Sunday, February 19, 2012

ಅಜ್ಜನ ಗಡ್ಡದ ರೇಶಿಮೆ ಮೀಸೆ

ತೋಟದಲ್ಲಿ ತರಗೆಲೆಗಳನ್ನು ಕೂಡಿ ಹಾಕುವಾಗ ಅಜ್ಜನ ಗಡ್ಡದ ಕೋಡುಗಳ ಗೊಂಚಲು ಸಿಕ್ಕಿತ್ತು. ಬಿಸಿಲಲ್ಲಿ ಒಣಗಲು ಹಾಕಿ ಎರಡು ದಿನಗಳು ಕಳೆದಿದ್ದವು.ಕೋಡಿನಲ್ಲಿ ಉದ್ದನೆಯ ಬಿರುಕು ಬಿಟ್ಟು ಆಗಲೇ ಬೀಜ ಪ್ರಸಾರ ಆರಂಭವಾಗಿತ್ತು.ಚಪ್ಪಟೆಯಾದ ಬೀಜಗಳನ್ನು ದೂರಕ್ಕೆ ಕೊಂಡೊಯ್ಯುವ  ತೆಳುವಾದ ಬಿಳಿ ರೇಶಿಮೆ ಕೂದಲುಗಳ ಜೋಡಣೆಯು ಬಲು ವ್ಯವಸ್ಥಿತವಾಗಿ ಅಂದವಾಗಿದೆ.ನಮ್ಮ ತೇಗದ ಮರಕ್ಕೆ ದಟ್ಟವಾಗಿ ಹಬ್ಬಿದ Wattakaka volubilis(L.f.) Stapf  ಎಂಬ ಬಳ್ಳಿಯಲ್ಲಿ ಜೋತು ಬಿದ್ದ ಕೋಡುಗಳು ಗಮನ ಸೆಳೆಯತೊಡಗಿದ್ದವು.
ವಟ್ಟಕಾಕದ ಬೀಜಗಳು ಒಣಗಿದಾಗ
ಅಜ್ಜನ ಗಡ್ಡದ ಮಾಗಿದ ಕೋಡು

ಎಕ್ಕದ ಹೂ
 ಆಸ್ಕ್ಲಿಪಿಡಿಯೇಸಿ ಕುಟುಂಬಕ್ಕೆ ಸೇರಿದ ಇಂತಹ ಸಸ್ಯಗಳಲ್ಲಿ ಕೆಲವು ವಿಶೇಷ ಗುಣಗಳಿವೆ.ಆಕರ್ಷಕವಾದ  ಹೂ ಗೊಂಚಲುಗಳಲ್ಲಿ ದಪ್ಪವಾದ ದಳಗಳೇ ಎದ್ದು ಕಾಣುವುದು.ಕೊಳವೆಯಂತಹ ಶಲಾಕೆಯ ತುದಿಯಲ್ಲಿ ಶಲಾಕಾಗ್ರಕ್ಕೆ ಒತ್ತಾಗಿ ಇರುವ ಪರಾಗರೇಣುಗಳಿಗೆ ಎರಡು ಪುಟ್ಟ ರೆಕ್ಕೆಗಳಿದ್ದು ಇವುಗಳನ್ನು ಸೂಕ್ಷ್ಮ ದರ್ಶಕದಲ್ಲಿ ವೀಕ್ಷಿಸಿದರೆ ಗುರುತಿಸಬಹುದು.ಗಿಡಕ್ಕೆ ಗಾಯವಾದಲ್ಲಿ ಲೇಟೆಕ್ಸ್ ಹಾಲು ತತ್ಕ್ಷಣ ಗಾಯವನ್ನು ಒಣಗಿಸಲು ಶುರುಮಾಡುತ್ತದೆ.ಎಕ್ಕದ ಗಿಡಕ್ಕೆ ಈ ಕಾರಣಕ್ಕೇ milk weed ಎಂದು ಹೆಸರು ಬಂತು.
ಹಾಗೆಯೇ ಜೀವಂತಿ,ಮಧುನಾಶಿನಿ ಮುಂತಾದ ಗಿಡಗಳು ಇದೇ ಕುಟುಂಬ ವರ್ಗಕ್ಕೆ ಸೇರಿವೆ.
ವಿವಿಧ ರೋಗಗಳಿಗೆ ಬಳಕೆಯಾಗುವ ಆಸ್ಕ್ಲಿಪಿಡಿಯೇಸಿ ಕುಟುಂಬದ ಸಸ್ಯ ಪ್ರಭೇದಗಳು ಅಲಂಕಾರಿಕವಾಗಿ ಉಪಯೋಗಿಸಲ್ಪಡದ ಕಾರಣ ನಮ್ಮ ಗಮನಕ್ಕೆ ಬಾರದೆ ಇದ್ದರೂ ಕಡಿಮೆ ತೇವಾಂಶ ಹಾಗೂ ಪೋಷಣೆ ಇಲ್ಲದೆ ಬೆಳೆಯುವ ಸಾಮರ್ಥ್ಯವನ್ನು ಪಡೆದಿವೆ.

3 comments:

  1. good info Rashmi . idu sikkaga jopaanavaagi ettittukolluttidda baalya nenapaayitu :)

    ReplyDelete
  2. ಇದನ್ನು ಅಜ್ಜಿ ಕೂದಲು ಅಂತಲೂ ನಾವು ಕರೀತಿದ್ವಿ. ತುಂಬ ಒಳ್ಳೆಯ ಮಾಹಿತಿ. ಪಕ್ಕಕ್ಕೆ ಸರಿದುಹೋಗಬಹುದಾದ ಸಣ್ಣ-ಸಣ್ಣ ವಿಚಾರಗಳನ್ನು ಎತ್ತಿಕೊಂಡು ನೀವು ನೀಡುತ್ತಿರುವ ವಿವರಣೆ ಮಾಹಿತಿಯಿಂದ ಕೂಡಿದೆ.

    ReplyDelete