀÄ ¨ÉgÀUÀÄ.£À£Àß ZÀÆnAiÀÄİ ¸ÁzsÀ£ÀzÉÆA¢UÉ PÀAqÀzÀÝ£Éß®è QèQ̸ÀĪÀ ªÀÄUÀgÁAiÀÄ,EAzÀÄ £À£Àß ¸ÀªÁ°£ÀAvÉ MAzÀÄ ¥ÉÆæeÉPïÖ ªÀiÁrAiÉÄà ©lÖ.



MAzÀÄ ¥ÀĸÀÛPÀzÀ°è vÀ£ÀUÉ UÉÆwÛzÀÝ QÃlUÀ¼À£ÀÄß ºÉ¸Àj¹zÀ.£À£Àß ¸ÀºÁAiÀĪÀÇ ¸Àé®à ªÀÄnÖUÉ EvÀÄÛ.EªÀvÀÄÛ MAzÀÄ UÀAmÉ ºÉÆvÀÄÛ ªÀiÁvÀæ ªÀiÁrzÀ F UÀtw PÁAiÀÄðPÀæªÀÄzÀ°è £ÀªÀÄä£É ¸ÀÄvÀÛ E£ÀÄß PÀÆqÀ £Á£ÉAzÀÆ £ÉÆÃrgÀzÀ fëUÀ¼À ¥ÀvÉÛ ªÀiÁrzɪÀÅ.¥Àj¸ÀgÀzÀ ¥ÁoÀ §UÉzÀµÀÄÖ gÉÆÃZÀPÀ...DzÀÝjAzÀ E°èAzÀ ¸ÀÄgÀĪÁUÀ°zÉ £À«Ääà ªÀÄ£É ¥ÁoÀ...¤ÃªÀÅ PÀÆqÁ ¨ÁVAiÀiÁV...
Millipedes are a group of arthropods that are characterised by having two pairs of jointed legs on most body segments; they are known scientifically as the class Diplopoda.
kannada: chorate

 



Saturday, March 5, 2016

ಚಿನ್ನದ ಅಕ್ಕಿ - Golden rice

                                               
ಅಮೆರಿಕದ ಯು.ಎಸ್.ಪಿ.ಟಿ.ಒ ಸಂಸ್ಥೆಯು ಇತ್ತೀಚೆಗೆ ಚಿನ್ನದ ಅಕ್ಕಿ ಅಂದರೆ ""ಗೋಲ್ಡನ್ ರೈಸ್" ಎಂಬ ಯೋಜನೆಗೆ ಒಂದು ಮಾನವೀತೆಯ ಪ್ರಶಸ್ತಿ (ಪೇಟೆಂಟ್ಸ್ ಫೊರ್ ಹ್ಯುಮಾನಿಟಿ") ಯನ್ನು ನೀಡಿತು.ಇದು ಹಸಿವನ್ನು ನೀಗಿಸುವ ಸಂಶೋಧನೆಗೆ ಸಂದ ಪುರಸ್ಕಾರ.ಅಂತರ ರಾಷ್ಟೃ ಮಟ್ಟದಲ್ಲಿ ಬಡವರಿಗೆ ಉಪಯೋಗವಾಗುವ ವಿನೂತನ ಯೋಜನೆಗಳಿಗೆ ಈ ಪುರಸ್ಕಾರ ಸಿಗುವುದು."

ಏನಿದು ಚಿನ್ನದ ಅಕ್ಕಿ?
golden rice v/s common rice
ಡಫೋಡಿಲ್ ಎಂಬ ಹಳದಿ ಹೂವುಗಳ ಗಿಡದಂದ ತೆಗೆದ ಜೀನು(ವಂಶವಾಹಿ)ಗಳನ್ನು ಭತ್ತದ ಗಿಡದ ಜೀನುಗಳೊಂದಿಗೆ ಸೇರಿಸಿ ಪಡೆದ ತಳಿಯೇ ಚಿನ್ನದ ಅಕ್ಕಿ. ಎರ್ವಿನಿಯಾ ಬ್ಯಾಕ್ಟೀರಿಯಾ (ಮಣ್ಣಿನಲ್ಲಿರುವ ಏಕಕೋಶ ಜೀವಿ) ಅಥವಾ ಹರಿವೆ ಗಿಡ ಹೀಗೆ ಪ್ರಕೃತಿ ಯಲ್ಲಿ ದೊರೆಯುವ ಯಾವುದೇ ಜೀವ ವೇವಿಧ್ಯಗಳನ್ನು ಉಪಯೋಗಿಸಿ ಕುಲಾಂತರಿ ಗಿಡಗಳನ್ನು ಸೃಷ್ಟಿಸಬಹುದು.ಬೀಟಾ ಕೆರೋಟಿನ್ ಎಂಬ ದೇಹಕ್ಕೆ ಉಪಯುಕ್ತವಾದ ಧಾತುವನ್ನು ಹೀಗೆ ಜಗತ್ತಿನ ಮುಖ್ಯ ಬೆಳೆಯಲ್ಲಿ ಬೆಳೆದರೆ ಉಪಕಾರವಾದೀತು ಎಂಬ ಯೋಚನೆಯ ಫಲವೇ ಚಿನ್ನದ ಅಕ್ಕಿ.ಅಮೇರಿಕದ ಪ್ರಯೋಗಾಲಯದಲ್ಲಿ ಹುಟ್ಟಿ ನಿಧಾನವಾಗಿ ಭಾರತದಲ್ಲಿ ಬೇರೂರಲು ಹೊರಟಿರುವ ಈ ತಳಿಯ ಬಗ್ಗೆ ಎಲ್ಲರಿಗೂ ಗೊತ್ತಿರಲೇಬೇಕಾದ ಅವಶ್ಯಕತೆಯಿದೆ.

ಉಪಯೋಗಗಳು:
ವಿಟಮಿನ್ ಎ ಯನ್ನು ಹೇರಳವಾಗಿ ಎಲ್ಲರಿಗೂ ದೊರೆಯುವಂತೆ ಮಾಡಬಹುದು.ಇದರಂದ ನಿಶಾಂಧತೆಯನ್ನು ನಿವಾರಿಸಬಹುದು.


ದುರುಪಯೋಗಗಳು:
  • ಕ್ರೋಸ್ ಪೋಲಿನೇಶನ್ ಆಗಬಹುದು.ಅಂದರೆ ಕುಲಾ0ತರಿ ತಳಿಯು ಊರತಳಿಯೊಂದಿಗೆ ಸಂಕರಗೊಂಡು ತಳಿಗಳ   ಕಲಬೆರಕೆಯಾಗಬಹುದು.
  •  ಜೆನೆಟಿಕ್ ಇರೋಶನ್ ಅಂದರೆ ತರ-ತರದ ದೇಶಿ ತಳಿಗಳ ನಿಮರ್ೂಲನೆಯಾಗಿ ಮುಂದಿನ ಪೀಳಿಗೆಗೆ ದೋರಕುವ ಜೀವ ವೈವಿಧ್ಯತೆ ನಾಶವಾಗಬಹುದು.
- ವಿಟಮಿನ್ ದೊರಕಲು ಎಷ್ಟೊಂದು ವಿಧದ ಹಣ್ಣು,ತರಕಾರಿಗಳಿವೆ.ಅವುಗಳನ್ನು ಹೆಚ್ಚು ಬೆಳಿಸಿದರಾಯಿತು.
ಆಹಾರ ಕ್ರಾಂತಿ ಸೃಷ್ಟಿಸಿದರೆ ವಿಜ್ನಾನಿಗಳಿಗೆ ಪ್ರಶಸ್ತಿಗಳ ಸುರಿಮಳೆಯಾದೀತು...ಉದ್ದೇಶವು ಒಳ್ಳೆಯದಿರಬಹುದು..ಆದರೆ ಪ್ರಕೃತಿಯ ಮಡಿಲನ್ನು ಬರಿದು ಮಾಡಿದರೆ ಮತ್ತೆ ಮರುಸೃಷ್ಟಿಸಲು ದೇಸೀ ತಳಿ ಸಂಪತ್ತು ನಮ್ಮ ಜೊತೆಗಿರುವುದೇ?

Sunday, February 28, 2016

ಸಂಶೋಧನೆಯ ಹೆಜ್ಜೆಗಳು...ಅಂಬೆಗಾಲು-2

2010 ಮಾಚರ್್ ತಿಂಗಳಿನಲ್ಲಿ  ಸ್ನಾತಕೋತ್ತರ ಪರೀಕ್ಷೆಗಳು ಮುಗಿದ ಹೊತ್ತಿಗೆ ನನಗೊಂದು ಬೇಸಿಗೆ ಸಂಶೋಧನೆಯ ಚೆಂದದ ಅವಕಾಶ ದೊರಕಿತು. ಡಾ.ರಾಘವೇಂದ್ರ ರಾವ್ ಎಂಬ ಸಸ್ಯ ತಜ್ಞರ ಬಳಿ ಸಸ್ಯ ವರ್ಗಇಕರಣ ಶಾಸ್ತೃ ಕಲಿಯುವ ಸುವರ್ಣ ಅವಕಾಶ. ಬೆಂಗಳೂರಿನಲ್ಲಿರುವ ಭಾರತೀಯ ಓéಷಧ ಮತ್ತು ಪರಿಮಳ ಸಸ್ಯಗಳ ಸಂಶೋಧನಾ ಸಂಸ್ಥೆಯಲ್ಲಿ 2 ತಿಂಗಳು ಕಲಿತದ್ದೇ ಹೆಚ್ಚು.  ಆ ಚಿಕ್ಕ ಚೊಕ್ಕ ಸಮಯಾವಕಾಶವೇ ನಾನು ಸಂಶೋಧನೆಯಲ್ಲಿ ಬೇರೂರಲು ಸಹಾಯ ಮಾಡಿದು.್ದ

Dr.R.R Rao
ಮೊದಲ ದಿನ 5-6-2010 ರಂದು 10.30 ಕ್ಕೆ ನಾನು ಆ ವಿಜ್ಷಾನಿಯನ್ನು ಭೇಟಿಯಾಗಲು ಹೋದಾಗ ತುಂತುರು ಮಳೆ ಸುರಿಯುತ್ತಿತ್ತು. ಮೂಲೆ ಛೇಂಬರಿನಿಂದ ದೊಡ್ಡ ಸ್ವರವೊಂದು ಹಿಂದಿ,ಕನ್ನಡ,ಆಂಗ್ಲ ಭಾಷೆಗಳ ಮಿಶ್ರಣದಲ್ಲಿ ಯಾರದ್ದೋ ಬೆವರಿಳಿಸುತ್ತಿದ್ದುದು ಗೊತ್ತಾಗುತ್ತಿತ್ತು. ಬಾಗಿಲ ಬಳಿ ಹೋಗಿ ವಿಚಾರಿಸಿದರೆ ಅವರೇ ನನ್ನ ಗೈಡ್. ಅವಕಾಶ ದೊರಕಿದ್ದೇ ನನಗೆ ಗತ್ತು ಬಂದಿತ್ತು.ಆದರೆ ಇಲ್ಲಿ ನಾನೇನೂ ಅಲ್ಲ ಅಂತ ಕೆಲವೇ ನಿಮಿಷದಲ್ಲಿ ಮನದಟ್ಟಾಗಿತ್ತು. "ನರಪೇತಲನಂತೆ ಇದ್ದಿ ಏನು ಮಾಡೋದು ಇಲ್ಲಿ"...... ಏನೋ ಬರೆಯುತ್ತಾ, ತನ್ನ ಪಿ.ಎ ಗೆ ಏನೋ ಗದರುತ್ತಾ ರಾವ್ ಸರ್ ಓರೆಗಣ್ಣಲ್ಲಿ ನನ್ನನ್ನೂ ಗಮನಿಸುತ್ತಿದುದು ನನಗೆ ಗೊತ್ತಾಗಿರಲಿಲ್ಲ. ಅಕ್ಕ ತೆಗೆಸಿಕೊಟ್ಟಿದ್ದ ಆ ಹೊಸ ಚೂಡಿದಾರದಲ್ಲೂ ನಾನು ಜೋಕರ್ ಥರ ಕಾಣಿಸುತ್ತಿದ್ದೆ!. "ಸಣ್ಣ ಕೊಠಡಿಯಿದು ನನ್ನ ಎದುರುಗಡೆ ಕುಚರ್ಿಯಲ್ಲಿ ಕೂರು" ಅಂಥ ಹೇಳಿ ಅಷ್ಟೇ ವೇಗದಲ್ಲಿ ನಾನು ಮಾಡಬೇಕಾದ ಕೆಲಸ,ಬೇಕಾದ ಶಿಸ್ತು ಎಲ್ಲವನ್ನೂ ಹೇಳಿ ಸರ ಸರ ಹೊರ ಹೋಗಿ ಬರೇ 5 ನಿಮಿಷ ದಲ್ಲಿ 10 ಗಿಡಗಳೊಂದಿಗೆ ಮರಳಿ ಬಂದು 5 ನಿಮಿಷದಲ್ಲಿ ನಾನು ಆ ಗಿಡಗಳ ಗುಣ ವಿಷೇಶಗಳನ್ನು ಹೇಳಬೇಕಂಬ ಆಜ್ಞೆ. ದಡ ಬಡ ಹೇಳಿ ನನಗೆ ಗೊತ್ತಿದ್ದ ಗಿಮಿಕ್ ಗಳನ್ನೆಲ್ಲಾ ಪ್ರಯೋಗಿಸಿದೆ.ಮತ್ತೆ ಅವರು ಆ ದಿನ ನನ್ನ ಮಾತನಾಡಿಸಲೇ ಇಲ್ಲ. ಸಂಜೆ 5ಕ್ಕೆ ನಾನು ಗೀಚಿದ್ದರ  ನೋಡಿದ ಸರ್ ಹೇಳಿದ್ದು. "ಅಛ್ಛ..........ಛಲೇಗಾ.. ಕಲ್ ಆಓ...ಯು ವಿಲ್ ಡು ಸಂಮ್ಥಿಂಗ್.. ಐ ಯಾಮ್ ಶುವರ್". ಮರುದಿನ ದಿಂದ ನಾನು ಹೆಚ್ಚು ಶ್ರದ್ಧೆ ವಹಿಸಿ ಕೆಲಸ ಮಾಡತೊಡಗಿದ್ದೆ. "ಒಲಿಯಾ ಡೈಯೊಕಾ" ಎಂಬ ಮಲ್ಲಿಗೆ ಕುಟುಂಬದ ಮರ ಪ್ರಭೇದವೊಂದು ನನಗೆ ಬಹಳ ಕೆಲಸ ಹಿಡಿಸಿತ್ತು. 2 ಕೇಸರ, ವಿರುಧ್ಧ ಎಲೆಗಳು ಇಷ್ಟೇ ಸಾಕು ಇದರ ಜಾಡು ಹಿಡಿಯಲು.ಸರ್ ಹೇಳಿ ಕೊಟ್ಟ ಇಂತಹ ಸೂತ್ರಗಳೆೆ ಸಸ್ಯಗಳನ್ನು ಹೆಸರಿಸಲು ನನಗೆ ಇಂದು ಸಹಕಾರಿ. ಆಪರೂಪದ ಈ ಕಲೆಯನ್ನು ನನಗೆ 2 ತಿಂಗಳಲ್ಲಿ ಧಾರೆ ಎರೆದ ಈ ಜ್ಞಾನಿಯನ್ನು ಎಂದೂ ಮರೆಯಲಾಗದು.

OLEA DIOICA Roxb. In flower

OLEA DIOICA In fruit

Saturday, February 13, 2016

ಸಂಶೋಧನೆಯ ಹೆಜ್ಜೆಗಳು...ಅಂಬೆಗಾಲು-1

ನನ್ನ ಬದುಕಿಗೆ ಹೊಸ ಆಯಾಮವನ್ನು ಕೊಟದ್ದ್ಟು ಸಂಶೋದನೆ ಅಂದರೆ ಪಿ.ಹಚ್.ಡಿ ರಿಸರ್ಚ್.ಇಲ್ಲಿ ನಾನು ಬಹಳ ಕಲಿತದ್ದಿದೆ.ನನ್ನನ್ನು ತಿದ್ದಿ,ಬದುಕಲು ಕಲಿಸುತ್ತಿರುವುದು ಇದೇ ಸಂ-ಶೋಧನೆ.
ಸಂಶೋಧನೆ ಮಾಡ ಬಯಸುವ ಪ್ರತಿಯೊಬ್ಬರಿಗೂ ಈ ಬರಹಗಳಿಂದ ಉಪಕಾರವಾಗದೀತು.ಸಂಶೋಧಕ/ಕಿ ಯರು ಬದುಕನ್ನ ಎಷ್ಟರ ಮಟ್ಟಿಗೆ ಪ್ರೀತಿಸಬಲ್ಲರು ಅಥವಾ ದೃಷ್ಟಿಕೋನ ಹೇಗಿರಬಹುದು, ಸಂಶೋಧನೆ ಅಂದರೆ ಏನೆಂದು ಈ ಲೇಖನಗಳಿಂದ ತಿಳಿಸುವ ಪ್ರಯತ್ನವಿದು.ಪ್ರತಿಯೊಬ್ಬ ಮಗುವಿನಲ್ಲೂ ಹುಟ್ಟುವ ಸಂಶೋಧಕ ವರ್ಷಗಳು ಉರುಳಿದಂತೆ ಸಂಶೊಧನೆ ಅಳಿದು ಸಂದೇಹಗಳೆ ತುಂಬಿರುತ್ತವೆ.ಇಂದಿನ ಸ್ಪರ್ಧಾತ್ಮಕ ಜಗತ್ತು ಎಷ್ಟು ಗೊಂದಲಗಳನ್ನು ಸೃಷ್ಟಿಸಿದೆಯೋ ಅಷ್ಟೆ ಅವಕಾಶಗಳನ್ನೂ ನೀಡಿದೆ. 99 ಶೇಕಡ ಪರಿಶ್ರಮ ಪಟ್ಟರೆ 1 ಶೇಕಡ ಅದೃಷ್ಟ ಒಟ್ಟಿಗಿರುತ್ತದೆ ಆದರೆ ಗುರಿ ಸ್ಪಷ್ಟವಾಗಿರಬೇಕು.ಹೆಣ್ಣಿಗೆ ಮಿತಿಗಳನ್ನು ಮೀರದೆ ಸಾಧಿಸುವಷ್ಟೆ ಅವಕಾಶ ಆದರೆ ಗಂಡಿಗೆ (ಹೆಚ್ಚಾಗಿ) ಅಂತಹ ಗೊಂದಲ ಬೇಕಿಲ್ಲ.ನನ್ನಲ್ಲಿ ಏನದರೂ ಸಾಧಿಸು ಅನ್ನುವ ಛಲ ಹುಟ್ಟಿಸಿದ್ದು ನನ್ನ ತಪ್ಪುಗಳು, ಸೋಲುಗಳು, ದೌರ್ಬಲ್ಯಗಳು ಹಾಗೂ ನನಗಾದ ಅವಮಾನಗಳು.
ಇಂದು ನಾನು ಸಸ್ಯ ಸಂಶೋಧನಾ ಕ್ಷೇತ್ರ ದಲ್ಲಿ ಬೇರೂರುವ ಭರವಸೆಯಲ್ಲಿದ್ದೇನೆ.
ಕೆಲವೊಮ್ಮೆ ನಗಿಸುವ,ಅಳಿಸುವ ಅಥವಾ ಹುಚ್ಚು ಹಿಡಿಸುವ "ಸಂಶೋಧನ' ಮಾಡಿದವರಿಗೆ ಗೊತ್ತು ಅದರ ಗತ್ತು. ನಾನು ಸಸ್ಯ ಶಾಸ್ತ್ರ ವರ್ಗೀಕರಣದಲ್ಲಿ ಸಂಶೋಧನೆಯನ್ನು ಮಾಡುತ್ತಿದ್ದೇನೆ. ನವಿರಾದ ಹಾಸ್ಯ ಸನ್ನಿವೇಶಗಳು, ಗಂಭೀರ ವಿಷಯಗಳು ಕೂಡಾ ಹಾದು ಹೋಗುವ ನನ್ನೀ ನೆಚ್ಚಿನ ಹಾದಿಯನ್ನು ನೀವೂ ತಿಳಿಯಿರಿ.


Tuesday, April 2, 2013

ಮುಪ್ಪು ಮತ್ತು ಟೀಲೋಮಿಯರ್ ಟೊಪ್ಪಿ


ಶೈಶವ,ಬಾಲ್ಯ,ತಾರುಣ್ಯ,ವೃಧ್ಧಾಪ್ಯ ಎಂಬುದು ಬದುಕಿನ ಹಂತಗಳು.ಆದರೆ ವೃಧ್ಧಾಪ್ಯ ವನ್ನು ಸಂತಸದಿಂದ ಸ್ವೀಕರಿಸುವ ಮಂದಿ ಬೆರಳೆಣಿಕೆ ಯಷ್ಟಿರಬಹೂದೇನೋ!. ಏನೆಲ್ಲಾ ಕಸರತ್ತುಗಳನ್ನು ಮಾಡಿಯಾದರೂ ಸುಕ್ಕುಗಟ್ಟುತ್ತಿರುವ ಚರ್ಮವನ್ನು ನಯವಾಗಿಸಿ ಮುಪ್ಪನ್ನು ಮರೆಮಾಚುವ ಚಲನಚಿತ್ರತಾರೆಯರು,ರೂಪದರ್ಶಿಗಳು ಈಗ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಬೊಟೋಕ್ಸ್‌ ಚುಚ್ಚುಮದ್ದನ್ನು ಕಣ್ಣಿನ ಕಪ್ಪು ವರ್ತುಲ ಚರ್ಮಕ್ಕೋ ಅಥವಾ ಹಣೆ ಭಾಗಕ್ಕೆ ಚುಚ್ಚುವ ಮೂಲಕ ನೆರಿಗೆ ಮೂಡಿದ ಚರ್ಮವನ್ನು ತಾರುಣ್ಯ ಹಾಗೂ ಕಾಂತಿಯಿಂದ ಕಾಣುವಂತೆ ಮಾಡಲಾಗುತ್ತದೆ.

Chlostridium botulinum bacter
 ಇಲ್ಲಿ ಬೊಟೋಕ್ಸ್ ಮದ್ದು ಹೇಗೆ ತಯಾರಿಸಲಾಗುತ್ತದೆ ಎಂದರೆ, ಎಂಬ ಬ್ಯಾಕ್ಟೀರಿಯಾದಿಂದ ತೆಗೆದ(ನ್ಯೂರೋಟಾಕ್ಸಿನ್‌))))೦) ಸತ್ವವನ್ನು ಹದಮಾಡಿ ಬಹಳ ಅಲ್ಪ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ.ಈ ಮದ್ದು ಮುಖ ಚರ್ಮದ ನರಕೋಶಗಳ ತುದಿಯಲ್ಲಿರುವ ಅಸಿಟೈಲ್ಕೋಲಿನ್ ಎಂಬ ದ್ರವಕ್ಕೆ ಸೇರಿಕೊಂಡು ಒಂದು ನರಕೋಶ ದಿಂದ ಇನ್ನೊಂದು ನರ ಕೋಶಕ್ಕೆ ರವಾನೆಯಗುವ ಸಂದೇಶಗಳನ್ನು ತಡೆಹಿಡಿಯುತ್ತದೆ.ಹೀಗೆ ಮಿದುಳಿನಿಂದ ಸಾಗಿಬಂದ  ಯಾವುದೇ ಮಾಹಿತಿ ಲಭ್ಯವಾಗದ ಹಿನ್ನಲೆಯಲ್ಲಿ ಮುಖದ ನರಗಳು ಸಮ್ಮನಿದ್ದುಬಿಡುತ್ತವೆ.ಇಲ್ಲಿಗೆ ಚರ್ಮದ ಮುಪ್ಪಾಗುವಿಕೆ ಎಂಬ ಪ್ರಕ್ರಿಯೆಗೆ  ತಾತ್ಕಾಲಿಕವಾಗಿ  ತಡೆಹಿಡಿದಂತಾಯಿತು.ಬೊಟೋಕ್ಸ್ ಮದ್ದು ವಿಪರೀತ ತಲೆನೋವಿಗೆ(ಮೈಗ್ರೇನ್) ಕೂಡಾ ಉಪಯೋಗಿಸುತ್ತಾರೆ.ಆದರೆ ಚರ್ಮದ ಅಂದಕ್ಕಾಗಿ ಇದರ ಬಳಕೆ ಹೆಚ್ಚಾದರೆ ತಂಬಾ ಅಡ್ಡಪರಿಣಾಮಗಳೂ ಇವೆ.


       ಹೀಗೆ, ಎಷ್ಟೇ ಹೆಣಗಿದರೂ ಮುಪ್ಪು ಎನ್ನುವುದು ಯಾರನ್ನೂ ಬಿಡದೆ ಎಲ್ಲರಿಗೂ ಬಂದೇ ಬರುವುದಕ್ಕೆ ಒಂದು ಮೂಲ ಕಾರಣವಿರಬೇಕು ಅಲ್ಲವೇ? ಇಲ್ಲಿ ಬಹಳ ಸಂಕೀರ್ಣವಾಗಿ ನಮ್ಮ ಜೀನುಗಳ ಮಟ್ಟಕ್ಕಿಳಿದು ವಿವರಣೆ ನೀಡಬೇಕಾಗಿದೆ.ಆದರೂ ವಿಷಯವನ್ನು ಸರಳವಾಗಿಸಲು ಪ್ರಯತ್ನಿಸುತ್ತೇನೆ.

   ತಾಯಿಯಿಂದ ಮತ್ತು  ತಂದೆಯಿಂದ ದೊರೆತ ತಲಾ 23 ಕ್ರೋಮೋಸೋಮುಗಳು  ಸೇರಿ 46 ಕ್ರೋಮೋಸೋಮುಗಳು ಒಂದು ಆರೋಗ್ಯ ಮಗುವಿನಲ್ಲಿ ಇರಬೇಕು.ಅನುವಂಶಿಕ ಗುಣಗಳು ಹಾಗೂ ವಿಭಿನ್ನತೆಗೆ ಕಾರಣವಾಗುವ ಈ ಅತಿ ಸೂಕ್ಷ್ಮರೂಪದ ಕ್ರೋಮೋಸೋಮುಗಳ ತುದಿಗಳಲ್ಲಿರುವ ಟೀಲೋಮಿಯರ್ ಟೊಪ್ಪಿಗಳೇ ಪ್ರಾಯವಗುವಿಕೆಯನ್ನು ಸೂಚಿಸುವ ಮೂಲ ಪ್ರತಿನಿಧಿಗಳು. ಈ ಟೊಪ್ಪಿಗಳ ಕೆಲಸವೆಂದರೆ ಕ್ರೋಮೋಸೋಮುಗಳು ಒಂದಕ್ಕೊಂದು ಅಂಟುವುದನ್ನ ತಡೆಯುವುದು ಮತ್ತು ಕ್ರೋಮೋಸೋಮುಗಳ ಶಿಥಿಲವಾಗುವಿಕೆಯನ್ನು ತಡೆಯುವುದು.

chromosomes with telomere
ಕಾಲ ಸರಿದಂತೆ ಟೀಲೋಮಿಯರ್ ಟೊಪ್ಪಿಗಳು ಕೂಡಾ ಶಿಥಿಲವಾಗಲು ತೊಡಗಿದಂತೆ (ನಮ್ಮ ಮೂಲ ಘಟಕವಾದ ಕ್ರೋಮೋಸೋಮುಗಳು ನಿಧಾನವಾಗಿ ಸವೆದಂತೆ) ನಮ್ಮ ಶರೀರದಲೂ ್ಲಬದಲಾವಣೆ ಯಾಗುತ್ತಿರುತ್ತದೆ. ಕೋಶ ವಿಭಜನೆ,ಕೋಶಗಳ ಸಾಯುವಿಕೆ ಇತ್ಯಾದಿ.
  ಮನುಷ್ಯರು  ಸರಾಸರಿ 70 ರಿಂದ 80 ವರ್ಷ ಬದುಕಬಹುದು.ಹಾಗಾಗಿ ಇಲ್ಲಿ ಹೇಳಿದ ಪ್ರಕ್ರಿಯೆ ಕೂಡಾ ತುಂಬಾ ನಿಧಾನ ಗತಿಯಲ್ಲಿಯೇ ಇರುತ್ತದೆ.
 ವಿಜ್ಞಾನಿಗಳು ಇದರ ಬಗ್ಗೆ ಅಧ್ಯಯನ ನಡೆಸುತ್ತಲೇ ಇದ್ದಾರೆ.ಆದರೂ ಪ್ರಕೃತಿಯ ನಿಯಮಕ್ಕೆ ವಿರುಧ್ಧವಾಗಿ ನಡೆಯಲು ನಮಗೆ ಎಂದಿಗೂ ಸಾಧ್ಯವಾಗದು

Monday, December 24, 2012

"ಸ್ಕಿಝೋಫ್ರೇನಿಯಾ" ಎಂಬ ಮಾನಸಿಕ ಕಾನ್ಸರ್




"ಸ್ಕಿಝೋಫ್ರೇನಿಯಾ" ಎಂಬ ಶಬ್ಧವೇ ಒಂಥರಾ ಇದೆ ಅಲ್ಲವೇ.ನೂರು ಜನರಲ್ಲಿ ಒಬ್ಬನಿಗೆ ಕಾಡುವ ಕಾನ್ಸರ್ ಇದು.ಮನಸ್ಸಿಗೆ ಸಂಬಂದಿಸಿದ್ದು ಅಂದರೆ ಮಾನಸಿಕ ಖಾಯಿಲೆ.ಪೇಲವ ಮುಖ ಹೊತ್ತು ತನ್ನೊಳಗೇ ಸಮಾಲೋಚನೆ ನಡೆಸುತ್ತಾ ವಿಚಿತ್ರ ಭಂಗಿಯಲ್ಲಿ ಕಾಣಲ್ಪಡುವ ಇವರನ್ನು ಸಮಾಜವು ನೋಡುವ ರೀತಿಯೇ ಬೇರೆ.ಶವ ಸಂಸ್ಕಾರದ ಸಮಯದಲ್ಲಿ ನೆರೆದವರೆಲ್ಲಾ ಗಂಭೀರವಾಗಿದ್ದರೆ ಈತ ಮಾತ್ರ ಅದು ಯಾವುದೋ ಹಾಸ್ಯ ಸನ್ನಿವೇಶದಂತೆ ನಗುತ್ತಿರುತ್ತಾನೆ.



ಸಣ್ಣ ಅಪಹಾಸ್ಯವನ್ನೂ ಸಹಿಸದೆ ಮಾನಸಿಕವಾಗಿ ಕುಗ್ಗುತ್ತಾ ಶಾರೀರಿಕ ಖಾಯಿಲೆಗಳೂ ಹಿಡಿದು ವ್ಯಕ್ತಿಯೊಬ್ಬ ಹುಚ್ಚನಾಗಿ ಬಿಡುವ ಈ ಅವಸ್ಥೆಗೆ ನಿಜವಾದ ಕಾರಣವೇ ಮೆದುಳಲ್ಲಿರುವ ನ್ಯೂರೋನುಗಳ ಶಿಥಿಲವಾಗುವಿಕೆ.ಇಲ್ಲಿ ಸಮಾಜದೊಂದಿಗೆ ಬೆರೆಯುವ ಹಾಗೂ ವಿಶ್ಲೇಷಣೆಗೆ ಸಂಬಂದಿಸಿ ಕೆಲಸ ಮಾಡುವ ಕೋಶಗಳು ಸಾಯತೊಡಗುತ್ತವೆ.
ನೋಡುಗರಿಗೆ ತೀರಾ ರೇಜಿಗೆ ಹುಟ್ಟಿಸುವ ಇಂತಹ ಮಂದಿ ಕಾಣಸಿಗುವುದು ಈಗ ಸಾಮಾನ್ಯ.ತಮ್ಮದಲ್ಲದ ತಪ್ಪಿಗೆ ವಂಶಪಾರಂಪರ್ಯವಾಗಿ (ಜೀನುಗಳ ಮೂಲಕ) ಹಿರಿಯರ ಬಳುವಳಿ ಉಡುಗೊರೆ ಇದು.ಇನ್ನು ಕೆಲವರಲ್ಲಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲಾಗದೆ ಅಥವಾ ನಿರಂತರವಾಗಿ ಬಾಲ್ಯದಲ್ಲಿ ಅವಮಾನಕ್ಕೊಳಗಾದರೆ ಕಾಡುವ ಹತಾಶೆಯ ಪರಿಣಾಮ.ರೋಗವನ್ನು ಆರಂಭದ ಹಂತದಲ್ಲಿ ಯೋಗ,ದ್ಯಾನಗಳಿಂದ ತಡೆಯಬಹುದು.
ಆದರೆ ಒಂದು ಹಂತ ದಾಟಿದ್ದರೆ ನಿರಂತರ ಚಿಕಿತ್ಸೆಯ ಅಗತ್ಯವಿದೆ.

ಈ ಖಾಯಿಲೆಯ ಬಗ್ಗೆ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೇ ಇವೆ."ಸ್ಕಿಝೋಫ್ರೇನಿಯಾ" ಎಂಬ ವೈಜ್ಞಾನಿಕ ಮಾಸ ಪತ್ರಿಕೆಯೇ ಮಾರುಕಟ್ಟೆಯಲ್ಲಿದೆ.
ಮಾತ್ರ ಈ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.ವಿಪಯರ್ಾಸವೆಂದರೆ ರೋಗಿಯು ತನಗಿರುವ ರೋಗದ ಅರಿವೆಯಿಲ್ಲದೆ ಅಲೆದಾಡುತ್ತಿದ್ದರೆ,ಪ್ರಜ್ಞಾವಂತ ನಾಗರೀಕರ ಸಮಾಜ ಮಾತ್ರ ಇಂಥಹ ನತದೃಷ್ಟರನ್ನು ಮರುಳನೆಂದೋ ಹುಚ್ಚನೆಂದೋ ಜರೆಯುತ್ತಾ ಮುಸಿ ಮುಸಿ ನಗುತ್ತಿದೆ.

Saturday, December 15, 2012

ಸಸ್ಯಗಳ ಬೆಳವಣಿಗೆಯಲ್ಲಿ ಹಾರ್ಮೋನುಗಳ ಪಾತ್ರ


ಸಸ್ಯಗಳ ಬೆಳವಣಿಗೆಯಲ್ಲಿ ಹಾರ್ಮೋನುಗಳ ಪಾತ್ರ ತುಂಬಾ ಮುಖ್ಯವಾಗಿದೆ.ಪ್ರತಿಯೊಂದು ಬಗೆಯ ಮರ,ಬಳ್ಳಿ ಗಳಲ್ಲೂ ಬಹಳ ನಿರ್ದಿಷ್ಟ ಹಾರ್ಮೋನುಗಳಿವೆ.ಸುಮಾರು ವರ್ಷಗಳ ಹಿಂದಿನಿಂದಲೇ ಇವುಗಳ ಕುರಿತು ಸಂಶೋಧನೆ ನಡೆಯುತ್ತಾ ಬಂದಿದೆ.
ಜಪಾನಿನ ಹಳ್ಳಿಯೊಂದರಲ್ಲಿ ಬೆಳೆದ ಭತ್ತದ ಗಿಡಗಳೆಲ್ಲಾ ತುಂಬಾ ಉದ್ದವಾಗಿ ಬೆಳೆದು ಬಗ್ಗಿ ಮುರಿಯುತ್ತಿದ್ದವಂತೆ.ಇದರ ಕಾರಣವನ್ನು ತಿಳಿಯಲು ನಡೆಸಿದ ಪ್ರಯತ್ನವೆಲ್ಲಾ ವಿಫಲವದಾಗ ಸಂಶೋಧಕನೊಬ್ಬ ಆ ಗಿಡಗಳ ಕಾಂಡದೊಳಗೆ ಬೆಳೆಯುವ ಶಿಲೀಂದ್ರ ವೊಂದನ್ನು ಕಂಡುಹಿಡಿದ."ಜಿಬ್ಬರೆಲ್ಲಾ ಫುಜಿಕುರೋಯಿ" ಎಂದು ಕರೆಯಲ್ಪಡುವ ಈ ಶಿಲೀಂದ್ರದ ಕಿಣ್ವಗಳೇ ಗಿಡದ ಅತಿಯಾದ ಉದ್ದವಾಗುವಿಕೆಗೆ ಕಾರಣ ಎಂದು ತಿಳಿಯಲ್ಪಟ್ಟಿತು.ಈಗ ಜಿಬ್ಬರೆಲಿನ್ ಎಂಬ ಹಾರ್ಮೋನು "ಟಿಶ್ಯು ಕಲ್ಚರ್" ನಲ್ಲಿ ಬಹಳ ಉಪಯುಕ್ತವಾದ ಘಟಕವಾಗಿದೆ.

hormones induced tissue culture 
shoot proliferation by hormone induction
ಕೃಷಿಕರು ಕೆಲವು ಸಸ್ಯಗಳ ತುದಿ ಚಿಗುರನ್ನು ತುಂಡುಮಾಡಿ ಆ ಗಿಡದಲ್ಲಿ ಕವಲು ಗೆಲ್ಲುಗಳನ್ನು ಬೆಳೆಯುವಂತೆ ಮಾಡುವುದಿಲ್ಲವೇ?..ಕಾರಣವಿಷ್ಟೇ,ಗಿಡದ ಚಿಗುರುಗಳ ತುದಿಯಲ್ಲಿ "ಓಕ್ಸಿನ್" ಎಂಬ ಹಾರ್ಮೋನು ಶೇಖರವಾಗಿರುತ್ತದೆ.ಇದರ ಕಾರ್ಯವನ್ನು ಚಿಗುರು ತುಂಡು ಮಾಡಿ ತಡೆದಾಗ ಹಾರ್ಮೋನು ಗಿಡದ ಕೆಲ ಭಾಗಗಳಿಗೆ ಪಸರಿಸಿ ಅಲ್ಲಿ ಕವಲು ಚಿಗುರುಗಳನ್ನು ಬೆಳೆಯುವಂತೆ ಮಾಡುತ್ತದೆ.ಈ ಹಾರ್ಮೋನು "ಟಿಶ್ಯು ಕಲ್ಚರ್"ನ ಲ್ಲಿ ಕೋಶ ವಿಭಜನೆಗೆ ಅತ್ಯಂತ ಉಪಯುಕ್ತವಾಗಿದೆ.

ಎಲೆಯೊಂದು ಹಣ್ಣಾದಾಗ ನೆಲಕ್ಕೆ ಬೀಳಬೇಕು ತಾನೇ?..ಇಲ್ಲಿ "ಆಬ್ಸಿಸಿಕ್ ಆಸಿಡ್" ಎಂಬ ಹಾರ್ಮೋನು ಎಲೆಯ ತೊಟ್ಟಿನ ಬುಡದಲ್ಲಿ ಶೇಖರಣೆಯಾಗಿ ಅಲ್ಲಿಯ ಕೋಶಗಳನ್ನು ಶಿಥಿಲವಾಗುವಂತೆ ಮಾಡಿದಾಗ ತನ್ನಿಂತಾನೆ ಹಣ್ಣೆಲೆಯು ಗಿಡದಿಂದ ಬೇರ್ಪಡುವುದು.

ಕಾಯಿ ಹಣ್ಣಾಗಲು ಕೂಡಾ ಬೇಕಿದೆ ಹಾರ್ಮೋನು ಸಂಘ..ಕಾಯೊಳಗೆ "ಎಥೀಲಿನ್ ಹಾರ್ಮೋನು"  ಕಾರ್ಯವೆಸಗಿದಾಗ ಹಣ್ಣಾಗುವಿಕೆ ಎಂಬುದು ಸಾಧ್ಯ.
ಹಾಗೆಯೇ ಕೆಲವೊಮ್ಮೆ ಗಿಡಗಳ ಕಾಂಡಕ್ಕೆ ಪೆಟ್ಟಾಗಿದ್ದರೆ ಸ್ವಲ್ಪ ದಿನ ಬಿಟ್ಟು ನೋಡಿ, ಅಲ್ಲಿ ಕೋಶ ವಿಭಜನೆಯಾಗಿ ಗಂಟಾದ ಪೊರೆಯೊಂದು ಇರುವುದು ಗಮನಿಸಿ.ಇದು ಗಾಯ ವಾಸಿಯಾಗಲು ಹಾಗೂ ಸಸ್ಯದ ರಸ ಸೋರಿ ಹೋಗದಂತೆ ತಡೆಯಲು  ಹಾರ್ಮೋನುಗಳೇ ಪ್ರೇರೇಪಿಸಿದ ಕೋಸ ವಿಭಜನೆಯ ಕ್ರಿಯೆಯಾಗಿರುತ್ತದೆ.
ಬೆಳಕಿನೆಡೆಗೆ ರೆಂಭೆಗಳು ವಾಲುವುದಕ್ಕೂ,ಬೇರುಗಳು ನೆಲದೊಳಗೆ ಇಳಿಯುವುದಕ್ಕೂ  ಹಾರ್ಮೋನುಗಳೇ ಕಾರಣವಾಗಿದೆ.

ಹೀಗೆ ಕೆಲವು ಹಾರ್ಮೋನುಗಳು ಸಹಜವಾಗಿಯೇ ಪ್ರಕೃತಿಯಲ್ಲಿದ್ದರೆ ಕೃತಕವಾಗಿ ರಾಸಾಯನಿಕಗಳಿಂದ ತಯಾರಿಸಿದ ಹಾರ್ಮೋನುಗಳನ್ನು ಲ್ಯಾಬುಗಳಲ್ಲಿ ಬಳಸಲಾಗುತ್ತದೆ.

Tuesday, December 11, 2012

ಉಪ್ಪಿನಕಾಯಿಯನ್ನು ಕಾಡುವುದೇನು ಗೊತ್ತೇ ???


citrus fruit contaminated by penicillium
ಶಿಲೀಂದ್ರಗಳ ಬಗ್ಗೆ ನಾವು ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ.ಅಸಂಖ್ಯಾತ ಬಗೆಯ ಶಿಲೀಂದ್ರಗಳಲ್ಲಿ ಸೂಕ್ಷ್ಮಾಣುಗಳಿಂದ ಹಿಡಿದು ಹಲವು ಇಂಚುಗಳಷ್ಟು ಬೆಳೆಯುವ ತರದವುಗಳಿವೆ.ನಿತ್ಯ ಜೀವನದಲ್ಲಿ, ನಮ್ಮ ಮನೆಯೊಳಗೂ ಹಿತ್ತಿಲಲ್ಲೂ ಸಾಮಾನ್ಯವಾಗಿ ಕಾಣಸಿಗುವ ಕೆಲವು ಶಿಲೀಂದ್ರಗಳ ಬಗ್ಗೆ ತಿಳಿಯೋಣ.
 
ಉಪ್ಪಿನಕಾಯಿಯನ್ನು ಭದ್ರವಾಗಿ ಭರಣಿಗಳಲ್ಲಿ ವರ್ಷಾನುಗಟ್ಟಲೆ ತೆಗೆದಿರಿಸುತ್ತಾರೆ.ಎಷ್ಟು ನಾಜೂಕಾಗಿ ಕಟ್ಟಿ ಇಟ್ಟರೂ ಕಪ್ಪಾದ ಪದರವೊಂದು ದ್ರಾವಣದ ಮೇಲೆ ಆವರಿಸಿಕೊಂಡಿರುತ್ತದೆ.ಹದಿ ಕಟ್ಟುವುದು ಎಂದು ಹಿಡಿ ಉಪ್ಪು ಸುರಿದು ಬಿಡುತ್ತೇವೆ.ನಿಜವಾಗಿಯೂ ಇಲ್ಲಿ ನಮ್ಮ ಕಣ್ತಪ್ಪಿಸಿ ಭರಣಿಯೊಳಗೆ ಸೇರಿರುವುದೇ "ಪೆನಿಸೀಲಿಯಮ್" ಎಂಬ ಶಿಲೀಂದ್ರ.
ನಿಂಬೆ ಹುಳಿ ಅಥವಾ ನೆಲ್ಲಿಕಾಯಿಯನ್ನು ಕೆಲಕಾಲ ಉಪಯೋಗಿಸದೇ ಇದ್ದರೆ ಹಸುರು ಬಣ್ಣದ ಪೊರೆಯೊಂದು ಮೂಡಿರುವುದು ಕಾಣಬಹುದು ಇದುವೇ "ಆಸ್ಪರ್ಜಿಲ್ಲಸ್ ಫಂಗಸ್". ಮೆಣಸಿನಕಾಯಿ ಕೊಳೆತರೆ ಎಂಥಾ ದುರ್ವಾಸನೆ ಅಲ್ಲವೇ ?
ಇಲ್ಲಿ ಹೆಚ್ಚಾಗಿ ಇರುವುದು "ಫ್ಯುಸೇರಿಯಮ್".
ಇನ್ನು ಬ್ರೆಡ್, ಬಿಸ್ಕತ್ತುಗಳನ್ನು ದೀರ್ಘ ಕಾಲ ಇಟ್ಟರೆ "Rhizopus fungi" ಬೆಳೆಯಲಾರಂಬಿಸುತ್ತದೆ.
Aspergillus sp










ಶಿಲೀಂದ್ರದ ಒಂದು ಸ್ಪೋರ್(ಪ್ರತ್ಯುತ್ಪಾದನಾ) ಕಣ ಕೂಡ ಸಾಕು,ಅಸಂಖ್ಯಾತವಾಗಿ ಬೆಳೆಯಲು. ಮೈಸೀಲಿಯಮ್ ಬೇರುಗಳನ್ನು ಇಳಿ ಬಿಟ್ಟು ನಂತರ ಅವುಗಳು ಕವಲುಗಳಾಗಿ ಒಡೆದು ಪೋಷಕಾಂಶಗಳನ್ನು ಹೀರಿ ಹುಲುಸಾಗಿ ಬೆಳೆಯತೊಡಗುತ್ತದೆ. ಪ್ರತ್ಯುತ್ಪಾದನೆಗಾಗಿ ಮೂಡುವ ಕೋಶಚೀಲಗಳು ಅಸಂಖ್ಯಾತ ಸ್ಪೋರ್ ಕಣಗಳ ಹೊತ್ತು "ಫ್ರುಟಿಂಗ್ ಬಾಡಿ" ಎಂದು ಕರೆಯಲ್ಪಡುತ್ತವೆ. ಇವುಗಳು ಬಲಿತಾಗ ತನ್ನಷ್ಟಕ್ಕೇ ಒಡೆದು ಗಾಳಿಯಲ್ಲಿ ಸ್ಪೋರ್ ಕಣಗಳು ಸೇರಿ ವಾತಾವರಣದಲ್ಲಿ ಹಬ್ಬಿಕೊಂಡಿರುತ್ತವೆ.
ಕೈಯಲ್ಲೊಂದು ಪುಟ್ಟ ಕ್ಯಾಮರಾ ಹಿಡಿದು ತೋಟದಲ್ಲೊಮ್ಮೆ ಸುತ್ತಾಡಿ ಬರೋಣ. ಬಹಳ ಅಂದವಾದ ಅಣಬೆಗಳು, ಫಂಗೈಗಳು ಕಾಣಸಿಗುತ್ತವೆ. ಇವುಗಳ ಬಗ್ಗೆ ಸಸ್ಯಶಾಸ್ತೃದಲ್ಲಿ ಕಲಿಯಲಿಕ್ಕಿರುತ್ತದೆ. ಹಾಗೆ ಗೂಗಲ್
ನಲ್ಲಿ ಒಮ್ಮೆ ಜಾಲಾಡಿದರೆ ಚಿತ್ರ ಸಹಿತ ಬೇಕಾದಷ್ಟು ಮಾಹಿತಿ ಸಿಗುತ್ತದೆ.


Mycelium




wild mushroom sp

Dead mans finger fungus(xylaria)







Peziza cup fungi

shelf fungi
spores releasing from ascus

Sunday, February 19, 2012

ಅಜ್ಜನ ಗಡ್ಡದ ರೇಶಿಮೆ ಮೀಸೆ

ತೋಟದಲ್ಲಿ ತರಗೆಲೆಗಳನ್ನು ಕೂಡಿ ಹಾಕುವಾಗ ಅಜ್ಜನ ಗಡ್ಡದ ಕೋಡುಗಳ ಗೊಂಚಲು ಸಿಕ್ಕಿತ್ತು. ಬಿಸಿಲಲ್ಲಿ ಒಣಗಲು ಹಾಕಿ ಎರಡು ದಿನಗಳು ಕಳೆದಿದ್ದವು.ಕೋಡಿನಲ್ಲಿ ಉದ್ದನೆಯ ಬಿರುಕು ಬಿಟ್ಟು ಆಗಲೇ ಬೀಜ ಪ್ರಸಾರ ಆರಂಭವಾಗಿತ್ತು.ಚಪ್ಪಟೆಯಾದ ಬೀಜಗಳನ್ನು ದೂರಕ್ಕೆ ಕೊಂಡೊಯ್ಯುವ  ತೆಳುವಾದ ಬಿಳಿ ರೇಶಿಮೆ ಕೂದಲುಗಳ ಜೋಡಣೆಯು ಬಲು ವ್ಯವಸ್ಥಿತವಾಗಿ ಅಂದವಾಗಿದೆ.ನಮ್ಮ ತೇಗದ ಮರಕ್ಕೆ ದಟ್ಟವಾಗಿ ಹಬ್ಬಿದ Wattakaka volubilis(L.f.) Stapf  ಎಂಬ ಬಳ್ಳಿಯಲ್ಲಿ ಜೋತು ಬಿದ್ದ ಕೋಡುಗಳು ಗಮನ ಸೆಳೆಯತೊಡಗಿದ್ದವು.
ವಟ್ಟಕಾಕದ ಬೀಜಗಳು ಒಣಗಿದಾಗ
ಅಜ್ಜನ ಗಡ್ಡದ ಮಾಗಿದ ಕೋಡು

ಎಕ್ಕದ ಹೂ
 ಆಸ್ಕ್ಲಿಪಿಡಿಯೇಸಿ ಕುಟುಂಬಕ್ಕೆ ಸೇರಿದ ಇಂತಹ ಸಸ್ಯಗಳಲ್ಲಿ ಕೆಲವು ವಿಶೇಷ ಗುಣಗಳಿವೆ.ಆಕರ್ಷಕವಾದ  ಹೂ ಗೊಂಚಲುಗಳಲ್ಲಿ ದಪ್ಪವಾದ ದಳಗಳೇ ಎದ್ದು ಕಾಣುವುದು.ಕೊಳವೆಯಂತಹ ಶಲಾಕೆಯ ತುದಿಯಲ್ಲಿ ಶಲಾಕಾಗ್ರಕ್ಕೆ ಒತ್ತಾಗಿ ಇರುವ ಪರಾಗರೇಣುಗಳಿಗೆ ಎರಡು ಪುಟ್ಟ ರೆಕ್ಕೆಗಳಿದ್ದು ಇವುಗಳನ್ನು ಸೂಕ್ಷ್ಮ ದರ್ಶಕದಲ್ಲಿ ವೀಕ್ಷಿಸಿದರೆ ಗುರುತಿಸಬಹುದು.ಗಿಡಕ್ಕೆ ಗಾಯವಾದಲ್ಲಿ ಲೇಟೆಕ್ಸ್ ಹಾಲು ತತ್ಕ್ಷಣ ಗಾಯವನ್ನು ಒಣಗಿಸಲು ಶುರುಮಾಡುತ್ತದೆ.ಎಕ್ಕದ ಗಿಡಕ್ಕೆ ಈ ಕಾರಣಕ್ಕೇ milk weed ಎಂದು ಹೆಸರು ಬಂತು.
ಹಾಗೆಯೇ ಜೀವಂತಿ,ಮಧುನಾಶಿನಿ ಮುಂತಾದ ಗಿಡಗಳು ಇದೇ ಕುಟುಂಬ ವರ್ಗಕ್ಕೆ ಸೇರಿವೆ.
ವಿವಿಧ ರೋಗಗಳಿಗೆ ಬಳಕೆಯಾಗುವ ಆಸ್ಕ್ಲಿಪಿಡಿಯೇಸಿ ಕುಟುಂಬದ ಸಸ್ಯ ಪ್ರಭೇದಗಳು ಅಲಂಕಾರಿಕವಾಗಿ ಉಪಯೋಗಿಸಲ್ಪಡದ ಕಾರಣ ನಮ್ಮ ಗಮನಕ್ಕೆ ಬಾರದೆ ಇದ್ದರೂ ಕಡಿಮೆ ತೇವಾಂಶ ಹಾಗೂ ಪೋಷಣೆ ಇಲ್ಲದೆ ಬೆಳೆಯುವ ಸಾಮರ್ಥ್ಯವನ್ನು ಪಡೆದಿವೆ.

Tuesday, December 27, 2011

ಪುಟ್ಟ ಅರಮನೆಯೊಳಗಿದೆ ದೊಡ್ಡ ಸಂಸಾರ!

                                                    
                                                




















ನಾಗಬನದ ಕಾಂಕ್ರೀಟ್ ಕಟ್ಟೆಯೊಳಗೆ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡ ಹುತ್ತಕ್ಕೆ  ನಾಗರಪಂಚಮಿಯಂದು ಹಾಲೆರೆದು ಪೂಜಿಸುವುದು ನಮ್ಮ ವಾಡಿಕೆ.ಇಲ್ಲಿ ಸರ್ಪ ದೇವರು ನೆಲೆಸಿರುವನೆಂಬ ನಂಬಿಕೆ,ಸಂಕಲ್ಪ.ಆದರೆ ಸಾಮಾನ್ಯವಾಗಿ ತಂಪಾದ ಪರಿಸರವನ್ನು ಪ್ರೀತಿಸುವ ಹಾವುಗಳು ಜನರ ಅಬ್ಬರವಿರದಿದ್ದಲ್ಲಿ ಮಾತ್ರ ಹುತ್ತದೊಳಗೆ ಆಶ್ರಯ ಪಡೆಯುತ್ತವೆ.ಇದಕ್ಕೆ ಕಾರಣ ಆ ಮಣ್ಣಿನ ಮನೆಯೊಳಗಿನ ಹವಾ ನಿಯಂತ್ರಣ ವ್ಯವಸ್ಥೆ.ಹುತ್ತದ ಮೇಲ್ಮೈ ಚೂಪಾಗಿ ಇರುವ ಕಾರಣ ಸೂರ್ಯನ ಶಾಖವನ್ನು ಹೆಚ್ಚಾಗಿ ಹೀರದು,ಹಾಗೂ ತಂಪಾದ ಹವೆಯನ್ನು ಹಿಡಿದಿಡುವ ಮಣ್ಣ ಕಣಗಳ ಜೋಡಣೆಯೂ ಬಲು ನಾಜೂಕಾದ ಕೆಲಸ.

 ಹೀಗೆ ಮಣ್ಣನ್ನು ಹದ ಮಾಡಿ ಮನೆಕಟ್ಟುವ ಕಲೆ ತಿಳಿದಿರುವ ಗೆದ್ದಲು ಹುಳುಗಳ ಜೀವನ ಚಕ್ರವೂ ಆಸಕ್ತಿಕರ. ಇಲ್ಲಿ ರಾಣಿ,ಸೇವಕರು,ಸೈನಿಕರು ಎಲ್ಲರಿಗೂ ಕೈತುಂಬ ಕೆಲಸ.ರಾಣಿ ಹುಳಕ್ಕೆ ಮೊಟ್ಟೆ ಇಡುವುದೇ ಕೆಲಸವಾದರೆ,ಇನ್ನು ಮನೆ ಕಟ್ಟುವುದು.ಆಹಾರ ಸಂಗ್ರಹಣೆ ಎಲ್ಲಾ  ಸೇವಕರ ಕೆಲಸ.ಸೈನಿಕರ ದೇಹ ರಚನೆಯೇ ವಿಭಿನ್ನ.ತಮ್ಮ ಪ್ರಮುಖ ಎದುರಾಳಿಗಳಾದ ಇರುವೆಗಳ ಸೈನ್ಯವನ್ನು ಮಟ್ಟ ಹಾಕಲು ವಿಷದ ಜೊಲ್ಲು,ಗಟ್ಟಿ ಮುಟ್ಟಾದ ಎದುರು ದವಡೆ ಇತ್ಯಾದಿ.ಹುತ್ತದ ಬಾಗಿಲಲ್ಲೇ  ಸರದಿ ಪ್ರಕಾರ ಒತ್ತೊತ್ತಾಗಿ ನಿಲ್ಲುವ ಜಾಯಮಾನ ಇವರದ್ದು.ಮೊದಲಿನ ಸೈನಿಕ ಹೋರಾಡಿ ಸತ್ತರೆ ಎರಡನೆಯದ್ದರ ಸರದಿ. ಒಂದು ಕ್ರಿಮಿ,ಕೀಟವನ್ನೂ ಒಳಗೆ ಬಿಡದೆ ಇಡೀ ಅರಮನೆಗೆ ಕಾವಲಾಗುವುದು ಈ ಪುಟ್ಟ ಸೈನ್ಯ.

ಉಷ್ಣ ವಲಯದಲ್ಲಿ ಮಳೆಗಾಲದ ಮೊದಲ ಮಳೆಗೆ ರೆಕ್ಕೆ ಮೂಡಿ ಸ್ವಲ್ಪ ಹೊತ್ತು ಹಾರಡುವ ಗೆದ್ದಲುಗಳ ಸಂತಾನೋತ್ಪತ್ತಿಗೂ ಆಗಲೇ ತಯಾರಿ ನಡೆಯುತ್ತದೆ.ಆದರೆ ಆಫ್ರಿಕಾದಂತಹ ತಂಪು ವಲಯಗಳಲ್ಲಿ ವರ್ಷದುದ್ದಕ್ಕೂ ಹಾರಾಡುವ ಸಾಮರ್ಥ್ಯವನ್ನು ಪಡೆದ ಪ್ರಭೇದಗಳಿವೆ.ಇವುಗಳ ಸಂತತಿಯೂ ಬೃಹತ್ ಆಗಿ ಬೆಳೆದು ಬಿಡುವುದಕ್ಕೆ ಕಾರಣವೆಂಬುದು ಅನ್ಯೋನ್ಯತೆ.ಯಾವಾಗಲೂ ಸೇವಕ ಹುಳುಗಳು “ಸೆಲ್ಯುಲೇಸ್” ಎಂಬ ಹಾರ್ಮೋನು(ಗ್ರಂಥಿ ರಸ) ಉಪಯೋಗಿಸಿ ಹದ ಮಾಡಿ ಕೊಳ್ಳುವ ಆಹಾರವನ್ನು ಎಲ್ಲರಿಗೂ ಸಮಾನವಾಗಿ ಹಂಚಿರುತ್ತವೆ. ಇವುಗಳ ಅನ್ನನಾಳದೊಳಗೆ ಸಿಂಬಯೋಟಿಕ್ ಶಿಲೀಂದ್ರಗಳೂ ಇವೆ.ಮಣ್ಣಿನ ವಾತಾವರಣವನ್ನು ಕಾಪಾಡುವ Termitomicoses ಶಿಲೀಂದ್ರಗಳು ಖನಿಜಗಳ ಆವೃತ್ತಿ(mineral cycling)ಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ.  

ಇನ್ನು ಸವನ್ನ ಕಾಡುಗಳಲ್ಲಿ ೩ ಮೀಟರಿಗಿಂತಲೂ ಎತ್ತರಕ್ಕೆ ಬೆಳೆಯುವ ಹುತ್ತಗಳಿವೆ.Australia ದಲ್ಲಿ ಬಿಳಿ ಇರುವೆ (white ants) ಎಂದು ಕರೆಯಲ್ಪಡುವ ಗೆದ್ದಲುಗಳು Blattodea ಎಂಬ ವರ್ಗದ Termitoidae ಕುಟುಂಬಕ್ಕೆ ಸೇರಿದ್ದು ನಮ್ಮ ಜಿರಳೆಗೆ ಹತ್ತಿರದ ಸಂಬಂಧಿ.ಆಫ್ರಿಕಾದ ಕೆಲವು ಗೋತ್ರ ಪಂಗಡದ ಜನರು ರಾತ್ರಿ ಕಾಡೊಳಗೆ ದೀಪವನ್ನಿಟ್ಟು ಅದರ ಸುತ್ತಲೂ ಹಾರಾಡುವ ಗೆದ್ದಲುಗಳನ್ನು ಹಿಡಿದು ಫ್ರೈ ಮಾಡಿ ಸವಿಯುತ್ತಾರೆ!
  

Thursday, December 1, 2011

ಒಂದು ಬರಗಾಲದ ಹಿಂದೆ

ಕೆಲವೊಮ್ಮೆ ಜನ-ಜೀವನ ಎಲ್ಲಾ ಸರಿಯಾದ ರೀತಿಯಲ್ಲಿ ಇರುವಾಗಲೇ ಹೇಳ ಹೆಸರಿಲ್ಲದ, ಇದುವರೆಗೆ ಗೊತ್ತಿಲ್ಲದ ಹೊಸ ರೋಗವೊಂದು ಹಠಾತ್ತನೆ ವಕ್ಕರಿಸಿಬಿಡುತ್ತದೆ.ಅಲ್ಲೆಲ್ಲೋ ಆಫ್ರಿಕಾದ ಚಿಂಪಾಂಜಿಯಲ್ಲಿದ್ದ ಸೂಕ್ಷ್ಮಜೀವಿ ವೈರಸ್ ‌ಈಗ ಇಡೀ ಜಗತ್ತೇ ಹೆದರುವ ಏಡ್ಸ್ ಆಗಿ ಕಾಡುತ್ತಿದೆ. ಐರಿಷ್ ಫೆಮೈನ್ ಎಂದೇ ಪ್ರಸಿದ್ಧವಾದ ಭೀಕರ ಬರಗಾಲವು Qurantine measures (ದಿಗ್ಬಂಧನ ಅಳತೆ)ಗಳು ಈಗ ಎಷ್ಟು ಅಗತ್ಯವಾಗಿದೆ ಎನ್ನುವುದಕ್ಕೆ ತಕ್ಕ ಉದಾಹರಣೆಯಾಗಿದೆ.
ಅವು ೧೮೪೪-೧೮೫೪ರವರೆಗೆ  ಐಯರ್ಲೇಂಡ್ ದೇಶವನ್ನು ಅತಿಯಾಗಿ ಪೀಡಿಸಿದ ಹಸಿವಿನ ದಿನಗಳು.ಈಗಿನ ಸೊಮಾಲಿಯಾದ ಬರಗಾಲಕ್ಕಿಂತಲೂ ಹೆಚ್ಚಾದ ಭೀಕರ ಬರಗಾಲ. ನಾವು ಇಲ್ಲಿ ಅನ್ನ,ರಾಗಿ,ಗೋಧಿಯನ್ನು ಎಷ್ಟು ಅವಲಂಬಿಸಿದ್ದೇವೆಯೋ ಹಾಗೆಯೇ ಅಲ್ಲಿಯ ಜನರ ಪ್ರಮುಖ ಆಹಾರ(staple food) ವಾಗಿದ್ದುದು ಬಟಾಟೆ(ಪೊಟಾಟೋ) ಮಾತ್ರ.ಗೋದಾಮುಗಳಲ್ಲಿ ಟನ್ನು ಗಟ್ಟಲೆ ದಾಸ್ತಾನಿರಿಸಿಧ್ಧ ಬಟಾಟೆಗಳು ತನ್ನಷ್ಟಕ್ಕೇ ಕೊಳೆಯಲಾರಂಭಿಸಿದ್ದವು.ಹೊಲದಲ್ಲಿ ನೆಟ್ಟ ಗಿಡಗಳೆಲ್ಲ ಸೊರಗಿ ಸಾಯತೊಡಗಿದ್ದವು.ಆಹಾರಕ್ಕಾಗಿ ಪರದಾಟ ಶುರುವಾಗಿತ್ತು.ರಾಜಕೀಯವಾಗಿಯೂ,ಆರ್ಥಿಕವಾಗಿಯೂ ದುರ್ಬಲವಾದ ಆ ದೇಶಕ್ಕೆ ಸಹಾಯ ಮಾಡಿದ ಶ್ರೀಮಂತ ದೇಶಗಳೂ ಕ್ರಮೇಣ ಕೈ ಚೆಲ್ಲರಾರಂಭಿಸಿದ್ದರು.
ಹೀಗೆ ಲಕ್ಷಗಟ್ಟಲೆ ಜನ ಆಹಾರವಿಲ್ಲದೆ ನರಳಿ ನರಳಿ ಸತ್ತುಹೋಗಲು ಮೂಲ ಕಾರಣ ಎಂಬುದು Phytophthora infestanse ಎಂಬ Oomycete ವರ್ಗಕ್ಕೆ ಸೇರಿದ ಒಂದು ಶಿಲೀಂದ್ರ(Fungi).ದಕ್ಷಿಣ ಅಮೇರಿಕಾ ಪ್ರಾಂತ್ಯದಿಂದ ಹಡಗುಗಳ ಮೂಲಕ ಅಯರ್ಲೇಂಡಿಗೆ ಆಮದು ಮಾಡಿಕೊಳ್ಳುತ್ತಿದ್ದ ಗೊಬ್ಬರದಲ್ಲಿ ಈ ಶಿಲೀಂದ್ರವೂ ಸೇರಿಕೊಂಡಿತ್ತು.ಐರಿಷ್ ನೆಲದ ಮಣ್ಣನ್ನು ಸೇರಿದ ಶಿಲೀಂದ್ರವು ಬಟಾಟೆಯ ಒಳಗೆ ಹುಲುಸಾಗಿ ಬೆಳೆದು “ಪೊಟಾಟೋ ಬ್ಲೈಟ್” ಎಂಬ ರೋಗ ವ್ಯಾಪಕವಾಯಿತು.ಈ ಕಾಟದಿಂದ ಪಾರಾಗಲು ಆ ಪುಟ್ಟ ದೇಶಕ್ಕೆ ಹಲವು ವರ್ಷಗಳೇ ಹಿಡಿದವು.
ಜಾಗತೀಕರಣ ಮಂತ್ರದ ಈ ಕಾಲದಲ್ಲಿ ನಾವು ಯಾವುದೇ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರಬೇಕು.ವಿದೇಶಿ ವಿನಿಮಯ ಪದ್ಧತಿ ಸುಲಭವಾಗುತ್ತಿದ್ದಂತೆ ಬಗೆ ಬಗೆಯ ಆಹಾರಗಳು,ತಂತ್ರಜ್ಞಾನಗಳು ಎಲ್ಲದಕ್ಕಿಂತ ಮಿಗಿಲಾಗಿ ಹೊಸ ಸಂಸ್ಕ್ರುತಿಗಳು,ವಿಚಾರಗಳು ಎಲ್ಲಾ ಬಂದವು.ಆದರೆ ಎಚ್ಚರಿಕೆಯಿಂದ ಇರಬೇಕಾದದ್ದು ಬಹಳಷ್ಟಿವೆ.


Friday, November 11, 2011

ಡೋಡೋ ಈಗ ಇರಬೇಕಿತ್ತು


ಚಿತ್ರ ದಲ್ಲಿರುವ ಡೋಡೋ ಹಕ್ಕಿಯನ್ನು ನೋಡಿದವರು ಈಗ ಜೀವಿಸಿರಲಿಕ್ಕಿಲ್ಲ.ಮಾನವನ ಅಂಧ ವಿಶ್ವಾಸಕ್ಕೆ ಬಲಿಯಾದ ಒಂದು ಹಕ್ಕಿಯಿದು.೧೫೯೮ನೇ ಇಸವಿ ಕಾಲದವರೆಗೆ ಮೋರಿಷಸ್ ದ್ವೀಪದಲ್ಲಿ ಜನ ವಾಸವಿರಲಿಲ್ಲ.ಆದರೆ ಅಲ್ಲಿ ಡಚ್ ವಲಸೆಗಾರರ ತಂಡವೊಂದು ಅಲ್ಲಿ ಬೀಡು ಬಿಟ್ಟು ಮರಿ ಮಕ್ಕಳು ಸಂಬಂಧಗಳು ಬೆಳೆದು ಊರು ಬೆಳೆಯತೊಡಗಿತ್ತು.ಸಂಪ್ರದಾಯ,ನಂಬಿಕೆಗಳು ಬಲವಾಗತೊಡಗಿದ್ದವು.ಈ ದ್ವೀಪದಲ್ಲಿ ಹಾಯಾಗಿದ್ದ “ಡೋಡೋ” ಗಳ ಸಂಖ್ಯೆಯು ಕೂಡಾ ದಿನೇ ದಿನೇ ಕ್ಷೀಣಿಸುತ್ತಾ ಹೋಗಿತ್ತು.  ಡೋಡೋ ಹಕ್ಕಿಯ ವಿಚಿತ್ರ ಕೂಗು ದೆವ್ವಗಳನ್ನು ಆಹ್ವಾನಿಸುತ್ತಿರುವಂತೆ ಅಲ್ಲಿಯ ಜನರಿಗೆ ಭಾಸವಾಗತೊಡಗಿತ್ತು.ಒಂದೆಡೆ ಮಾಂಸಕ್ಕಾಗಿ ಬೇಟೆ, ಅಲ್ಲದೆ ಕಂಡಲ್ಲಿ ಕೊಂದು ಹಾಕುವ ಸಂಪ್ರದಾಯವಾದಿಗಳ ಕಾಟ.ಅತ್ತ ಹಾರುವ ಸಾಮಥ್ಯ್ರವೂ ಇಲ್ಲದೆ,ದೂರ ಈಜಿ ವಲಸೆ ಹೋಗಲೂ ಆಗದೆ ಅಸಹಾಯಕವಾಗಿ ಒಂದು ಪಕ್ಷಿಯ ವಂಶವೇ ನಿರ್ನಾಮವಾಗಿ ಹೋಯಿತು.
ಇದೇ ಹಕ್ಕಿಯನ್ನು ಅವಲಂಬಿಸಿಕೊಂಡು ಒಂದು ಸಸ್ಯವೂ ಅಲ್ಲಿತ್ತು. Tambalacoque (Sideroxylon grandiflorum)   ಎಂಬ ಹೆಸರಿನ ಸಪೋಟೇಸಿ ಕುಟುಂಬದ “ ಡೋಡೋ ಮರ”.ಡೋಡೋ ತನ್ನ ಆಹಾರಕ್ಕಾಗಿ ತಿನ್ನುವ ಈ ಮರದ ಹಣ್ಣು ಜಠರ ಸೇರಿ ಅಲ್ಲಿ ಕೆಲವು ಕಿಣ್ವಗಳ ರಾಸಾಯನಿಕ ಕ್ರಿಯೆಯಿಂದ ಬೀಜಗಳು  ಹುಟ್ಟಲು ಅನುಸಾರವಾಗಿ ಸಿಧ್ಧಗೊಂಡು ಹಿಕ್ಕೆಯಲ್ಲಿ ಸೇರಿ ಹೊರಬರುತ್ತಿದ್ದವು.ಈಗ ಮರ ಉಳಿದಿದೆ.ಮತ್ತೆ ಹಣ್ಣು ತಿಂದು ಬೀಜ ಬಿತ್ತಿ ಹೊಸ ಗಿಡ ಬೆಳೆಸಲು ಅದರ ಗೆಳೆಯರಿಲ್ಲ.
ಡೋಡೋವಿನ ಕಥೆ ಹಲವರಿಗೆ ಪಾಠಕ್ಕಿದೆ.ಕಂಠಪಾಠ ಮಾಡಿ ಪರೀಕ್ಷೆಯಲ್ಲಿ ಭಟ್ಟಿ ಇಳಿಸಿದ್ದಿದೆ.ಆದರೂ ಕೆಲವೊಮ್ಮೆ  ಪಠಣ ಮಾಡಿದ್ದು ಬರೀ ಅಂಕಗಳಿಗೋಸ್ಕರ ಎಂದು ಒಪ್ಪಿಕೊಳ್ಳಬೇಕಾಗುತ್ತದೆ.ಯಾಕೆಂದರೆ ನಮ್ಮೂರಲ್ಲೇ ಕಾಣ ಸಿಗುವ ಕಾಡು ಕೋಳಿ,ಉಡ ಮುಂತಾದ ಜೀವಿಗಳಿಗೆ ಈಗ ಮಾಂಸಕ್ಕಾಗಿ ಒಳ್ಳೆ ಬೇಡಿಕೆಯಿದೆ.ಇದರಿಂದ ಸುಲಭವಾಗಿ ಹಣ ಮಾಡುವ ಯೋಚನೆ ಇರುವ ಕೆಲವು ಮಂದಿ ಈ ಮೂಕಪ್ರಾಣಿಗಳ ಬೇಟೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.ಇಂತವರ ಮುಂದೆ conservation,food chain ಮುಂತಾದವುಗಳ ಬಗ್ಗೆ ಹೇಳಲು ಸಾಧ್ಯವಿದೆಯೇ?

Tuesday, October 11, 2011

ಹುಳವಿದು. ಆದರೂ ..

ನಮ್ಮ ಗುಲಾಬಿ ಗಿಡದ ಗೆಲ್ಲಿಗೆ ಜೋತು ಬಿದ್ದಿದ್ದ ಸಣ್ಣ ಗೂಡೊಂದು ಗಮನ ಸೆಳಯುವಂತಿತ್ತು . ಕಡ್ಡಿಗಳನ್ನು ಜೋಡಿಸಿ ತಯಾರಿಸಿದ ಆ ಪುಟ್ಟ ಗೂಡಲ್ಲಿ ವಿಶೇಷವಾಗಿ ಎರಡು ಕಡ್ಡಿಗಳು ಇತರ ಕಡ್ಡಿಗಳಿಗಂತ ತುಸು ಉದ್ದವಿತ್ತು.ತೋಟದಲ್ಲಿ ಹುಡುಕಿದಾಗ ವಿವಿಧ ರೀತಿಯ ಅಂತಹ ಗೂಡುಗಳನ್ನು ನೋಡಲು ಸಾಧ್ಯವಾಯಿತು. Lepidoptera ಕುಟುಂಬಕ್ಕೆ ಸೇರಿದ “moth” ಕೀಟಗಳನ್ನುಯಾರೂ ಅಷ್ಟಾಗಿ ಪರಿಗಣಿಸುವುದಿಲ್ಲ.Bag worms ಎಂದು ಕರೆಯಲ್ಪಡುವ ಚೀಲದ ಹುಳವನ್ನು ಹಳ್ಳಿಗಳಲ್ಲಿ "ಕೋಲು ಪುಳು" ಎನ್ನುತ್ತಾರೆ.
ಹೆಣ್ಣು ಮೋತ್ ಹುಳ(female bag worm) ತಯಾರಿಸಿದ ಕಡ್ಡಿಗಳ ಜೋಡಿಸಿದ ಗೂಡು 
ಗಂಡು ಮೋತ್ ಹುಳ
ಹೆಣ್ಣು ಮೋತ್ ಹುಳವೊಂದು ಒಣ ಎಲೆಗಳಿಂದ ತಯಾರಿಸಿದ ಗೂಡು


ಆದರೆ ಇದೇ ಕುಟುಂಬ ದಲ್ಲಿ ಚಿಟ್ಟೆಗಳ ಬಗ್ಗೆ ಹೆಚ್ಚು ಅಧ್ಯಯನವಾಗುತ್ತಿದೆ. ಸಂಶೋಧಕರು ಇನ್ನು ಹೆಸರಿಸಬೇಕಾದ ಈ ವರ್ಗದ ಕೀಟಗಳು ಹೆಚ್ಚಾಗಿ ಕಾಣ ಸಿಗುವುದು ಕಾಡಿನ ಅಂಚಿಗೆ ತಾಗಿಕೊಂಡಿರುವ ತೋಟಗಳಲ್ಲಿ.ಒಣ ಎಲೆಗಳು ಅಥವಾ ಕಡ್ಡಿ ಗಳನ್ನು ಮಯಣದ ಎಳೆ ನೂಲು(silk threads)ಗಳನ್ನು  ಉಪಯೋಗಿಸಿ ಪುಟ್ಟ ಚೀಲದಂತಹ ಗೂಡು ನಿರ್ಮಿಸುವ ಚಾಕಚಕ್ಯತೆ ಇರುವುದು ಇಲ್ಲಿ ಹೆಣ್ಣು ಮೋತ್ ಕೀಟಗಳಿಗೆ.
ಜೀವನ ಚಕ್ರ ತುಸು ಭಿನ್ನ  ಹಾಗೂ ಆಸಕ್ತಿಕರ.ಗಂಡು ಕೀಟವು ಹಾರಲು ರೆಕ್ಕೆಗಳ ಹೊಂದಿದ್ದು ನೋಡಲು ಚಿಟ್ಟೆಯ ವರ್ಗಕ್ಕೆ ಸೇರಿದಂತೆ ಅನಿಸುತ್ತದೆ.ಹೆಣ್ಣು ಕೀಟಗಳಿಗೆ ರೆಕ್ಕೆಗಳಿಲ್ಲ.(ಲಾರ್ವ)ಹುಳದ ರೂಪದಲ್ಲಿ ಗೂಡೊಳಗೆ ಇದ್ದುಕೊಂಡು ಬೆಳೆಯುವ ಇವುಗಳು ಗೂಡಿನ ಕೆಳ ಭಾಗದಲ್ಲಿ ಒಂದು ರಂದ್ರವನ್ನು ಬಿಟ್ಟಿರುತ್ತವೆ.ಈ ರಂದ್ರದ ಮೂಲಕ  ಗಂಡು ಕೀಟಗಳು ಪಸರಿಸುವ
ಬೀಜಾಣುಗಳನ್ನು ಪಡೆಯಲು ಅನುಕೂಲವಾಗುವಂತೆ ಇದ್ದು ಬಿಡುತ್ತವೆ.ಗರ್ಭದಾರಣೆ ಆಗಿ ಮೊಟ್ಟೆಗಳ ಹೊರುವ ತಾಯಿ ಕೀಟವು ತನ್ನಷ್ಟಕ್ಕೇ ಅಲ್ಲಿಗೇ ಮುದುಡಿ ಸಾಯತೊಡಗಿದರೆ,ಮೊಟ್ಟೆಗಳು ಅದರೊಳಗೆ ಬೆಳೆದು ಮರಿ ಕೀಟಗಳು ಹುಟ್ಟಿರುತ್ತವೆ.ಗಂಡು ಕೀಟಗಳು ರೆಕ್ಕೆ ಮೂಡಿ ಹಸಿರು ಎಲೆಗಳ ಹರಿತ್ತನ್ನು ತಿಂದು ದೊಡ್ಡದಾದರೆ,ಹೆಣ್ಣು ಲಾರ್ವ ಹುಳಗಳು ಗಾಳಿ ಯಲ್ಲಿ ತೇಲಿ ಮರ,ಗಿಡಗಳ ಮೇಲೆ ಬಂದು ಬೀಳುತ್ತವೆ.ಮತ್ತೆ ಗೂಡುಗಳ ನಿರ್ಮಾಣ ಶುರುವಾಗುತ್ತದೆ.
ಇಲ್ಲಿ ನಮ್ಮ ರೈತರಿಗೆ ಅಂತಹ ಉಪಟಳ ನೀಡದ  ಚೀಲದ ಹುಳಗಳು ಗಳು ತಮ್ಮಷ್ಟಕ್ಕೇ ಇದ್ದರೆ,ಕೆಲವು ವಿದೇಶಗಳಲ್ಲಿ ಈ ವರ್ಗಕ್ಕೆ ಸೇರಿದ ಕೀಟಗಳು ಬೆಳೆಗಳನ್ನು ನಾಶಪಡಿಸುವಷ್ಟು ಸಂಖ್ಯೆಯಲ್ಲಿ ಇವೆ.ಇನ್ನು ಅಲ್ಲಿ ಕೆಲವು ವಿಧದ ಈ ಕೀಟಗಳನ್ನು  ಆಹಾರವಾಗಿಯೂ ಬಳಸುವವರಿದ್ದಾರೆ.


Sunday, October 2, 2011

ಪಾತರಗಿತ್ತಿ ಪಕ್ಕಾ....

ಬಿಸಿಲ ಹೊತ್ತಲ್ಲಿ ತಂಪಾದ ಸ್ಥಳದಲ್ಲಿ ವಿಶ್ರಾಂತಿ ಪಡೆಯುವ ಹಳದಿ ಚಿಟ್ಟೆಗಳು



ಕಳೆದ ವಾರ ಊರಿಗೆ ಹೋಗಿದ್ದೆ.ಮಳೆಗಾಲ ಮುಗಿಯುವ ಹೊತ್ತಿಗೆ ರೆಕ್ಕೆ ಬಲಿತು ನಲಿದಾಡುವ ಚಿಟ್ಟೆಗಳ ಪೂರವೇ ಅಲ್ಲಿ ಇತ್ತು.ಫೋಟೋ ತೆಗೆಯಲು ಹೋದಾಗ ಬಿಂಕದಿಂದ ಹಾರುವ ದೊಡ್ಡ ರೆಕ್ಕೆಯ ಚಿಟ್ಟೆಗಳ ಸುದ್ದಿಗೆ ಹೋಗದೆ ಗುಂಪಾಗಿ ಒಟ್ಟಿಗೆ ಸೇರುವ  ಪುಟ್ಟ ಹಳದಿ ಚಿಟ್ಟೆಗಳ ಹಿಂದೆ ಬಿದ್ದೆ. ಅಂಗಳದಲ್ಲಿ ಕುಳಿತಿದ್ದ ಚಿಟ್ಟೆಗಳ ಚಿತ್ರ ಸೆರೆಹಿಡಿಯಲು ಸುಲಭವಾಯಿತು
ಹೆಸರು Common Grass Yellow .ಕುಟುಂಬ peiridae. ಶಾಸ್ತ್ರೀಯ ನಾಮ Eurema hecabe.
ಗಂಡು ಚಿಟ್ಟೆಗಳ ರೆಕ್ಕೆಯಲ್ಲಿ ಉಬ್ಬಿ ನಿಂತ ಕೋಶ ಪದರ ವಿದ್ದರೆ,  ಹೆಚ್ಚಾಗಿ ಯುಪಟೋರಿಯಮ್,ಅಕೇಶ್ಯಾ ಎಲೆಗಳ ಕೆಳ ಭಾಗದಲ್ಲಿ ಮೊಟ್ಟೆ ಇಡುವ ತಾಯಿ ಚಿಟ್ಟೆಗಳ ರೆಕ್ಕೆಯ ಅಂಚಲ್ಲಿ  ಗಾಢ ಕಪ್ಪು ಬಣ್ಣದ ಗೆರೆ ಇರುತ್ತದೆ. ನಸು ಹಸುರು ಬಣ್ಣಕ್ಕೆ ತಿರುಗುವ ಲಾರ್ವ ಹಾಗೂ ಪ್ಯೂಪಾವಸ್ಥೆ ಯಲ್ಲಿ ಒಂದಕ್ಕೂ ಹೆಚ್ಚು ತಿಂಗಳು ಇದ್ದು ನಂತರ ಹಳದಿ ರೆಕ್ಕೆಗಳಲ್ಲಿ  ಬೂದು ಚುಕ್ಕಿಗಳ ವಿನ್ಯಾಸ ಮೂಡ ತೊಡಗುತ್ತದೆ.ಮಳೆಗಾಲದ ತಂಪಿಗೆ ರೆಕ್ಕೆಗೆ ಕಡು ಹಳದಿ ಬಣ್ಣವಿದ್ದರೆ ಬೇಸಿಗೆ ಕಾಲದಲ್ಲಿ ನಸು ಹಳದಿ.
ಬೆಳಗ್ಗೆ ಹುಲ್ಲು ಗಿಡಗಳ ಮೇಲೆ ಹಾಯಾಗಿದ್ದು ರಾತ್ರಿಯಾಗುತ್ತಿದ್ದಂತೆ ಎತ್ತರದ ಗಿಡಗಳ ಎಲೆ ಮರೆಯಲ್ಲಿ ನಿದ್ರಿಸುವ ಚಿಟ್ಟೆಗಳ ನೋಡಲು ಸಾಧ್ಯವಾಗಲಿಲ್ಲ. 

Sunday, September 4, 2011

ರಮ್ಯವಾದರೂ ಕೀಟಗಳ ದುಃಸ್ವಪ್ನ ಈ ಸಸ್ಯ !

ಆಕರ್ಷಕ ಹೂಗಳು

ಕೀಟಭಕ್ಷಕ ಸಸ್ಯದ ಬೇರಿನಲ್ಲಿರುವ ಚೀಲಗಳು


ತುಂತುರು ಮಳೆ ಹನಿಗಳು ಒದ್ದೆ ಮಾಡಿದ ಬಟಾ ಬಯಲುಗಳಲ್ಲಿ ಹುಟ್ಟಿವೆ ಪುಟಾಣಿ ಸಸ್ಯ ಸಂಕುಲ....
ಬಿಸಿಲ ಬೇಗೆಗೆ ಸುಡುತ್ತಿದ್ದ ಕಲ್ಲು ಬಂಡೆಗಳ ಮೇಲೂ ನೀಲಿ ಹೂಗಳ ಕಾರುಬಾರು.
ಬಿಳಿ,ನೇರಳೆ ಹಾಗೂ ನಸು ಕೆಂಪು ಬಣ್ಣದಲ್ಲೂ ಕಾಣಬಹುದು ಕಾಕ ಪೂವು ಎಂದು ಮಲಯಾಳದಲ್ಲಿ ಕರೆಯಲ್ಪಡುವ ಓಣಂ ಹಬ್ಬದ ಹೂಗಳ ರಂಗೋಲಿಗಳಿಗೆ ಹಳ್ಳಿಗಳಲ್ಲಿ ಬಳಸುವ ಈ ಹೂವು. .
ಮಳೆಯ ಜೊತೆಗೆ ಹುಟ್ಟಿ ಮಳೆಯೊಂದಿಗೆ ಸಾಯುವ ಆಕರ್ಷಕ ಸಸ್ಯ..
ಉದ್ದ ೧ ರಿಂದ ೧೦ ಸೆಂಟಿ ಮೀಟರ‍್. ಗಿಡದ ಬುಡದಲ್ಲಿ ಚಮಚೆ ಆಕಾರದ ಸಣ್ಣ ಎಲೆಗಳು..ಬೇರುಗಳಿಗೆ ಜೊತೆಯಾಗಿ ಕೀಟ ಭಕ್ಷಕ ಚೀಲಗಳು (bladders).ಸಣ್ಣ ಹುಳ(Larvae) ಗಳನ್ನು ಜೀರ್ಣಿಸಿಕೊಳ್ಳುವಂತಹ ಒಳ ರಚನೆಯನ್ನು ಹೊಂದಿವೆ ಈ ಚೀಲಗಳು.
ಗಿಡದ ಹೆಸರು utricularia.
ಕುಟುಂಬ Lentibulariaceae
ಹೂಗಳ ಬಣ್ಣ, ಎಲೆಗಳ ವಿನ್ಯಾಸ, ಹೂ ತೊಟ್ಟಿನ ರಚನೆ ಇತ್ಯಾದಿಗಳನ್ನಾದರಿಸಿ ತರ ತರದ ಪ್ರಭೇದಗಳು.ಜೂನ್-ಸೆಪ್ಟೆಂಬರ್ ಮಾಸಗಳ ಅವಧಿಯಲ್ಲಿ ತನ್ನ ಜೀವನ ಚಕ್ರವನ್ನು ಮುಗಿಸಿ ಸಾರ್ಥಕವಾಗುವ ಸುಂದರ ಸಸ್ಯ.
ಮಳೆ ಮುಗಿಯುತ್ತಿದ್ದಂತೆಯೇ ಬೀಜೋತ್ಪತ್ತಿಯೂ ಮುಗಿದಿರುತ್ತದೆ.
ಗಿಡವೊಂದರಲ್ಲೇ ನೂರಕ್ಕೂ  ಹೆಚ್ಚು ಬೀಜಗಳನ್ನು ಕಾಣಬಹುದು.ಕಪ್ಪು/ಕಂದು ಬಣ್ಣದ ಈ  ಮರಿ ಬೀಜಗಳು ಮುಂದಿನ ವರ್ಷದ ಮಳೆಗೆ ಕಾಯುತ್ತಾ ಮಣ್ಣಡಿಯಲ್ಲಿ ನಿದ್ರೆಗೆ ಜಾರುತ್ತವೆ. 

Friday, July 29, 2011

ಕುಂಟಾಲದ ಪ್ರಯೋಜನ ಆರೆಂಟು

ಕುಂಟಲದ ಗಿಡ
ಸಸ್ಯಶಾಸ್ತ್ರದ ಕೆಲವೊಂದು ಸಂಶೋಧನೆಗಳಿಗಾಗಿ ಸಸ್ಯ ಸಂಗ್ರಹಕ್ಕೆ ಹೋಗಬೇಕಿತ್ತು. 
ಮಂಗಳಗಂಗೋತ್ರಿಯ ವಿಶಾಲ ಆವರಣದಲ್ಲಿರುವ ಗುಡ್ಡಗಳಲ್ಲಿ ಬೇಕಾದಷ್ಟು ಸಸ್ಯಗಳಿವೆ ಎಂದು ಮಿತ್ರರೊಂದಿಗೆ ಅಲ್ಲಿಗೇ ಹೋಗಿದ್ದೆ.
ಗುಡ್ಡದ ತುಂಬಾ ಹುಲುಸಾಗಿ ಬೆಳೆದಿದ್ದ ಕುಂಟಲದ ಪೊದೆಗಳು ಕಡು ನೇರಳೆ ಬಣ್ಣದ ಹಣ್ಣುಗಳ ಗೊಂಚಲು ಹೊತ್ತ ಗೆಲ್ಲುಗಳು ತುಸು ಬಗ್ಗಿದ್ದವು. ಗಿಡತುಂಬ ನೇರಳೆ ಹಣ್ಣು ನೋಡಿದ ನಮಗೆ ಬೇಕಾದ ಗಿಡ ಸಂಗ್ರಹಿಸುವುದು ಬಿಟ್ಟು ಕುಂಟಲ ಸವಿಯುತ್ತಾ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ.
ಸಣ್ಣ ಗಟ್ಟಿ ಮರವಾಗಿ ಬೆಳೆಯುವ, Myrtaceae ಕುಟುಂಬ ವರ್ಗಕ್ಕೆ ಸೇರಿದ ಈ ಸಸ್ಯ ಪಶ್ಚಿಮ ಘಟ್ಟ ಹಾಗೂ ಶ್ರೀಲಂಕಾದ ಕಾಡುಗಳಲ್ಲಿ ಕಾಣ ಸಿಗುತ್ತದೆ. ನೇರಳೆ, ಪೇರಳೆಗಳ ಹೂವುಗಳಂತೆ ಸಣ್ಣ ಹೂವುಗಳು, ಗಟ್ಟಿ ಎಲೆಗಳು. ಎಳೆ ಚಿಗುರು ತಿಳಿ ಕಂದು ಬಣ್ಣದಲ್ಲಿರುತ್ತದೆ.
ಹಳ್ಳಿ ಶಾಲೆಯಲ್ಲಿ ಓದಿದವರಿಗೆ ಅಂದಿನ ಮಳೆದಿನಗಳ ಹಾದಿಯಲ್ಲಿ ಕುಂಟಲವ ಮೇಯ್ದು ಬಾಯಿ ನೇರಳೆ ಮಾಡಿ ಮೇಷ್ಟರ ಕೈಯಿಂದ ಪೆಟ್ಟು ತಿಂದ ಸವಿ ನೆನಪಿರಬಹುದು.ಸಂಜೆ ಶಾಲೆ ಬಿಟ್ಟು ಮನೆಗೆ ಹಿಂತಿರುಗುವಾಗ ಅಜ್ಜನ ಕಾಲಿನ ಬಣ್ಣದ ಕೊಡೆಯನ್ನೇ ಕೊಕ್ಕೆಯಾಗಿ ಬಳಸಿ ಬುತ್ತಿ ತುಂಬಾ ಕುಂಟಲ ಹಣ್ಣುಗಳ ತುಂಬಿಸಲು ನಮ್ಮ ನಡುವೆ ಇದ್ದ ಸ್ಪರ್ಧೆಗೆ ಸೋತು ಒಲೆ ಕಟ್ಟೆ ಮೇಲೇರುತ್ತಿದ್ದ ಒದ್ದೆಯಾದ ಪೆನ್ನು ಪುಸ್ತಕಗಳು.ತನ್ನ ಮೊಮ್ಮಕ್ಕಳ ತೋಯಿಸಿದ ಮಳೆಗೆ ಹಿಡಿ ಶಾಪ ಹಾಕುವ ಅಜ್ಜಿಗೆ ಕಾಣದಂತೆ ಅಟ್ಟದ ಕೋಣೆಯಲ್ಲಿ ಕುಳಿತು ತಿನ್ನುತ್ತಿದ್ದ, ನಮಗೆಂದೇ ಹಣ್ಣಾಗುತ್ತಿದ್ದ ಕುಂಟಲ ಹಣ್ಣುಗಳ ರುಚಿಯೇ ಬೇರೆ..  

ಮಕ್ಕಳು ತಿಂದು ಖುಷಿ ಪಡುವುದಕ್ಕಷ್ಟೇ ಸೀಮಿತವಲ್ಲ ಈ ಕುಂಟಾಲ.
ಹಾಗಾದರೆ ಅದರ ಪ್ರಯೋಜನ?
ಕುಂಟಲದ ಎಳೆಯ ಚಿಗುರುಗಳ ತಂಬುಳಿ ಆರೋಗ್ಯ ವರ್ಧಕ.
ಎಲೆ-ತೊಗಟೆ-ಹಣ್ಣು ಇತ್ಯಾದಿಗಳನ್ನು ನಾಟಿ ವೈದ್ಯರು ಮಧುಮೇಹ ಚಿಕಿತ್ಸೆಗೆ ಬಳಸುತ್ತಾರೆ. ರೋಗಾಣು ನಾಶಕ ಶಕ್ತಿ ಕುಂಟಲಕ್ಕಿದೆ. ಜ್ವರಶಮನಕ್ಕೆ ಇದರ ತೊಗಟೆಯನ್ನು ಬಳಸುತ್ತಾರೆ.

Sunday, May 29, 2011

ಚಳ್ಳೆಹಣ್ಣು ತಿಂತೀರಾ ??



ಚಳ್ಳೆ ಹಣ್ಣು ತಿಂದಿದ್ದೀರಾ !
ಆಹಾ ನೋಡೋಕೆ ಚೆನ್ನಾಗಿದೆ ಎಂದು ಇದನ್ನು ಗೊಂಚಲಿಂದ ಕಿತ್ತು ತಿಂದೀರಿ ಮತ್ತೆ. ಒಂದು ವೇಳೆ ತಿಂದರೆ ಮರುಗಬೇಕಾಗಿಯೂ ಇಲ್ಲ..
ಹೆಸರೇ ಸೂಚಿಸುವಂತೆ ಚಳ್ಳೆ ತಿನ್ನಿಸುವುದು ಈ ಹಣ್ಣು. ೮ ರಿಂದ ೧೦ ಮೀಟರುಗಳಷ್ಟು ಉದ್ದ ಬೆಳೆಯುವ ಮದ್ಯಮ ಗಾತ್ರದ ಮರವು ಬೊರಾಜಿನೇಸಿ ಕುಟುಂಬಕ್ಕೆ ಸೇರಿದೆ.

ಸಸ್ಯ ಶಾಸ್ತ್ರೀಯ ನಾಮ ಕೋರ‍್ದಿಯಾ ಒಬ್ಲೀಕ್ವ. ಎಪ್ರೀಲ್ - ಮೇ ತಿಂಗಳುಗಳಲ್ಲಿ ನಸು ಹಳದಿ ಬಣ್ಣದ ಚಿಕ್ಕ ಹೂಗಳ ಗೊಂಚಲುಗಳು ಜೂನ್ -ಜುಲೈ ಹೊತ್ತಿಗೆ ಮಾಗಿದ ಹಣ್ಣುಗಳಾಗಿರುತ್ತವೆ. ಹಸಿರು ಕಾಯಿಯ ಒಳಗೆ ತುಸು ಅಂಟಾದ ನೀರು ಇರುತ್ತದೆ. ಹಳದಿ ಬಣ್ಣದ ಕ್ಕೆ ತಿರುಗಿದ ಹಣ್ಣಿನ ಹೊರಪದರ ಸುಲಭವಾಗಿ ತೆಗೆದಾಗ ಕೈಗೆ ಅಂಟುವ ಲೋಳೆಯನ್ನು ಕಂಡು ಹೇಸದಿರಿ. ಇದು ಹಲವಾರು ಔಷಧೀಯ ಗುಣಗಳುಳ್ಳದ್ದು.

ಶ್ವಾಸಕೋಶ ಸಂಬಂಧಿ ಖಾಯಿಲೆಗಳಿಗೆ, ಕಫ, ಜ್ವರ, ಪಿತ್ತ ಕೋಶದ ಖಾಯಿಲೆಗಳಿಗೆ ಔಷಧವಾಗಿ ಬಳಸುತ್ತಾರೆ.
ಬಲಿತ ಕಾಯಿಗಳಿಂದ ತಯಾರಿಸಿದ ಉಪ್ಪಿನ ಕಾಯಿಗೆ ಪಾಶ್ಚಾತ್ಯ ದೇಶಗಳಲ್ಲಿ ಒಳ್ಳೆ ಬೇಡಿಕೆ ಇದೆಯಂತೆ. ಹಣ್ಣುಗಳಿಂದ ಪಡೆಯುವ ಗಮ್ ಅನ್ನು ಕಾಗದ ಅಂಟಿಸಲು ಕೂಡ ಬಳಸಬಹುದು.

ಇತ್ತೀಚೆಗೆ ಗೆಳತಿಯೊಂದಿಗೆ ಸುರತ್ಕಲ್ ಬೀಚ್‌ಗೆ ಹೋಗುವ ಮಾರ್ಗದ ಬದಿಯಲ್ಲಿ ಒಂದು ಚಳ್ಳೆ ಹಣ್ಣಿನ ಮರ ನೋಡಿದೆ. ಸಣ್ಣ ಹಣ್ಣುಗಳ ಆಕರ್ಷಕ ಗೊಂಚಲುಗಳ ಭಾರಕ್ಕೆ ಬಗ್ಗಿದ್ದ ರೆಂಬೆಯ ಫೋಟೋ ಕ್ಲಿಕ್ಕಿಸುತ್ತಿದ್ದಾಗ ಬೀಚ್‌ಗೆ ಹೋಗುತ್ತಿದ್ದ ಇಬ್ಬರು ಹುಡುಗಿಯರು ಕುತೂಹಲ ತಡೆಯದೆ ನಮ್ಮ ಕೈಯಿಂದ ಎರಡು ಹಣ್ಣು ಪಡೆದವರೇ ಅದೇನೆಂದು ಕೇಳುವ ಗೋಜಿಗೂ ಹೋಗದೆ ಬಾಯಿಗೆ ಹಾಕಿ ಜಗಿದೇ ಬಿಟ್ಟರು.
ಅವರ ಬದಲಾಗುತ್ತಿದ್ದ ಮುಖಾರವಿಂದ ನೋಡಿ ಚಳ್ಳೆ ಮರ ಮನದಲ್ಲೆ ನಗುತ್ತಿತ್ತು...ಒಳಗೊಳಗೇ ನಾವು ಕೂಡಾ :)

Tuesday, February 9, 2010

ದೇಸೀ ಬದನೆಗೆ ಜೈ, ಬಿಟಿಗೆ ಬೈ


ಈಗ ದೇಶವಿಡೀ ಬಿ.ಟಿ. ಬದನೆ ಅರ್ಥಾತ್ ಕುಲಾಂತರಿ ಬದನೆಯದ್ದೇ ಚರ್ಚೆ. ಸದ್ಯಕ್ಕೆ ಬಿ.ಟಿ ಬದನೆ ದೇಶಕ್ಕೆ ಬೇಡ ಎಂದು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಈ ಎಲ್ಲಾ ಬದನೆ ಚರ್ಚೆ ಒತ್ತಟ್ಟಿಗಿರಿಸಿ, ಬದನೆಯನ್ನು ಸ್ಮರಿಸಿದರೆ ನನ್ನ ಮನಸಿಗೆ ಬರುವುದು ನಾನು ಅಜ್ಜಿಮನೆಯಿಂದ ಶಾಲೆ ಹೋಗುತ್ತಿದ್ದ ಬಾಲ್ಯದಕಾಲ. ಅಜ್ಜಿಮನೆಯ ಅಂಗಳದಲ್ಲಿ ಧಾರಾಳ ಬೆಳೆದುನಿಲ್ಲುತ್ತಿದ್ದ ಎಳೆ ಬದನೆಮಿಡಿ ನೋಡಿ ಅಜ್ಜಿ ತನ್ನ ಬೊಚ್ಚುಬಾಯಿ ಬಿಟ್ಟು ‘ಇದು ಗೊಜ್ಜಿಗೆ, ಇವಿಷ್ಟು ಪಲ್ಯಕ್ಕೆ, ಆ ದೊಡ್ಡದೆರಡು ಮುಂದಿನ ವರ್ಷ ಬೀಜಕ್ಕಾತು’ ಎಂದು ನಿರ್ಧಾರ ಪ್ರಕಟಿಸುತ್ತಿದ್ದರು. ಮಾಗಿದ ಆ ಎರಡು ಬದನೆ ಹಣ್ಣು ಕೊಯ್ದು ಬೀಜ ಬೇರ್ಪಡಿಸಿ, ತೊಳೆದು ಬಿಸಿಲಲ್ಲಿ ಒಣಗಿಸಿ ನಂತರ ಹತ್ತಿಬಟ್ಟೆಯಲ್ಲಿ ಕಟ್ಟಿ ಅದನ್ನು ಯಾವುದೋ ಡಬ್ಬದಲ್ಲಿಟ್ಟು ಹೊಗೆ ಅಟ್ಟದಲ್ಲಿ ಭದ್ರವಾಗಿ ಕಾಪಿಡುತ್ತಿದ್ದರು.
ಯಾರಾದರೂ ಬದನೆ ಬೀಜ ಕೇಳಿದರೆ ಅಲ್ಲಿಂದಲೇ ಸರಬರಾಜು ಆಗುತ್ತಿತ್ತು! ಈ ಪ್ರಕ್ರಿಯೆ ಈಗಲು ನಿರಾತಂಕವಾಗಿ ಸಾಗುತ್ತಿದೆ. ಮತ್ತೆ ಮರುವರ್ಷ ಅಟ್ಟದಲ್ಲಿರುವ ಬದನೆ ಬೀಜ ಕೆಳಕ್ಕಿಳಿದು ಬಂದು ಬಿತ್ತನೆಗೆ ಸಿದ್ಧಗೊಳ್ಳುತ್ತಿದ್ದವು.

ಸ್ವಲ್ಪ ಸೆಗಣಿಯೊಂದಿಗೆ ಒಂದು ಹಿಡಿ ಬೀಜಗಳನ್ನು ಸೇರಿಸಿ ಮಿಶ್ರಮಾಡಿ ಹತ್ತಿಬಟ್ಟೆಯಲ್ಲಿ ಕಟ್ಟಿ, ಅದಕ್ಕೆ ನೀರು ಸಿಂಪಡಣೆ ಮಾಡಿ ಛಾವಣಿಗೆ ತೂಗು ಹಾಕಲಾಗುತ್ತದೆ, ಹೀಗೆ ಎರಡುವಾರ ಮಾಡಿ, ಆ ಬಳಿಕ ಈ ಗಂಟು ಬಿಚ್ಚಿನೋಡಿದರೆ ಬೀಜಗಳಲ್ಲಿ ಪುಟಾಣಿ ಸಸ್ಯಗಳು ಜೀವತಾಳಿರುತ್ತವೆ.
ಒಂದು ಬಟ್ಟಿಯಲ್ಲಿ ಫಲವತ್ತಾದ ಮಣ್ಣು ತುಂಬಿಸಿ, ಇದರಲ್ಲಿ ಪುಟ್ಟ ಸಸ್ಯಗಳನ್ನು ನಡುತ್ತಾರೆ. ಸರಿಯಾದ ಗಾಳಿ ಬಿಸಿಲು ತಾಗುವಲ್ಲಿ ಇವನ್ನು ಇರಿಸಿ, ನೀರು ಒದಗಿಸುತ್ತಿದ್ದರೆ ಸೊಂಪಾಗಿ ಬದನೆ ಗಿಡ ಬೆಳೆಯುತ್ತದೆ. ಆ ಬಳಿಕ ಪಾತಿ ಮಾಡಿ ನಟ್ಟರಾಯಿತು. ಮತ್ತೆರಡು ತಿಂಗಳಲ್ಲಿ ಬದನೆ ಗಿಡದಲ್ಲಿ ಹೂ, ಮತ್ತೆ ಕೆಲ ದಿನದಲ್ಲಿ ಕಾಯಿ ಆಗಮನ.
ಅಜ್ಜಿಮನೆಯಲ್ಲಿ ಎಷ್ಟು ಸಾಲು ಬದನೆ ಇದೆ ಎಂಬ ಮೇಲೆ ಲೆಕ್ಕಾಚಾರಗಳು ನಡೆಯುತ್ತಿದ್ದವು. ಎರಡು ಸಾಲಿದ್ದರೆ ವಾರಕ್ಕೆ ಎರಡು ಬಾರಿ ಸಾಂಬಾರ‍್, ಭಾನುವಾರಕ್ಕೆ ಪಲ್ಯ, ಮರುದಿನ ಗೊಜ್ಜು ಹೀಗೆ. ಅಷ್ಟಲ್ಲದೆ ನೆರೆ ಮನೆಯವರಿಗೂ ಬದನೆ ಹಂಚೋಣ ನಡೆಯುತ್ತದೆ.
ಈ ಸಂಭ್ರಮದ ಮಧ್ಯೆ ನಾನು ಯಾವ ಗಿಡಗಳಿಗೆ ಹುಳ ತಾಗಿದ್ದಾಗಲಿ, ಕಾಯಿ ಉದುರಿದ್ದಾಗಲೀ ನೋಡಿಲ್ಲ. ಸಾಂಬಾರಿನ ರುಚಿ ಏರಿಸುವ ಗುಳ್ಳ, ಹುಳಿಗೆ ಹೇಳಿ ಮಾಡಿಸಿದ ಉದ್ದ ಬದನೆ, ಬಿಳಿ ಬದನೆ, ಎಣ್ಣೆಕಾಯಿಗೆ ಫೇಮಸ್ ಆದ ನೀಲಿ ಚಿಕಣಿ ಬದನೆ ಹೀಗೆ ಬೆಳೆಯುತ್ತಿದ್ದರೆ ಇದರ ನಡುನಡುವೆ ಥರಹೇವಾರಿ ಚೆಂಡು ಹೂಗಳು ಕಂಗೊಳಿಸುತ್ತಿದ್ದವು.
ವೈಜ್ಞಾನಿಕವಾಗಿ ಹೇಳುವುದಾದರೆ ಈ ಚೆಂಡು ಹೂಗಿಡಗಳು ಸೂಸುವ(secondary metabolics) ವಾಸನೆಯು ಉಪದ್ರವಕಾರಕ ಕೀಟಗಳನ್ನು ದೂರವಿರಿಸುತ್ತವೆ. ಇನ್ನು ಚೆಂಡು ಹೂ ಮತ್ತು ಬದನೆ ಹೂಗಳನ್ನು ಮಾತನಾಡಿಸಲು ಬರುವ ಪಾತರಗಿತ್ತಿಗಳ ಲೋಕವೇ ಬೇರೆ.
ಈ ಬದನೆ ಗಿಡಗಳು ಮೂರು ನಾಲ್ಕು ವರ್ಷಗಳ ವರೆಗೂ ಕುಬ್ಜಮರಗಳಾಗಿ ಬೆಳೆದಿರುತ್ತವೆ, ಮತ್ತು ಅಡುಗೆಕೋಣೆಯಲ್ಲಿ ಬದನೆ ಮೇಳಕ್ಕೆ ಕಾರಣವಾಗುತ್ತವೆ.
ನನ್ನ ಅಜ್ಜಿ ಕಂಡುಕೊಂಡ ಪ್ರಯೋಗ ಎಂದರೆ ಬೀಜ ಸಿಗಲಿಲ್ಲ ಎಂದಾದರೆ ಈ ಬದನೆ ಮರಗಳ ಗೆಲ್ಲನ್ನೇ ನೆಟ್ಟರೂ ತಳಿ ಅಭಿವೃದ್ದಿಗೆ ಸಾಕು ಎನ್ನುವುದು. ಯಾಕೆ ಗೊತ್ತೆ....ಈ ನಾನಿಲ್ಲಿ ನಿಮ್ಮ ಮುಂದೆ ಅರುಹಿದ ಬದನೆ ಮಹಾತ್ಮೆಯಲ್ಲಿನ ಬದನೆಗಳೆಲ್ಲ ಶುದ್ಧ ದೇಸಿ ತಳಿಗಳು. ಅನೇಕಾನೇಕ ವರ್ಷಗಳಿಂದ ನಮ್ಮ ಹಿತ್ತಿಲಲ್ಲಿ ಮಿತ್ರರಾಗಿ ಬೆಳೆದುಬಂದವುಗಳು.
ಆದರೆ ಬದನೆ ಎಂದರೆ ಒಂದು ಜೀವಂತ ರಾಸಾಯನಿಕ ವಸ್ತು ಆಗಿಬಿಡುವುದೋ ಎಂಬ ಹೆದರಿಕೆ ಇನ್ನು ಹುಟ್ಟಲಿದೆ. ಸದ್ಯಕ್ಕೆ ಬಿ.ಟಿ ಬದನೆ ಇಲ್ಲ ಎಂದು ಸರ್ಕಾರ ಹೇಳಿದ್ದರೂ ಅದನ್ನೇನೂ ನಿಷೇಧ ಮಾಡಿಲ್ಲವಲ್ಲ!
ಅಮೆರಿಕ ಮೂಲದ ಮೊನ್ಸಾಂಟೊ ಕಂಪನಿಯ ಉಪಸಂಸ್ಥೆಯಾದ ಮೇಯ್ಕೊ ತನ್ನ ಬಯೋಟೆಕ್ ಪ್ರಯೋಗಾಲಯಗಳಲ್ಲಿ ಬಿ.ಟಿ ಬದನೆ ಎಂಬ ಕುಲಾಂತರಿ ಕೂಸನ್ನು ಸೃಷ್ಟಿಸಿದೆ. ಬದನೆಗೆ ಸಾಮಾನ್ಯವಾಗಿ ಕಾಡುವ ಕಾಯಿಕೊರಕ, ಕಾಂಡಕೊರಕ ಹುಳಗಳನ್ನು ನಾಶಪಡಿಸುವ ಗುಣವಿರುವ ಬೇಸಿಲ್ಲಸ್ ಥುರೆಂಜೆನಸ್ಸಿಸ್(ಬಿ.ಟಿ) ಎಂಬ ಬ್ಯಾಕ್ಟೀರಿಯಾ ಅಂಶವನ್ನ ಬದನೆ ತಳಿನಕ್ಷೆಯೊಳಗೆ (ಪಾರ್ಟಿಕಲ್ ಬಂಬಾರ್ಡ್‌ಮೆಂಟ್, ಮೈಕ್ರೋಇಂಜಕ್ಷನ್ ಮುಂತಾದ ತಂತ್ರಜ್ಞಾನ ಮೂಲಕ) ಸೇರಿಸಲಾಗುತ್ತದೆ.
ಈ ಬ್ಯಾಕ್ಟೀರಿಯಾ ಕೀಟಗಳ ವಿರುದ್ಧ ಹೋರಾಡುವ ಎಂಡೋಟಾಕ್ಸಿನ್‌ ಎಂಬ ಪ್ರೋಟೀನ್ ಉತ್ಪಾದಿಸುತ್ತದೆ. ಕೀಟಗಳು ಬಿಟಿ ಅಂಶವಿರುವ ಗಿಡಗಳಲ್ಲಿ ಕುಳಿತು ಚುಚ್ಚುವಾಗ, ಎಂಡೋಟಾಕ್ಸನ್ ಕೀಟದ ದೇಹ ಪ್ರವೇಶಿಸಿ, ಅಲ್ಲಿರುವ ಅಯೋನುಗಳ ಸಂಚಾರ ಸ್ಥಗಿತಗೊಳಿಸುತ್ತದೆ. ಇದರಿಂದ ಕೀಟದ ದೇಹ ತಟಸ್ಥವಾಗುತ್ತದೆ.
ಇದು ತಾತ್ಕಾಲಿಕ ಪ್ರಯೋಜನ ಅಷ್ಟೇ. ಯಾಕೆಂದರೆ ಪ್ರಯೋಗ ಕಂಡುಕೊಂಡ ಸತ್ಯವೆಂದರೆ ಈ ಪ್ರೊಟೀನ್ ವಿರುದ್ಧ ಹೋರಾಡಲು ಬೇಕಾದ ಪ್ರತಿರೋಧಕ ಶಕ್ತಿಯನ್ನು ಕೀಟಗಳು ಗಳಿಸುತ್ತವೆ. ವಾತಾವರಣದ ಒತ್ತಡದ ಜತೆಗೆ ಕೀಟಗಳು ಯಾವುದೇ ಕುಲಾಂತರಿಗಳನ್ನು ಆಕ್ರಮಿಸಲು ಸಶಕ್ತವಾಗುತ್ತವೆ.
ಬಿ.ಟಿ ತಂತ್ರಜ್ಞಾನದಿಂದಾಗಿ ಈ ಕೆಳಗಿನ ದುಷ್ಪರಿಣಾಮ ಉಂಟಾಗಬಹುದು.
  • ಅವು ಪುನಃ ಸಂಯೋಗ ರೂಪಾಂತರಗಳಿಂದಾಗಿ ಹೊಸ ವೈರಾಣು ಸೃಷ್ಟಿಸಬಹುದು.
  • ಉತ್ಪರಿವರ್ತನೆ ಅಥವಾ mutationನಿಂದಾಗಿ ಅನೇಕ ರೀತಿಯ ಕಳೆಗಿಡಗಳು ಸೃಷ್ಟಿಯಾಗಬಹುದು.
  • crosspollination(ಭಿನ್ನ ಪರಾಗಸ್ಪರ್ಶ)ದಿಂದಾಗಿ ದೇಶಿ ಮತ್ತು ಕಾಡು ತಳಿಗಳ ಗುಣಗಳಲ್ಲಿ ಕಲಬೆರಕೆ ಉಂಟಾಗಬಹುದು.
  • ಪ್ರತಿಸಲವೂ ಕುಲಾಂತರಿಸಿದ ಬೀಜಗಳಿಗಾಗಿ ಕಂಪನಿ ಮೊರೆಹೋಗಬೇಕು. ಕುಲಾಂತರಿ ಗಿಡಗಳ ಅಭಿವೃದ್ಧಿಗೆ ಪೇಟೆಂಟ್ ಗಳಿಸಿದ ಮೊನ್ಸೆಂಟೋ ಕೋಟ್ಯಂತರ ಡಾಲರ‍್ ಎಣಿಸುವ ಉಪಾಯದಲ್ಲಿದೆ.

ಭಾರತ ಹಿಂದಿನಿಂದಲೂ ಬದನೆಯ ತವರು. ಮಟ್ಟಿಗುಳ್ಳ, ಮಲಾಪುರ, ನಿರ್ಜಲಿಗೋಟ ಮುಂತಾದ ೬೦ಕ್ಕೂ ಹೆಚ್ಚು ತಳಿಗಳಿಗಳು ಬೆಳೆಗಾರರಿಗೆ ಉತ್ತಮ ಫಸಲು ನೀಡಿವೆ. solanaceae ಎಂಬ ತಳಿಗೆ ಸೇರಿದ ಬದನೆಯ ಸಸ್ಯಶಾಸ್ತ್ರೀಯ ನಾಮ solanum melongena. ಕುದನೆ, ದತ್ತೂರ ಮುಂತಾದ ಗಿಡಗಳು ಇದೇ ಕುಟುಂಬಕ್ಕೆ ಸೇರಿದವು.

ಸಂಸ್ಕೃತಿ, ಜನಜೀವನ, ಭಾಷೆ ಎಲ್ಲದರಲ್ಲೂ ವೈವಿಧ್ಯತೆ ಹೊಂದಿರುವ ಭಾರತ ಸಸ್ಯತಳಿಯಲ್ಲೂ ಸಮೃದ್ಧ ದೇಶ. ಜಾಗತೀಕರಣಕ್ಕೆ ನಮ್ಮ ಪರಂಪರೆಯ ಬುಡವೇ ಅಲ್ಲಾಡುತ್ತಿದೆ, ಕುಲಾಂತರಿ ದಾಳಿಗೆ ಸಸ್ಯಸಂಪತ್ತಿನ ಕಣಜ ಸೋರಿ ಹೋಗದಿರಲಿ.