|
citrus fruit contaminated by penicillium |
ಶಿಲೀಂದ್ರಗಳ ಬಗ್ಗೆ ನಾವು ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ.ಅಸಂಖ್ಯಾತ ಬಗೆಯ ಶಿಲೀಂದ್ರಗಳಲ್ಲಿ ಸೂಕ್ಷ್ಮಾಣುಗಳಿಂದ ಹಿಡಿದು ಹಲವು ಇಂಚುಗಳಷ್ಟು ಬೆಳೆಯುವ ತರದವುಗಳಿವೆ.ನಿತ್ಯ ಜೀವನದಲ್ಲಿ, ನಮ್ಮ ಮನೆಯೊಳಗೂ ಹಿತ್ತಿಲಲ್ಲೂ ಸಾಮಾನ್ಯವಾಗಿ ಕಾಣಸಿಗುವ ಕೆಲವು ಶಿಲೀಂದ್ರಗಳ ಬಗ್ಗೆ ತಿಳಿಯೋಣ.
ಉಪ್ಪಿನಕಾಯಿಯನ್ನು ಭದ್ರವಾಗಿ ಭರಣಿಗಳಲ್ಲಿ ವರ್ಷಾನುಗಟ್ಟಲೆ ತೆಗೆದಿರಿಸುತ್ತಾರೆ.ಎಷ್ಟು ನಾಜೂಕಾಗಿ ಕಟ್ಟಿ ಇಟ್ಟರೂ ಕಪ್ಪಾದ ಪದರವೊಂದು ದ್ರಾವಣದ ಮೇಲೆ ಆವರಿಸಿಕೊಂಡಿರುತ್ತದೆ.ಹದಿ ಕಟ್ಟುವುದು ಎಂದು ಹಿಡಿ ಉಪ್ಪು ಸುರಿದು ಬಿಡುತ್ತೇವೆ.ನಿಜವಾಗಿಯೂ ಇಲ್ಲಿ ನಮ್ಮ ಕಣ್ತಪ್ಪಿಸಿ ಭರಣಿಯೊಳಗೆ ಸೇರಿರುವುದೇ "ಪೆನಿಸೀಲಿಯಮ್" ಎಂಬ ಶಿಲೀಂದ್ರ.
ನಿಂಬೆ ಹುಳಿ ಅಥವಾ ನೆಲ್ಲಿಕಾಯಿಯನ್ನು ಕೆಲಕಾಲ ಉಪಯೋಗಿಸದೇ ಇದ್ದರೆ ಹಸುರು ಬಣ್ಣದ ಪೊರೆಯೊಂದು ಮೂಡಿರುವುದು ಕಾಣಬಹುದು ಇದುವೇ "ಆಸ್ಪರ್ಜಿಲ್ಲಸ್ ಫಂಗಸ್". ಮೆಣಸಿನಕಾಯಿ ಕೊಳೆತರೆ ಎಂಥಾ ದುರ್ವಾಸನೆ ಅಲ್ಲವೇ ?
ಇಲ್ಲಿ ಹೆಚ್ಚಾಗಿ ಇರುವುದು "ಫ್ಯುಸೇರಿಯಮ್".
ಇನ್ನು ಬ್ರೆಡ್, ಬಿಸ್ಕತ್ತುಗಳನ್ನು ದೀರ್ಘ ಕಾಲ ಇಟ್ಟರೆ "Rhizopus fungi" ಬೆಳೆಯಲಾರಂಬಿಸುತ್ತದೆ.
|
Aspergillus sp |
ಶಿಲೀಂದ್ರದ ಒಂದು ಸ್ಪೋರ್(ಪ್ರತ್ಯುತ್ಪಾದನಾ) ಕಣ ಕೂಡ ಸಾಕು,ಅಸಂಖ್ಯಾತವಾಗಿ ಬೆಳೆಯಲು. ಮೈಸೀಲಿಯಮ್ ಬೇರುಗಳನ್ನು ಇಳಿ ಬಿಟ್ಟು ನಂತರ ಅವುಗಳು ಕವಲುಗಳಾಗಿ ಒಡೆದು ಪೋಷಕಾಂಶಗಳನ್ನು ಹೀರಿ ಹುಲುಸಾಗಿ ಬೆಳೆಯತೊಡಗುತ್ತದೆ. ಪ್ರತ್ಯುತ್ಪಾದನೆಗಾಗಿ ಮೂಡುವ ಕೋಶಚೀಲಗಳು ಅಸಂಖ್ಯಾತ ಸ್ಪೋರ್ ಕಣಗಳ ಹೊತ್ತು "ಫ್ರುಟಿಂಗ್ ಬಾಡಿ" ಎಂದು ಕರೆಯಲ್ಪಡುತ್ತವೆ. ಇವುಗಳು ಬಲಿತಾಗ ತನ್ನಷ್ಟಕ್ಕೇ ಒಡೆದು ಗಾಳಿಯಲ್ಲಿ ಸ್ಪೋರ್ ಕಣಗಳು ಸೇರಿ ವಾತಾವರಣದಲ್ಲಿ ಹಬ್ಬಿಕೊಂಡಿರುತ್ತವೆ.
ಕೈಯಲ್ಲೊಂದು ಪುಟ್ಟ ಕ್ಯಾಮರಾ ಹಿಡಿದು ತೋಟದಲ್ಲೊಮ್ಮೆ ಸುತ್ತಾಡಿ ಬರೋಣ. ಬಹಳ ಅಂದವಾದ ಅಣಬೆಗಳು, ಫಂಗೈಗಳು ಕಾಣಸಿಗುತ್ತವೆ. ಇವುಗಳ ಬಗ್ಗೆ ಸಸ್ಯಶಾಸ್ತೃದಲ್ಲಿ ಕಲಿಯಲಿಕ್ಕಿರುತ್ತದೆ. ಹಾಗೆ ಗೂಗಲ್
ನಲ್ಲಿ ಒಮ್ಮೆ ಜಾಲಾಡಿದರೆ ಚಿತ್ರ ಸಹಿತ ಬೇಕಾದಷ್ಟು ಮಾಹಿತಿ ಸಿಗುತ್ತದೆ.
|
Mycelium |
|
wild mushroom sp |
|
Dead mans finger fungus(xylaria) |
|
Peziza cup fungi |
|
shelf fungi |
|
spores releasing from ascus |
No comments:
Post a Comment