Saturday, December 15, 2012

ಸಸ್ಯಗಳ ಬೆಳವಣಿಗೆಯಲ್ಲಿ ಹಾರ್ಮೋನುಗಳ ಪಾತ್ರ


ಸಸ್ಯಗಳ ಬೆಳವಣಿಗೆಯಲ್ಲಿ ಹಾರ್ಮೋನುಗಳ ಪಾತ್ರ ತುಂಬಾ ಮುಖ್ಯವಾಗಿದೆ.ಪ್ರತಿಯೊಂದು ಬಗೆಯ ಮರ,ಬಳ್ಳಿ ಗಳಲ್ಲೂ ಬಹಳ ನಿರ್ದಿಷ್ಟ ಹಾರ್ಮೋನುಗಳಿವೆ.ಸುಮಾರು ವರ್ಷಗಳ ಹಿಂದಿನಿಂದಲೇ ಇವುಗಳ ಕುರಿತು ಸಂಶೋಧನೆ ನಡೆಯುತ್ತಾ ಬಂದಿದೆ.
ಜಪಾನಿನ ಹಳ್ಳಿಯೊಂದರಲ್ಲಿ ಬೆಳೆದ ಭತ್ತದ ಗಿಡಗಳೆಲ್ಲಾ ತುಂಬಾ ಉದ್ದವಾಗಿ ಬೆಳೆದು ಬಗ್ಗಿ ಮುರಿಯುತ್ತಿದ್ದವಂತೆ.ಇದರ ಕಾರಣವನ್ನು ತಿಳಿಯಲು ನಡೆಸಿದ ಪ್ರಯತ್ನವೆಲ್ಲಾ ವಿಫಲವದಾಗ ಸಂಶೋಧಕನೊಬ್ಬ ಆ ಗಿಡಗಳ ಕಾಂಡದೊಳಗೆ ಬೆಳೆಯುವ ಶಿಲೀಂದ್ರ ವೊಂದನ್ನು ಕಂಡುಹಿಡಿದ."ಜಿಬ್ಬರೆಲ್ಲಾ ಫುಜಿಕುರೋಯಿ" ಎಂದು ಕರೆಯಲ್ಪಡುವ ಈ ಶಿಲೀಂದ್ರದ ಕಿಣ್ವಗಳೇ ಗಿಡದ ಅತಿಯಾದ ಉದ್ದವಾಗುವಿಕೆಗೆ ಕಾರಣ ಎಂದು ತಿಳಿಯಲ್ಪಟ್ಟಿತು.ಈಗ ಜಿಬ್ಬರೆಲಿನ್ ಎಂಬ ಹಾರ್ಮೋನು "ಟಿಶ್ಯು ಕಲ್ಚರ್" ನಲ್ಲಿ ಬಹಳ ಉಪಯುಕ್ತವಾದ ಘಟಕವಾಗಿದೆ.

hormones induced tissue culture 
shoot proliferation by hormone induction
ಕೃಷಿಕರು ಕೆಲವು ಸಸ್ಯಗಳ ತುದಿ ಚಿಗುರನ್ನು ತುಂಡುಮಾಡಿ ಆ ಗಿಡದಲ್ಲಿ ಕವಲು ಗೆಲ್ಲುಗಳನ್ನು ಬೆಳೆಯುವಂತೆ ಮಾಡುವುದಿಲ್ಲವೇ?..ಕಾರಣವಿಷ್ಟೇ,ಗಿಡದ ಚಿಗುರುಗಳ ತುದಿಯಲ್ಲಿ "ಓಕ್ಸಿನ್" ಎಂಬ ಹಾರ್ಮೋನು ಶೇಖರವಾಗಿರುತ್ತದೆ.ಇದರ ಕಾರ್ಯವನ್ನು ಚಿಗುರು ತುಂಡು ಮಾಡಿ ತಡೆದಾಗ ಹಾರ್ಮೋನು ಗಿಡದ ಕೆಲ ಭಾಗಗಳಿಗೆ ಪಸರಿಸಿ ಅಲ್ಲಿ ಕವಲು ಚಿಗುರುಗಳನ್ನು ಬೆಳೆಯುವಂತೆ ಮಾಡುತ್ತದೆ.ಈ ಹಾರ್ಮೋನು "ಟಿಶ್ಯು ಕಲ್ಚರ್"ನ ಲ್ಲಿ ಕೋಶ ವಿಭಜನೆಗೆ ಅತ್ಯಂತ ಉಪಯುಕ್ತವಾಗಿದೆ.

ಎಲೆಯೊಂದು ಹಣ್ಣಾದಾಗ ನೆಲಕ್ಕೆ ಬೀಳಬೇಕು ತಾನೇ?..ಇಲ್ಲಿ "ಆಬ್ಸಿಸಿಕ್ ಆಸಿಡ್" ಎಂಬ ಹಾರ್ಮೋನು ಎಲೆಯ ತೊಟ್ಟಿನ ಬುಡದಲ್ಲಿ ಶೇಖರಣೆಯಾಗಿ ಅಲ್ಲಿಯ ಕೋಶಗಳನ್ನು ಶಿಥಿಲವಾಗುವಂತೆ ಮಾಡಿದಾಗ ತನ್ನಿಂತಾನೆ ಹಣ್ಣೆಲೆಯು ಗಿಡದಿಂದ ಬೇರ್ಪಡುವುದು.

ಕಾಯಿ ಹಣ್ಣಾಗಲು ಕೂಡಾ ಬೇಕಿದೆ ಹಾರ್ಮೋನು ಸಂಘ..ಕಾಯೊಳಗೆ "ಎಥೀಲಿನ್ ಹಾರ್ಮೋನು"  ಕಾರ್ಯವೆಸಗಿದಾಗ ಹಣ್ಣಾಗುವಿಕೆ ಎಂಬುದು ಸಾಧ್ಯ.
ಹಾಗೆಯೇ ಕೆಲವೊಮ್ಮೆ ಗಿಡಗಳ ಕಾಂಡಕ್ಕೆ ಪೆಟ್ಟಾಗಿದ್ದರೆ ಸ್ವಲ್ಪ ದಿನ ಬಿಟ್ಟು ನೋಡಿ, ಅಲ್ಲಿ ಕೋಶ ವಿಭಜನೆಯಾಗಿ ಗಂಟಾದ ಪೊರೆಯೊಂದು ಇರುವುದು ಗಮನಿಸಿ.ಇದು ಗಾಯ ವಾಸಿಯಾಗಲು ಹಾಗೂ ಸಸ್ಯದ ರಸ ಸೋರಿ ಹೋಗದಂತೆ ತಡೆಯಲು  ಹಾರ್ಮೋನುಗಳೇ ಪ್ರೇರೇಪಿಸಿದ ಕೋಸ ವಿಭಜನೆಯ ಕ್ರಿಯೆಯಾಗಿರುತ್ತದೆ.
ಬೆಳಕಿನೆಡೆಗೆ ರೆಂಭೆಗಳು ವಾಲುವುದಕ್ಕೂ,ಬೇರುಗಳು ನೆಲದೊಳಗೆ ಇಳಿಯುವುದಕ್ಕೂ  ಹಾರ್ಮೋನುಗಳೇ ಕಾರಣವಾಗಿದೆ.

ಹೀಗೆ ಕೆಲವು ಹಾರ್ಮೋನುಗಳು ಸಹಜವಾಗಿಯೇ ಪ್ರಕೃತಿಯಲ್ಲಿದ್ದರೆ ಕೃತಕವಾಗಿ ರಾಸಾಯನಿಕಗಳಿಂದ ತಯಾರಿಸಿದ ಹಾರ್ಮೋನುಗಳನ್ನು ಲ್ಯಾಬುಗಳಲ್ಲಿ ಬಳಸಲಾಗುತ್ತದೆ.

2 comments:

  1. ಚೆನ್ನಾಗಿದೆ. ಹೀಗೆ ಪುಟ್ಟ ಬರಹಗಳಲ್ಲಿರುವ ವಿವರಣೆಯನ್ನು ಅರಿತುಕೊಳ್ಳುವುದು ಸುಲಭ.

    ReplyDelete
  2. ರಶ್ಮಿ ಚನ್ನಾಗಿದೆ ಚಿಕ್ಕ ಚೊಕ್ಕ ಮಾಹಿತಿಯುಕ್ತ ಲೇಖನ.

    ReplyDelete