Saturday, March 5, 2016

ಚಿನ್ನದ ಅಕ್ಕಿ - Golden rice

                                               
ಅಮೆರಿಕದ ಯು.ಎಸ್.ಪಿ.ಟಿ.ಒ ಸಂಸ್ಥೆಯು ಇತ್ತೀಚೆಗೆ ಚಿನ್ನದ ಅಕ್ಕಿ ಅಂದರೆ ""ಗೋಲ್ಡನ್ ರೈಸ್" ಎಂಬ ಯೋಜನೆಗೆ ಒಂದು ಮಾನವೀತೆಯ ಪ್ರಶಸ್ತಿ (ಪೇಟೆಂಟ್ಸ್ ಫೊರ್ ಹ್ಯುಮಾನಿಟಿ") ಯನ್ನು ನೀಡಿತು.ಇದು ಹಸಿವನ್ನು ನೀಗಿಸುವ ಸಂಶೋಧನೆಗೆ ಸಂದ ಪುರಸ್ಕಾರ.ಅಂತರ ರಾಷ್ಟೃ ಮಟ್ಟದಲ್ಲಿ ಬಡವರಿಗೆ ಉಪಯೋಗವಾಗುವ ವಿನೂತನ ಯೋಜನೆಗಳಿಗೆ ಈ ಪುರಸ್ಕಾರ ಸಿಗುವುದು."

ಏನಿದು ಚಿನ್ನದ ಅಕ್ಕಿ?
golden rice v/s common rice
ಡಫೋಡಿಲ್ ಎಂಬ ಹಳದಿ ಹೂವುಗಳ ಗಿಡದಂದ ತೆಗೆದ ಜೀನು(ವಂಶವಾಹಿ)ಗಳನ್ನು ಭತ್ತದ ಗಿಡದ ಜೀನುಗಳೊಂದಿಗೆ ಸೇರಿಸಿ ಪಡೆದ ತಳಿಯೇ ಚಿನ್ನದ ಅಕ್ಕಿ. ಎರ್ವಿನಿಯಾ ಬ್ಯಾಕ್ಟೀರಿಯಾ (ಮಣ್ಣಿನಲ್ಲಿರುವ ಏಕಕೋಶ ಜೀವಿ) ಅಥವಾ ಹರಿವೆ ಗಿಡ ಹೀಗೆ ಪ್ರಕೃತಿ ಯಲ್ಲಿ ದೊರೆಯುವ ಯಾವುದೇ ಜೀವ ವೇವಿಧ್ಯಗಳನ್ನು ಉಪಯೋಗಿಸಿ ಕುಲಾಂತರಿ ಗಿಡಗಳನ್ನು ಸೃಷ್ಟಿಸಬಹುದು.ಬೀಟಾ ಕೆರೋಟಿನ್ ಎಂಬ ದೇಹಕ್ಕೆ ಉಪಯುಕ್ತವಾದ ಧಾತುವನ್ನು ಹೀಗೆ ಜಗತ್ತಿನ ಮುಖ್ಯ ಬೆಳೆಯಲ್ಲಿ ಬೆಳೆದರೆ ಉಪಕಾರವಾದೀತು ಎಂಬ ಯೋಚನೆಯ ಫಲವೇ ಚಿನ್ನದ ಅಕ್ಕಿ.ಅಮೇರಿಕದ ಪ್ರಯೋಗಾಲಯದಲ್ಲಿ ಹುಟ್ಟಿ ನಿಧಾನವಾಗಿ ಭಾರತದಲ್ಲಿ ಬೇರೂರಲು ಹೊರಟಿರುವ ಈ ತಳಿಯ ಬಗ್ಗೆ ಎಲ್ಲರಿಗೂ ಗೊತ್ತಿರಲೇಬೇಕಾದ ಅವಶ್ಯಕತೆಯಿದೆ.

ಉಪಯೋಗಗಳು:
ವಿಟಮಿನ್ ಎ ಯನ್ನು ಹೇರಳವಾಗಿ ಎಲ್ಲರಿಗೂ ದೊರೆಯುವಂತೆ ಮಾಡಬಹುದು.ಇದರಂದ ನಿಶಾಂಧತೆಯನ್ನು ನಿವಾರಿಸಬಹುದು.


ದುರುಪಯೋಗಗಳು:
  • ಕ್ರೋಸ್ ಪೋಲಿನೇಶನ್ ಆಗಬಹುದು.ಅಂದರೆ ಕುಲಾ0ತರಿ ತಳಿಯು ಊರತಳಿಯೊಂದಿಗೆ ಸಂಕರಗೊಂಡು ತಳಿಗಳ   ಕಲಬೆರಕೆಯಾಗಬಹುದು.
  •  ಜೆನೆಟಿಕ್ ಇರೋಶನ್ ಅಂದರೆ ತರ-ತರದ ದೇಶಿ ತಳಿಗಳ ನಿಮರ್ೂಲನೆಯಾಗಿ ಮುಂದಿನ ಪೀಳಿಗೆಗೆ ದೋರಕುವ ಜೀವ ವೈವಿಧ್ಯತೆ ನಾಶವಾಗಬಹುದು.
- ವಿಟಮಿನ್ ದೊರಕಲು ಎಷ್ಟೊಂದು ವಿಧದ ಹಣ್ಣು,ತರಕಾರಿಗಳಿವೆ.ಅವುಗಳನ್ನು ಹೆಚ್ಚು ಬೆಳಿಸಿದರಾಯಿತು.
ಆಹಾರ ಕ್ರಾಂತಿ ಸೃಷ್ಟಿಸಿದರೆ ವಿಜ್ನಾನಿಗಳಿಗೆ ಪ್ರಶಸ್ತಿಗಳ ಸುರಿಮಳೆಯಾದೀತು...ಉದ್ದೇಶವು ಒಳ್ಳೆಯದಿರಬಹುದು..ಆದರೆ ಪ್ರಕೃತಿಯ ಮಡಿಲನ್ನು ಬರಿದು ಮಾಡಿದರೆ ಮತ್ತೆ ಮರುಸೃಷ್ಟಿಸಲು ದೇಸೀ ತಳಿ ಸಂಪತ್ತು ನಮ್ಮ ಜೊತೆಗಿರುವುದೇ?

Sunday, February 28, 2016

ಸಂಶೋಧನೆಯ ಹೆಜ್ಜೆಗಳು...ಅಂಬೆಗಾಲು-2

2010 ಮಾಚರ್್ ತಿಂಗಳಿನಲ್ಲಿ  ಸ್ನಾತಕೋತ್ತರ ಪರೀಕ್ಷೆಗಳು ಮುಗಿದ ಹೊತ್ತಿಗೆ ನನಗೊಂದು ಬೇಸಿಗೆ ಸಂಶೋಧನೆಯ ಚೆಂದದ ಅವಕಾಶ ದೊರಕಿತು. ಡಾ.ರಾಘವೇಂದ್ರ ರಾವ್ ಎಂಬ ಸಸ್ಯ ತಜ್ಞರ ಬಳಿ ಸಸ್ಯ ವರ್ಗಇಕರಣ ಶಾಸ್ತೃ ಕಲಿಯುವ ಸುವರ್ಣ ಅವಕಾಶ. ಬೆಂಗಳೂರಿನಲ್ಲಿರುವ ಭಾರತೀಯ ಓéಷಧ ಮತ್ತು ಪರಿಮಳ ಸಸ್ಯಗಳ ಸಂಶೋಧನಾ ಸಂಸ್ಥೆಯಲ್ಲಿ 2 ತಿಂಗಳು ಕಲಿತದ್ದೇ ಹೆಚ್ಚು.  ಆ ಚಿಕ್ಕ ಚೊಕ್ಕ ಸಮಯಾವಕಾಶವೇ ನಾನು ಸಂಶೋಧನೆಯಲ್ಲಿ ಬೇರೂರಲು ಸಹಾಯ ಮಾಡಿದು.್ದ

Dr.R.R Rao
ಮೊದಲ ದಿನ 5-6-2010 ರಂದು 10.30 ಕ್ಕೆ ನಾನು ಆ ವಿಜ್ಷಾನಿಯನ್ನು ಭೇಟಿಯಾಗಲು ಹೋದಾಗ ತುಂತುರು ಮಳೆ ಸುರಿಯುತ್ತಿತ್ತು. ಮೂಲೆ ಛೇಂಬರಿನಿಂದ ದೊಡ್ಡ ಸ್ವರವೊಂದು ಹಿಂದಿ,ಕನ್ನಡ,ಆಂಗ್ಲ ಭಾಷೆಗಳ ಮಿಶ್ರಣದಲ್ಲಿ ಯಾರದ್ದೋ ಬೆವರಿಳಿಸುತ್ತಿದ್ದುದು ಗೊತ್ತಾಗುತ್ತಿತ್ತು. ಬಾಗಿಲ ಬಳಿ ಹೋಗಿ ವಿಚಾರಿಸಿದರೆ ಅವರೇ ನನ್ನ ಗೈಡ್. ಅವಕಾಶ ದೊರಕಿದ್ದೇ ನನಗೆ ಗತ್ತು ಬಂದಿತ್ತು.ಆದರೆ ಇಲ್ಲಿ ನಾನೇನೂ ಅಲ್ಲ ಅಂತ ಕೆಲವೇ ನಿಮಿಷದಲ್ಲಿ ಮನದಟ್ಟಾಗಿತ್ತು. "ನರಪೇತಲನಂತೆ ಇದ್ದಿ ಏನು ಮಾಡೋದು ಇಲ್ಲಿ"...... ಏನೋ ಬರೆಯುತ್ತಾ, ತನ್ನ ಪಿ.ಎ ಗೆ ಏನೋ ಗದರುತ್ತಾ ರಾವ್ ಸರ್ ಓರೆಗಣ್ಣಲ್ಲಿ ನನ್ನನ್ನೂ ಗಮನಿಸುತ್ತಿದುದು ನನಗೆ ಗೊತ್ತಾಗಿರಲಿಲ್ಲ. ಅಕ್ಕ ತೆಗೆಸಿಕೊಟ್ಟಿದ್ದ ಆ ಹೊಸ ಚೂಡಿದಾರದಲ್ಲೂ ನಾನು ಜೋಕರ್ ಥರ ಕಾಣಿಸುತ್ತಿದ್ದೆ!. "ಸಣ್ಣ ಕೊಠಡಿಯಿದು ನನ್ನ ಎದುರುಗಡೆ ಕುಚರ್ಿಯಲ್ಲಿ ಕೂರು" ಅಂಥ ಹೇಳಿ ಅಷ್ಟೇ ವೇಗದಲ್ಲಿ ನಾನು ಮಾಡಬೇಕಾದ ಕೆಲಸ,ಬೇಕಾದ ಶಿಸ್ತು ಎಲ್ಲವನ್ನೂ ಹೇಳಿ ಸರ ಸರ ಹೊರ ಹೋಗಿ ಬರೇ 5 ನಿಮಿಷ ದಲ್ಲಿ 10 ಗಿಡಗಳೊಂದಿಗೆ ಮರಳಿ ಬಂದು 5 ನಿಮಿಷದಲ್ಲಿ ನಾನು ಆ ಗಿಡಗಳ ಗುಣ ವಿಷೇಶಗಳನ್ನು ಹೇಳಬೇಕಂಬ ಆಜ್ಞೆ. ದಡ ಬಡ ಹೇಳಿ ನನಗೆ ಗೊತ್ತಿದ್ದ ಗಿಮಿಕ್ ಗಳನ್ನೆಲ್ಲಾ ಪ್ರಯೋಗಿಸಿದೆ.ಮತ್ತೆ ಅವರು ಆ ದಿನ ನನ್ನ ಮಾತನಾಡಿಸಲೇ ಇಲ್ಲ. ಸಂಜೆ 5ಕ್ಕೆ ನಾನು ಗೀಚಿದ್ದರ  ನೋಡಿದ ಸರ್ ಹೇಳಿದ್ದು. "ಅಛ್ಛ..........ಛಲೇಗಾ.. ಕಲ್ ಆಓ...ಯು ವಿಲ್ ಡು ಸಂಮ್ಥಿಂಗ್.. ಐ ಯಾಮ್ ಶುವರ್". ಮರುದಿನ ದಿಂದ ನಾನು ಹೆಚ್ಚು ಶ್ರದ್ಧೆ ವಹಿಸಿ ಕೆಲಸ ಮಾಡತೊಡಗಿದ್ದೆ. "ಒಲಿಯಾ ಡೈಯೊಕಾ" ಎಂಬ ಮಲ್ಲಿಗೆ ಕುಟುಂಬದ ಮರ ಪ್ರಭೇದವೊಂದು ನನಗೆ ಬಹಳ ಕೆಲಸ ಹಿಡಿಸಿತ್ತು. 2 ಕೇಸರ, ವಿರುಧ್ಧ ಎಲೆಗಳು ಇಷ್ಟೇ ಸಾಕು ಇದರ ಜಾಡು ಹಿಡಿಯಲು.ಸರ್ ಹೇಳಿ ಕೊಟ್ಟ ಇಂತಹ ಸೂತ್ರಗಳೆೆ ಸಸ್ಯಗಳನ್ನು ಹೆಸರಿಸಲು ನನಗೆ ಇಂದು ಸಹಕಾರಿ. ಆಪರೂಪದ ಈ ಕಲೆಯನ್ನು ನನಗೆ 2 ತಿಂಗಳಲ್ಲಿ ಧಾರೆ ಎರೆದ ಈ ಜ್ಞಾನಿಯನ್ನು ಎಂದೂ ಮರೆಯಲಾಗದು.

OLEA DIOICA Roxb. In flower

OLEA DIOICA In fruit

Saturday, February 13, 2016

ಸಂಶೋಧನೆಯ ಹೆಜ್ಜೆಗಳು...ಅಂಬೆಗಾಲು-1

ನನ್ನ ಬದುಕಿಗೆ ಹೊಸ ಆಯಾಮವನ್ನು ಕೊಟದ್ದ್ಟು ಸಂಶೋದನೆ ಅಂದರೆ ಪಿ.ಹಚ್.ಡಿ ರಿಸರ್ಚ್.ಇಲ್ಲಿ ನಾನು ಬಹಳ ಕಲಿತದ್ದಿದೆ.ನನ್ನನ್ನು ತಿದ್ದಿ,ಬದುಕಲು ಕಲಿಸುತ್ತಿರುವುದು ಇದೇ ಸಂ-ಶೋಧನೆ.
ಸಂಶೋಧನೆ ಮಾಡ ಬಯಸುವ ಪ್ರತಿಯೊಬ್ಬರಿಗೂ ಈ ಬರಹಗಳಿಂದ ಉಪಕಾರವಾಗದೀತು.ಸಂಶೋಧಕ/ಕಿ ಯರು ಬದುಕನ್ನ ಎಷ್ಟರ ಮಟ್ಟಿಗೆ ಪ್ರೀತಿಸಬಲ್ಲರು ಅಥವಾ ದೃಷ್ಟಿಕೋನ ಹೇಗಿರಬಹುದು, ಸಂಶೋಧನೆ ಅಂದರೆ ಏನೆಂದು ಈ ಲೇಖನಗಳಿಂದ ತಿಳಿಸುವ ಪ್ರಯತ್ನವಿದು.ಪ್ರತಿಯೊಬ್ಬ ಮಗುವಿನಲ್ಲೂ ಹುಟ್ಟುವ ಸಂಶೋಧಕ ವರ್ಷಗಳು ಉರುಳಿದಂತೆ ಸಂಶೊಧನೆ ಅಳಿದು ಸಂದೇಹಗಳೆ ತುಂಬಿರುತ್ತವೆ.ಇಂದಿನ ಸ್ಪರ್ಧಾತ್ಮಕ ಜಗತ್ತು ಎಷ್ಟು ಗೊಂದಲಗಳನ್ನು ಸೃಷ್ಟಿಸಿದೆಯೋ ಅಷ್ಟೆ ಅವಕಾಶಗಳನ್ನೂ ನೀಡಿದೆ. 99 ಶೇಕಡ ಪರಿಶ್ರಮ ಪಟ್ಟರೆ 1 ಶೇಕಡ ಅದೃಷ್ಟ ಒಟ್ಟಿಗಿರುತ್ತದೆ ಆದರೆ ಗುರಿ ಸ್ಪಷ್ಟವಾಗಿರಬೇಕು.ಹೆಣ್ಣಿಗೆ ಮಿತಿಗಳನ್ನು ಮೀರದೆ ಸಾಧಿಸುವಷ್ಟೆ ಅವಕಾಶ ಆದರೆ ಗಂಡಿಗೆ (ಹೆಚ್ಚಾಗಿ) ಅಂತಹ ಗೊಂದಲ ಬೇಕಿಲ್ಲ.ನನ್ನಲ್ಲಿ ಏನದರೂ ಸಾಧಿಸು ಅನ್ನುವ ಛಲ ಹುಟ್ಟಿಸಿದ್ದು ನನ್ನ ತಪ್ಪುಗಳು, ಸೋಲುಗಳು, ದೌರ್ಬಲ್ಯಗಳು ಹಾಗೂ ನನಗಾದ ಅವಮಾನಗಳು.
ಇಂದು ನಾನು ಸಸ್ಯ ಸಂಶೋಧನಾ ಕ್ಷೇತ್ರ ದಲ್ಲಿ ಬೇರೂರುವ ಭರವಸೆಯಲ್ಲಿದ್ದೇನೆ.
ಕೆಲವೊಮ್ಮೆ ನಗಿಸುವ,ಅಳಿಸುವ ಅಥವಾ ಹುಚ್ಚು ಹಿಡಿಸುವ "ಸಂಶೋಧನ' ಮಾಡಿದವರಿಗೆ ಗೊತ್ತು ಅದರ ಗತ್ತು. ನಾನು ಸಸ್ಯ ಶಾಸ್ತ್ರ ವರ್ಗೀಕರಣದಲ್ಲಿ ಸಂಶೋಧನೆಯನ್ನು ಮಾಡುತ್ತಿದ್ದೇನೆ. ನವಿರಾದ ಹಾಸ್ಯ ಸನ್ನಿವೇಶಗಳು, ಗಂಭೀರ ವಿಷಯಗಳು ಕೂಡಾ ಹಾದು ಹೋಗುವ ನನ್ನೀ ನೆಚ್ಚಿನ ಹಾದಿಯನ್ನು ನೀವೂ ತಿಳಿಯಿರಿ.


Tuesday, April 2, 2013

ಮುಪ್ಪು ಮತ್ತು ಟೀಲೋಮಿಯರ್ ಟೊಪ್ಪಿ


ಶೈಶವ,ಬಾಲ್ಯ,ತಾರುಣ್ಯ,ವೃಧ್ಧಾಪ್ಯ ಎಂಬುದು ಬದುಕಿನ ಹಂತಗಳು.ಆದರೆ ವೃಧ್ಧಾಪ್ಯ ವನ್ನು ಸಂತಸದಿಂದ ಸ್ವೀಕರಿಸುವ ಮಂದಿ ಬೆರಳೆಣಿಕೆ ಯಷ್ಟಿರಬಹೂದೇನೋ!. ಏನೆಲ್ಲಾ ಕಸರತ್ತುಗಳನ್ನು ಮಾಡಿಯಾದರೂ ಸುಕ್ಕುಗಟ್ಟುತ್ತಿರುವ ಚರ್ಮವನ್ನು ನಯವಾಗಿಸಿ ಮುಪ್ಪನ್ನು ಮರೆಮಾಚುವ ಚಲನಚಿತ್ರತಾರೆಯರು,ರೂಪದರ್ಶಿಗಳು ಈಗ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಬೊಟೋಕ್ಸ್‌ ಚುಚ್ಚುಮದ್ದನ್ನು ಕಣ್ಣಿನ ಕಪ್ಪು ವರ್ತುಲ ಚರ್ಮಕ್ಕೋ ಅಥವಾ ಹಣೆ ಭಾಗಕ್ಕೆ ಚುಚ್ಚುವ ಮೂಲಕ ನೆರಿಗೆ ಮೂಡಿದ ಚರ್ಮವನ್ನು ತಾರುಣ್ಯ ಹಾಗೂ ಕಾಂತಿಯಿಂದ ಕಾಣುವಂತೆ ಮಾಡಲಾಗುತ್ತದೆ.

Chlostridium botulinum bacter
 ಇಲ್ಲಿ ಬೊಟೋಕ್ಸ್ ಮದ್ದು ಹೇಗೆ ತಯಾರಿಸಲಾಗುತ್ತದೆ ಎಂದರೆ, ಎಂಬ ಬ್ಯಾಕ್ಟೀರಿಯಾದಿಂದ ತೆಗೆದ(ನ್ಯೂರೋಟಾಕ್ಸಿನ್‌))))೦) ಸತ್ವವನ್ನು ಹದಮಾಡಿ ಬಹಳ ಅಲ್ಪ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ.ಈ ಮದ್ದು ಮುಖ ಚರ್ಮದ ನರಕೋಶಗಳ ತುದಿಯಲ್ಲಿರುವ ಅಸಿಟೈಲ್ಕೋಲಿನ್ ಎಂಬ ದ್ರವಕ್ಕೆ ಸೇರಿಕೊಂಡು ಒಂದು ನರಕೋಶ ದಿಂದ ಇನ್ನೊಂದು ನರ ಕೋಶಕ್ಕೆ ರವಾನೆಯಗುವ ಸಂದೇಶಗಳನ್ನು ತಡೆಹಿಡಿಯುತ್ತದೆ.ಹೀಗೆ ಮಿದುಳಿನಿಂದ ಸಾಗಿಬಂದ  ಯಾವುದೇ ಮಾಹಿತಿ ಲಭ್ಯವಾಗದ ಹಿನ್ನಲೆಯಲ್ಲಿ ಮುಖದ ನರಗಳು ಸಮ್ಮನಿದ್ದುಬಿಡುತ್ತವೆ.ಇಲ್ಲಿಗೆ ಚರ್ಮದ ಮುಪ್ಪಾಗುವಿಕೆ ಎಂಬ ಪ್ರಕ್ರಿಯೆಗೆ  ತಾತ್ಕಾಲಿಕವಾಗಿ  ತಡೆಹಿಡಿದಂತಾಯಿತು.ಬೊಟೋಕ್ಸ್ ಮದ್ದು ವಿಪರೀತ ತಲೆನೋವಿಗೆ(ಮೈಗ್ರೇನ್) ಕೂಡಾ ಉಪಯೋಗಿಸುತ್ತಾರೆ.ಆದರೆ ಚರ್ಮದ ಅಂದಕ್ಕಾಗಿ ಇದರ ಬಳಕೆ ಹೆಚ್ಚಾದರೆ ತಂಬಾ ಅಡ್ಡಪರಿಣಾಮಗಳೂ ಇವೆ.


       ಹೀಗೆ, ಎಷ್ಟೇ ಹೆಣಗಿದರೂ ಮುಪ್ಪು ಎನ್ನುವುದು ಯಾರನ್ನೂ ಬಿಡದೆ ಎಲ್ಲರಿಗೂ ಬಂದೇ ಬರುವುದಕ್ಕೆ ಒಂದು ಮೂಲ ಕಾರಣವಿರಬೇಕು ಅಲ್ಲವೇ? ಇಲ್ಲಿ ಬಹಳ ಸಂಕೀರ್ಣವಾಗಿ ನಮ್ಮ ಜೀನುಗಳ ಮಟ್ಟಕ್ಕಿಳಿದು ವಿವರಣೆ ನೀಡಬೇಕಾಗಿದೆ.ಆದರೂ ವಿಷಯವನ್ನು ಸರಳವಾಗಿಸಲು ಪ್ರಯತ್ನಿಸುತ್ತೇನೆ.

   ತಾಯಿಯಿಂದ ಮತ್ತು  ತಂದೆಯಿಂದ ದೊರೆತ ತಲಾ 23 ಕ್ರೋಮೋಸೋಮುಗಳು  ಸೇರಿ 46 ಕ್ರೋಮೋಸೋಮುಗಳು ಒಂದು ಆರೋಗ್ಯ ಮಗುವಿನಲ್ಲಿ ಇರಬೇಕು.ಅನುವಂಶಿಕ ಗುಣಗಳು ಹಾಗೂ ವಿಭಿನ್ನತೆಗೆ ಕಾರಣವಾಗುವ ಈ ಅತಿ ಸೂಕ್ಷ್ಮರೂಪದ ಕ್ರೋಮೋಸೋಮುಗಳ ತುದಿಗಳಲ್ಲಿರುವ ಟೀಲೋಮಿಯರ್ ಟೊಪ್ಪಿಗಳೇ ಪ್ರಾಯವಗುವಿಕೆಯನ್ನು ಸೂಚಿಸುವ ಮೂಲ ಪ್ರತಿನಿಧಿಗಳು. ಈ ಟೊಪ್ಪಿಗಳ ಕೆಲಸವೆಂದರೆ ಕ್ರೋಮೋಸೋಮುಗಳು ಒಂದಕ್ಕೊಂದು ಅಂಟುವುದನ್ನ ತಡೆಯುವುದು ಮತ್ತು ಕ್ರೋಮೋಸೋಮುಗಳ ಶಿಥಿಲವಾಗುವಿಕೆಯನ್ನು ತಡೆಯುವುದು.

chromosomes with telomere
ಕಾಲ ಸರಿದಂತೆ ಟೀಲೋಮಿಯರ್ ಟೊಪ್ಪಿಗಳು ಕೂಡಾ ಶಿಥಿಲವಾಗಲು ತೊಡಗಿದಂತೆ (ನಮ್ಮ ಮೂಲ ಘಟಕವಾದ ಕ್ರೋಮೋಸೋಮುಗಳು ನಿಧಾನವಾಗಿ ಸವೆದಂತೆ) ನಮ್ಮ ಶರೀರದಲೂ ್ಲಬದಲಾವಣೆ ಯಾಗುತ್ತಿರುತ್ತದೆ. ಕೋಶ ವಿಭಜನೆ,ಕೋಶಗಳ ಸಾಯುವಿಕೆ ಇತ್ಯಾದಿ.
  ಮನುಷ್ಯರು  ಸರಾಸರಿ 70 ರಿಂದ 80 ವರ್ಷ ಬದುಕಬಹುದು.ಹಾಗಾಗಿ ಇಲ್ಲಿ ಹೇಳಿದ ಪ್ರಕ್ರಿಯೆ ಕೂಡಾ ತುಂಬಾ ನಿಧಾನ ಗತಿಯಲ್ಲಿಯೇ ಇರುತ್ತದೆ.
 ವಿಜ್ಞಾನಿಗಳು ಇದರ ಬಗ್ಗೆ ಅಧ್ಯಯನ ನಡೆಸುತ್ತಲೇ ಇದ್ದಾರೆ.ಆದರೂ ಪ್ರಕೃತಿಯ ನಿಯಮಕ್ಕೆ ವಿರುಧ್ಧವಾಗಿ ನಡೆಯಲು ನಮಗೆ ಎಂದಿಗೂ ಸಾಧ್ಯವಾಗದು

Monday, December 24, 2012

"ಸ್ಕಿಝೋಫ್ರೇನಿಯಾ" ಎಂಬ ಮಾನಸಿಕ ಕಾನ್ಸರ್
"ಸ್ಕಿಝೋಫ್ರೇನಿಯಾ" ಎಂಬ ಶಬ್ಧವೇ ಒಂಥರಾ ಇದೆ ಅಲ್ಲವೇ.ನೂರು ಜನರಲ್ಲಿ ಒಬ್ಬನಿಗೆ ಕಾಡುವ ಕಾನ್ಸರ್ ಇದು.ಮನಸ್ಸಿಗೆ ಸಂಬಂದಿಸಿದ್ದು ಅಂದರೆ ಮಾನಸಿಕ ಖಾಯಿಲೆ.ಪೇಲವ ಮುಖ ಹೊತ್ತು ತನ್ನೊಳಗೇ ಸಮಾಲೋಚನೆ ನಡೆಸುತ್ತಾ ವಿಚಿತ್ರ ಭಂಗಿಯಲ್ಲಿ ಕಾಣಲ್ಪಡುವ ಇವರನ್ನು ಸಮಾಜವು ನೋಡುವ ರೀತಿಯೇ ಬೇರೆ.ಶವ ಸಂಸ್ಕಾರದ ಸಮಯದಲ್ಲಿ ನೆರೆದವರೆಲ್ಲಾ ಗಂಭೀರವಾಗಿದ್ದರೆ ಈತ ಮಾತ್ರ ಅದು ಯಾವುದೋ ಹಾಸ್ಯ ಸನ್ನಿವೇಶದಂತೆ ನಗುತ್ತಿರುತ್ತಾನೆ.ಸಣ್ಣ ಅಪಹಾಸ್ಯವನ್ನೂ ಸಹಿಸದೆ ಮಾನಸಿಕವಾಗಿ ಕುಗ್ಗುತ್ತಾ ಶಾರೀರಿಕ ಖಾಯಿಲೆಗಳೂ ಹಿಡಿದು ವ್ಯಕ್ತಿಯೊಬ್ಬ ಹುಚ್ಚನಾಗಿ ಬಿಡುವ ಈ ಅವಸ್ಥೆಗೆ ನಿಜವಾದ ಕಾರಣವೇ ಮೆದುಳಲ್ಲಿರುವ ನ್ಯೂರೋನುಗಳ ಶಿಥಿಲವಾಗುವಿಕೆ.ಇಲ್ಲಿ ಸಮಾಜದೊಂದಿಗೆ ಬೆರೆಯುವ ಹಾಗೂ ವಿಶ್ಲೇಷಣೆಗೆ ಸಂಬಂದಿಸಿ ಕೆಲಸ ಮಾಡುವ ಕೋಶಗಳು ಸಾಯತೊಡಗುತ್ತವೆ.
ನೋಡುಗರಿಗೆ ತೀರಾ ರೇಜಿಗೆ ಹುಟ್ಟಿಸುವ ಇಂತಹ ಮಂದಿ ಕಾಣಸಿಗುವುದು ಈಗ ಸಾಮಾನ್ಯ.ತಮ್ಮದಲ್ಲದ ತಪ್ಪಿಗೆ ವಂಶಪಾರಂಪರ್ಯವಾಗಿ (ಜೀನುಗಳ ಮೂಲಕ) ಹಿರಿಯರ ಬಳುವಳಿ ಉಡುಗೊರೆ ಇದು.ಇನ್ನು ಕೆಲವರಲ್ಲಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲಾಗದೆ ಅಥವಾ ನಿರಂತರವಾಗಿ ಬಾಲ್ಯದಲ್ಲಿ ಅವಮಾನಕ್ಕೊಳಗಾದರೆ ಕಾಡುವ ಹತಾಶೆಯ ಪರಿಣಾಮ.ರೋಗವನ್ನು ಆರಂಭದ ಹಂತದಲ್ಲಿ ಯೋಗ,ದ್ಯಾನಗಳಿಂದ ತಡೆಯಬಹುದು.
ಆದರೆ ಒಂದು ಹಂತ ದಾಟಿದ್ದರೆ ನಿರಂತರ ಚಿಕಿತ್ಸೆಯ ಅಗತ್ಯವಿದೆ.

ಈ ಖಾಯಿಲೆಯ ಬಗ್ಗೆ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೇ ಇವೆ."ಸ್ಕಿಝೋಫ್ರೇನಿಯಾ" ಎಂಬ ವೈಜ್ಞಾನಿಕ ಮಾಸ ಪತ್ರಿಕೆಯೇ ಮಾರುಕಟ್ಟೆಯಲ್ಲಿದೆ.
ಮಾತ್ರ ಈ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.ವಿಪಯರ್ಾಸವೆಂದರೆ ರೋಗಿಯು ತನಗಿರುವ ರೋಗದ ಅರಿವೆಯಿಲ್ಲದೆ ಅಲೆದಾಡುತ್ತಿದ್ದರೆ,ಪ್ರಜ್ಞಾವಂತ ನಾಗರೀಕರ ಸಮಾಜ ಮಾತ್ರ ಇಂಥಹ ನತದೃಷ್ಟರನ್ನು ಮರುಳನೆಂದೋ ಹುಚ್ಚನೆಂದೋ ಜರೆಯುತ್ತಾ ಮುಸಿ ಮುಸಿ ನಗುತ್ತಿದೆ.

Saturday, December 15, 2012

ಸಸ್ಯಗಳ ಬೆಳವಣಿಗೆಯಲ್ಲಿ ಹಾರ್ಮೋನುಗಳ ಪಾತ್ರ


ಸಸ್ಯಗಳ ಬೆಳವಣಿಗೆಯಲ್ಲಿ ಹಾರ್ಮೋನುಗಳ ಪಾತ್ರ ತುಂಬಾ ಮುಖ್ಯವಾಗಿದೆ.ಪ್ರತಿಯೊಂದು ಬಗೆಯ ಮರ,ಬಳ್ಳಿ ಗಳಲ್ಲೂ ಬಹಳ ನಿರ್ದಿಷ್ಟ ಹಾರ್ಮೋನುಗಳಿವೆ.ಸುಮಾರು ವರ್ಷಗಳ ಹಿಂದಿನಿಂದಲೇ ಇವುಗಳ ಕುರಿತು ಸಂಶೋಧನೆ ನಡೆಯುತ್ತಾ ಬಂದಿದೆ.
ಜಪಾನಿನ ಹಳ್ಳಿಯೊಂದರಲ್ಲಿ ಬೆಳೆದ ಭತ್ತದ ಗಿಡಗಳೆಲ್ಲಾ ತುಂಬಾ ಉದ್ದವಾಗಿ ಬೆಳೆದು ಬಗ್ಗಿ ಮುರಿಯುತ್ತಿದ್ದವಂತೆ.ಇದರ ಕಾರಣವನ್ನು ತಿಳಿಯಲು ನಡೆಸಿದ ಪ್ರಯತ್ನವೆಲ್ಲಾ ವಿಫಲವದಾಗ ಸಂಶೋಧಕನೊಬ್ಬ ಆ ಗಿಡಗಳ ಕಾಂಡದೊಳಗೆ ಬೆಳೆಯುವ ಶಿಲೀಂದ್ರ ವೊಂದನ್ನು ಕಂಡುಹಿಡಿದ."ಜಿಬ್ಬರೆಲ್ಲಾ ಫುಜಿಕುರೋಯಿ" ಎಂದು ಕರೆಯಲ್ಪಡುವ ಈ ಶಿಲೀಂದ್ರದ ಕಿಣ್ವಗಳೇ ಗಿಡದ ಅತಿಯಾದ ಉದ್ದವಾಗುವಿಕೆಗೆ ಕಾರಣ ಎಂದು ತಿಳಿಯಲ್ಪಟ್ಟಿತು.ಈಗ ಜಿಬ್ಬರೆಲಿನ್ ಎಂಬ ಹಾರ್ಮೋನು "ಟಿಶ್ಯು ಕಲ್ಚರ್" ನಲ್ಲಿ ಬಹಳ ಉಪಯುಕ್ತವಾದ ಘಟಕವಾಗಿದೆ.

hormones induced tissue culture 
shoot proliferation by hormone induction
ಕೃಷಿಕರು ಕೆಲವು ಸಸ್ಯಗಳ ತುದಿ ಚಿಗುರನ್ನು ತುಂಡುಮಾಡಿ ಆ ಗಿಡದಲ್ಲಿ ಕವಲು ಗೆಲ್ಲುಗಳನ್ನು ಬೆಳೆಯುವಂತೆ ಮಾಡುವುದಿಲ್ಲವೇ?..ಕಾರಣವಿಷ್ಟೇ,ಗಿಡದ ಚಿಗುರುಗಳ ತುದಿಯಲ್ಲಿ "ಓಕ್ಸಿನ್" ಎಂಬ ಹಾರ್ಮೋನು ಶೇಖರವಾಗಿರುತ್ತದೆ.ಇದರ ಕಾರ್ಯವನ್ನು ಚಿಗುರು ತುಂಡು ಮಾಡಿ ತಡೆದಾಗ ಹಾರ್ಮೋನು ಗಿಡದ ಕೆಲ ಭಾಗಗಳಿಗೆ ಪಸರಿಸಿ ಅಲ್ಲಿ ಕವಲು ಚಿಗುರುಗಳನ್ನು ಬೆಳೆಯುವಂತೆ ಮಾಡುತ್ತದೆ.ಈ ಹಾರ್ಮೋನು "ಟಿಶ್ಯು ಕಲ್ಚರ್"ನ ಲ್ಲಿ ಕೋಶ ವಿಭಜನೆಗೆ ಅತ್ಯಂತ ಉಪಯುಕ್ತವಾಗಿದೆ.

ಎಲೆಯೊಂದು ಹಣ್ಣಾದಾಗ ನೆಲಕ್ಕೆ ಬೀಳಬೇಕು ತಾನೇ?..ಇಲ್ಲಿ "ಆಬ್ಸಿಸಿಕ್ ಆಸಿಡ್" ಎಂಬ ಹಾರ್ಮೋನು ಎಲೆಯ ತೊಟ್ಟಿನ ಬುಡದಲ್ಲಿ ಶೇಖರಣೆಯಾಗಿ ಅಲ್ಲಿಯ ಕೋಶಗಳನ್ನು ಶಿಥಿಲವಾಗುವಂತೆ ಮಾಡಿದಾಗ ತನ್ನಿಂತಾನೆ ಹಣ್ಣೆಲೆಯು ಗಿಡದಿಂದ ಬೇರ್ಪಡುವುದು.

ಕಾಯಿ ಹಣ್ಣಾಗಲು ಕೂಡಾ ಬೇಕಿದೆ ಹಾರ್ಮೋನು ಸಂಘ..ಕಾಯೊಳಗೆ "ಎಥೀಲಿನ್ ಹಾರ್ಮೋನು"  ಕಾರ್ಯವೆಸಗಿದಾಗ ಹಣ್ಣಾಗುವಿಕೆ ಎಂಬುದು ಸಾಧ್ಯ.
ಹಾಗೆಯೇ ಕೆಲವೊಮ್ಮೆ ಗಿಡಗಳ ಕಾಂಡಕ್ಕೆ ಪೆಟ್ಟಾಗಿದ್ದರೆ ಸ್ವಲ್ಪ ದಿನ ಬಿಟ್ಟು ನೋಡಿ, ಅಲ್ಲಿ ಕೋಶ ವಿಭಜನೆಯಾಗಿ ಗಂಟಾದ ಪೊರೆಯೊಂದು ಇರುವುದು ಗಮನಿಸಿ.ಇದು ಗಾಯ ವಾಸಿಯಾಗಲು ಹಾಗೂ ಸಸ್ಯದ ರಸ ಸೋರಿ ಹೋಗದಂತೆ ತಡೆಯಲು  ಹಾರ್ಮೋನುಗಳೇ ಪ್ರೇರೇಪಿಸಿದ ಕೋಸ ವಿಭಜನೆಯ ಕ್ರಿಯೆಯಾಗಿರುತ್ತದೆ.
ಬೆಳಕಿನೆಡೆಗೆ ರೆಂಭೆಗಳು ವಾಲುವುದಕ್ಕೂ,ಬೇರುಗಳು ನೆಲದೊಳಗೆ ಇಳಿಯುವುದಕ್ಕೂ  ಹಾರ್ಮೋನುಗಳೇ ಕಾರಣವಾಗಿದೆ.

ಹೀಗೆ ಕೆಲವು ಹಾರ್ಮೋನುಗಳು ಸಹಜವಾಗಿಯೇ ಪ್ರಕೃತಿಯಲ್ಲಿದ್ದರೆ ಕೃತಕವಾಗಿ ರಾಸಾಯನಿಕಗಳಿಂದ ತಯಾರಿಸಿದ ಹಾರ್ಮೋನುಗಳನ್ನು ಲ್ಯಾಬುಗಳಲ್ಲಿ ಬಳಸಲಾಗುತ್ತದೆ.

Tuesday, December 11, 2012

ಉಪ್ಪಿನಕಾಯಿಯನ್ನು ಕಾಡುವುದೇನು ಗೊತ್ತೇ ???


citrus fruit contaminated by penicillium
ಶಿಲೀಂದ್ರಗಳ ಬಗ್ಗೆ ನಾವು ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ.ಅಸಂಖ್ಯಾತ ಬಗೆಯ ಶಿಲೀಂದ್ರಗಳಲ್ಲಿ ಸೂಕ್ಷ್ಮಾಣುಗಳಿಂದ ಹಿಡಿದು ಹಲವು ಇಂಚುಗಳಷ್ಟು ಬೆಳೆಯುವ ತರದವುಗಳಿವೆ.ನಿತ್ಯ ಜೀವನದಲ್ಲಿ, ನಮ್ಮ ಮನೆಯೊಳಗೂ ಹಿತ್ತಿಲಲ್ಲೂ ಸಾಮಾನ್ಯವಾಗಿ ಕಾಣಸಿಗುವ ಕೆಲವು ಶಿಲೀಂದ್ರಗಳ ಬಗ್ಗೆ ತಿಳಿಯೋಣ.
 
ಉಪ್ಪಿನಕಾಯಿಯನ್ನು ಭದ್ರವಾಗಿ ಭರಣಿಗಳಲ್ಲಿ ವರ್ಷಾನುಗಟ್ಟಲೆ ತೆಗೆದಿರಿಸುತ್ತಾರೆ.ಎಷ್ಟು ನಾಜೂಕಾಗಿ ಕಟ್ಟಿ ಇಟ್ಟರೂ ಕಪ್ಪಾದ ಪದರವೊಂದು ದ್ರಾವಣದ ಮೇಲೆ ಆವರಿಸಿಕೊಂಡಿರುತ್ತದೆ.ಹದಿ ಕಟ್ಟುವುದು ಎಂದು ಹಿಡಿ ಉಪ್ಪು ಸುರಿದು ಬಿಡುತ್ತೇವೆ.ನಿಜವಾಗಿಯೂ ಇಲ್ಲಿ ನಮ್ಮ ಕಣ್ತಪ್ಪಿಸಿ ಭರಣಿಯೊಳಗೆ ಸೇರಿರುವುದೇ "ಪೆನಿಸೀಲಿಯಮ್" ಎಂಬ ಶಿಲೀಂದ್ರ.
ನಿಂಬೆ ಹುಳಿ ಅಥವಾ ನೆಲ್ಲಿಕಾಯಿಯನ್ನು ಕೆಲಕಾಲ ಉಪಯೋಗಿಸದೇ ಇದ್ದರೆ ಹಸುರು ಬಣ್ಣದ ಪೊರೆಯೊಂದು ಮೂಡಿರುವುದು ಕಾಣಬಹುದು ಇದುವೇ "ಆಸ್ಪರ್ಜಿಲ್ಲಸ್ ಫಂಗಸ್". ಮೆಣಸಿನಕಾಯಿ ಕೊಳೆತರೆ ಎಂಥಾ ದುರ್ವಾಸನೆ ಅಲ್ಲವೇ ?
ಇಲ್ಲಿ ಹೆಚ್ಚಾಗಿ ಇರುವುದು "ಫ್ಯುಸೇರಿಯಮ್".
ಇನ್ನು ಬ್ರೆಡ್, ಬಿಸ್ಕತ್ತುಗಳನ್ನು ದೀರ್ಘ ಕಾಲ ಇಟ್ಟರೆ "Rhizopus fungi" ಬೆಳೆಯಲಾರಂಬಿಸುತ್ತದೆ.
Aspergillus sp


ಶಿಲೀಂದ್ರದ ಒಂದು ಸ್ಪೋರ್(ಪ್ರತ್ಯುತ್ಪಾದನಾ) ಕಣ ಕೂಡ ಸಾಕು,ಅಸಂಖ್ಯಾತವಾಗಿ ಬೆಳೆಯಲು. ಮೈಸೀಲಿಯಮ್ ಬೇರುಗಳನ್ನು ಇಳಿ ಬಿಟ್ಟು ನಂತರ ಅವುಗಳು ಕವಲುಗಳಾಗಿ ಒಡೆದು ಪೋಷಕಾಂಶಗಳನ್ನು ಹೀರಿ ಹುಲುಸಾಗಿ ಬೆಳೆಯತೊಡಗುತ್ತದೆ. ಪ್ರತ್ಯುತ್ಪಾದನೆಗಾಗಿ ಮೂಡುವ ಕೋಶಚೀಲಗಳು ಅಸಂಖ್ಯಾತ ಸ್ಪೋರ್ ಕಣಗಳ ಹೊತ್ತು "ಫ್ರುಟಿಂಗ್ ಬಾಡಿ" ಎಂದು ಕರೆಯಲ್ಪಡುತ್ತವೆ. ಇವುಗಳು ಬಲಿತಾಗ ತನ್ನಷ್ಟಕ್ಕೇ ಒಡೆದು ಗಾಳಿಯಲ್ಲಿ ಸ್ಪೋರ್ ಕಣಗಳು ಸೇರಿ ವಾತಾವರಣದಲ್ಲಿ ಹಬ್ಬಿಕೊಂಡಿರುತ್ತವೆ.
ಕೈಯಲ್ಲೊಂದು ಪುಟ್ಟ ಕ್ಯಾಮರಾ ಹಿಡಿದು ತೋಟದಲ್ಲೊಮ್ಮೆ ಸುತ್ತಾಡಿ ಬರೋಣ. ಬಹಳ ಅಂದವಾದ ಅಣಬೆಗಳು, ಫಂಗೈಗಳು ಕಾಣಸಿಗುತ್ತವೆ. ಇವುಗಳ ಬಗ್ಗೆ ಸಸ್ಯಶಾಸ್ತೃದಲ್ಲಿ ಕಲಿಯಲಿಕ್ಕಿರುತ್ತದೆ. ಹಾಗೆ ಗೂಗಲ್
ನಲ್ಲಿ ಒಮ್ಮೆ ಜಾಲಾಡಿದರೆ ಚಿತ್ರ ಸಹಿತ ಬೇಕಾದಷ್ಟು ಮಾಹಿತಿ ಸಿಗುತ್ತದೆ.


Mycelium
wild mushroom sp

Dead mans finger fungus(xylaria)Peziza cup fungi

shelf fungi
spores releasing from ascus