ಅಮೆರಿಕದ ಯು.ಎಸ್.ಪಿ.ಟಿ.ಒ ಸಂಸ್ಥೆಯು ಇತ್ತೀಚೆಗೆ ಚಿನ್ನದ ಅಕ್ಕಿ ಅಂದರೆ ""ಗೋಲ್ಡನ್ ರೈಸ್" ಎಂಬ ಯೋಜನೆಗೆ ಒಂದು ಮಾನವೀತೆಯ ಪ್ರಶಸ್ತಿ (ಪೇಟೆಂಟ್ಸ್ ಫೊರ್ ಹ್ಯುಮಾನಿಟಿ") ಯನ್ನು ನೀಡಿತು.ಇದು ಹಸಿವನ್ನು ನೀಗಿಸುವ ಸಂಶೋಧನೆಗೆ ಸಂದ ಪುರಸ್ಕಾರ.ಅಂತರ ರಾಷ್ಟೃ ಮಟ್ಟದಲ್ಲಿ ಬಡವರಿಗೆ ಉಪಯೋಗವಾಗುವ ವಿನೂತನ ಯೋಜನೆಗಳಿಗೆ ಈ ಪುರಸ್ಕಾರ ಸಿಗುವುದು."
ಏನಿದು ಚಿನ್ನದ ಅಕ್ಕಿ?
![]() |
golden rice v/s common rice |
ಡಫೋಡಿಲ್ ಎಂಬ ಹಳದಿ ಹೂವುಗಳ ಗಿಡದಂದ ತೆಗೆದ ಜೀನು(ವಂಶವಾಹಿ)ಗಳನ್ನು ಭತ್ತದ ಗಿಡದ ಜೀನುಗಳೊಂದಿಗೆ ಸೇರಿಸಿ ಪಡೆದ ತಳಿಯೇ ಚಿನ್ನದ ಅಕ್ಕಿ. ಎರ್ವಿನಿಯಾ ಬ್ಯಾಕ್ಟೀರಿಯಾ (ಮಣ್ಣಿನಲ್ಲಿರುವ ಏಕಕೋಶ ಜೀವಿ) ಅಥವಾ ಹರಿವೆ ಗಿಡ ಹೀಗೆ ಪ್ರಕೃತಿ ಯಲ್ಲಿ ದೊರೆಯುವ ಯಾವುದೇ ಜೀವ ವೇವಿಧ್ಯಗಳನ್ನು ಉಪಯೋಗಿಸಿ ಕುಲಾಂತರಿ ಗಿಡಗಳನ್ನು ಸೃಷ್ಟಿಸಬಹುದು.ಬೀಟಾ ಕೆರೋಟಿನ್ ಎಂಬ ದೇಹಕ್ಕೆ ಉಪಯುಕ್ತವಾದ ಧಾತುವನ್ನು ಹೀಗೆ ಜಗತ್ತಿನ ಮುಖ್ಯ ಬೆಳೆಯಲ್ಲಿ ಬೆಳೆದರೆ ಉಪಕಾರವಾದೀತು ಎಂಬ ಯೋಚನೆಯ ಫಲವೇ ಚಿನ್ನದ ಅಕ್ಕಿ.ಅಮೇರಿಕದ ಪ್ರಯೋಗಾಲಯದಲ್ಲಿ ಹುಟ್ಟಿ ನಿಧಾನವಾಗಿ ಭಾರತದಲ್ಲಿ ಬೇರೂರಲು ಹೊರಟಿರುವ ಈ ತಳಿಯ ಬಗ್ಗೆ ಎಲ್ಲರಿಗೂ ಗೊತ್ತಿರಲೇಬೇಕಾದ ಅವಶ್ಯಕತೆಯಿದೆ.
ಉಪಯೋಗಗಳು:
ದುರುಪಯೋಗಗಳು:
- ಕ್ರೋಸ್ ಪೋಲಿನೇಶನ್ ಆಗಬಹುದು.ಅಂದರೆ ಕುಲಾ0ತರಿ ತಳಿಯು ಊರತಳಿಯೊಂದಿಗೆ ಸಂಕರಗೊಂಡು ತಳಿಗಳ ಕಲಬೆರಕೆಯಾಗಬಹುದು.
- ಜೆನೆಟಿಕ್ ಇರೋಶನ್ ಅಂದರೆ ತರ-ತರದ ದೇಶಿ ತಳಿಗಳ ನಿಮರ್ೂಲನೆಯಾಗಿ ಮುಂದಿನ ಪೀಳಿಗೆಗೆ ದೋರಕುವ ಜೀವ ವೈವಿಧ್ಯತೆ ನಾಶವಾಗಬಹುದು.
ಉತ್ತಮ ಮಾಹಿತಿ ನೀಡಿದ್ದೀರಿ ರಷ್ಮಿಯವರೇ :)
ReplyDeleteಉತ್ತಮ ಮಾಹಿತಿ ನೀಡಿದ್ದೀರಿ ರಷ್ಮಿಯವರೇ :)
ReplyDeleteಆಹಾರ ಕ್ರಾಂತಿ ಸೃಷ್ಟಿಸಿದರೆ ವಿಜ್ನಾನಿಗಳಿಗೆ ಪ್ರಶಸ್ತಿಗಳ ಸುರಿಮಳೆಯಾದೀತು...ಉದ್ದೇಶವು ಒಳ್ಳೆಯದಿರಬಹುದು..ಆದರೆ ಪ್ರಕೃತಿಯ ಮಡಿಲನ್ನು ಬರಿದು ಮಾಡಿದರೆ ಮತ್ತೆ ಮರುಸೃಷ್ಟಿಸಲು ದೇಸೀ ತಳಿ ಸಂಪತ್ತು ನಮ್ಮ ಜೊತೆಗಿರುವುದೇ?
ReplyDeleteಕಾಲವೆ ಉತ್ತರ ಹೇಳಬೇಕು !