ಚಿತ್ರ ದಲ್ಲಿರುವ ಡೋಡೋ ಹಕ್ಕಿಯನ್ನು ನೋಡಿದವರು ಈಗ ಜೀವಿಸಿರಲಿಕ್ಕಿಲ್ಲ.ಮಾನವನ ಅಂಧ ವಿಶ್ವಾಸಕ್ಕೆ ಬಲಿಯಾದ ಒಂದು ಹಕ್ಕಿಯಿದು.೧೫೯೮ನೇ ಇಸವಿ ಕಾಲದವರೆಗೆ ಮೋರಿಷಸ್ ದ್ವೀಪದಲ್ಲಿ ಜನ ವಾಸವಿರಲಿಲ್ಲ.ಆದರೆ ಅಲ್ಲಿ ಡಚ್ ವಲಸೆಗಾರರ ತಂಡವೊಂದು ಅಲ್ಲಿ ಬೀಡು ಬಿಟ್ಟು ಮರಿ ಮಕ್ಕಳು ಸಂಬಂಧಗಳು ಬೆಳೆದು ಊರು ಬೆಳೆಯತೊಡಗಿತ್ತು.ಸಂಪ್ರದಾಯ,ನಂಬಿಕೆಗಳು ಬಲವಾಗತೊಡಗಿದ್ದವು.ಈ ದ್ವೀಪದಲ್ಲಿ ಹಾಯಾಗಿದ್ದ “ಡೋಡೋ” ಗಳ ಸಂಖ್ಯೆಯು ಕೂಡಾ ದಿನೇ ದಿನೇ ಕ್ಷೀಣಿಸುತ್ತಾ ಹೋಗಿತ್ತು. ಡೋಡೋ ಹಕ್ಕಿಯ ವಿಚಿತ್ರ ಕೂಗು ದೆವ್ವಗಳನ್ನು ಆಹ್ವಾನಿಸುತ್ತಿರುವಂತೆ ಅಲ್ಲಿಯ ಜನರಿಗೆ ಭಾಸವಾಗತೊಡಗಿತ್ತು.ಒಂದೆಡೆ ಮಾಂಸಕ್ಕಾಗಿ ಬೇಟೆ, ಅಲ್ಲದೆ ಕಂಡಲ್ಲಿ ಕೊಂದು ಹಾಕುವ ಸಂಪ್ರದಾಯವಾದಿಗಳ ಕಾಟ.ಅತ್ತ ಹಾರುವ ಸಾಮಥ್ಯ್ರವೂ ಇಲ್ಲದೆ,ದೂರ ಈಜಿ ವಲಸೆ ಹೋಗಲೂ ಆಗದೆ ಅಸಹಾಯಕವಾಗಿ ಒಂದು ಪಕ್ಷಿಯ ವಂಶವೇ ನಿರ್ನಾಮವಾಗಿ ಹೋಯಿತು.
ಇದೇ ಹಕ್ಕಿಯನ್ನು ಅವಲಂಬಿಸಿಕೊಂಡು ಒಂದು ಸಸ್ಯವೂ ಅಲ್ಲಿತ್ತು. Tambalacoque (Sideroxylon grandiflorum) ಎಂಬ ಹೆಸರಿನ ಸಪೋಟೇಸಿ ಕುಟುಂಬದ “ ಡೋಡೋ ಮರ”.ಡೋಡೋ ತನ್ನ ಆಹಾರಕ್ಕಾಗಿ ತಿನ್ನುವ ಈ ಮರದ ಹಣ್ಣು ಜಠರ ಸೇರಿ ಅಲ್ಲಿ ಕೆಲವು ಕಿಣ್ವಗಳ ರಾಸಾಯನಿಕ ಕ್ರಿಯೆಯಿಂದ ಬೀಜಗಳು ಹುಟ್ಟಲು ಅನುಸಾರವಾಗಿ ಸಿಧ್ಧಗೊಂಡು ಹಿಕ್ಕೆಯಲ್ಲಿ ಸೇರಿ ಹೊರಬರುತ್ತಿದ್ದವು.ಈಗ ಮರ ಉಳಿದಿದೆ.ಮತ್ತೆ ಹಣ್ಣು ತಿಂದು ಬೀಜ ಬಿತ್ತಿ ಹೊಸ ಗಿಡ ಬೆಳೆಸಲು ಅದರ ಗೆಳೆಯರಿಲ್ಲ.
ಡೋಡೋವಿನ ಕಥೆ ಹಲವರಿಗೆ ಪಾಠಕ್ಕಿದೆ.ಕಂಠಪಾಠ ಮಾಡಿ ಪರೀಕ್ಷೆಯಲ್ಲಿ ಭಟ್ಟಿ ಇಳಿಸಿದ್ದಿದೆ.ಆದರೂ ಕೆಲವೊಮ್ಮೆ ಪಠಣ ಮಾಡಿದ್ದು ಬರೀ ಅಂಕಗಳಿಗೋಸ್ಕರ ಎಂದು ಒಪ್ಪಿಕೊಳ್ಳಬೇಕಾಗುತ್ತದೆ.ಯಾಕೆಂದರೆ ನಮ್ಮೂರಲ್ಲೇ ಕಾಣ ಸಿಗುವ ಕಾಡು ಕೋಳಿ,ಉಡ ಮುಂತಾದ ಜೀವಿಗಳಿಗೆ ಈಗ ಮಾಂಸಕ್ಕಾಗಿ ಒಳ್ಳೆ ಬೇಡಿಕೆಯಿದೆ.ಇದರಿಂದ ಸುಲಭವಾಗಿ ಹಣ ಮಾಡುವ ಯೋಚನೆ ಇರುವ ಕೆಲವು ಮಂದಿ ಈ ಮೂಕಪ್ರಾಣಿಗಳ ಬೇಟೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.ಇಂತವರ ಮುಂದೆ conservation,food chain ಮುಂತಾದವುಗಳ ಬಗ್ಗೆ ಹೇಳಲು ಸಾಧ್ಯವಿದೆಯೇ?
ಚೆನ್ನಾಗಿದೆ. ಕೂತೂಹಲಕರವಾಗಿತ್ತು. ಅಂಧವಿಶ್ವಾಸಕ್ಕೆ ಬಲಿಯಾಗಿ ಇನ್ನಿಲ್ಲದಂತಾಯ್ತು ಎಂದು ತಿಳಿದಾಗ ಬೇಸರವಾಯ್ತು !.
ReplyDeleteಡೊಡೊಪಕ್ಷಿಯ ಬಗ್ಗೆ ಕೇಳಿದ್ದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು. ಮೂಢ ನ೦ಬಿಕೆ, ಸ್ವಾರ್ಥ, ಮೋಜಿಗಾಗಿ ಎಷ್ಟೋ ಜೀವಸ೦ಕುಲ ನಾಶವಾಗಿ ಹೋಗುತ್ತಿದೆ. ನಿಮ್ಮ ಲೇಖನ ಮಾರ್ಗದರ್ಶಕವಾಗಿದೆ ರಶ್ಮಿಯವರೇ, ಅಭಿನ೦ದನೆಗಳು.
ReplyDelete@subrahmanya
ReplyDeletethank u sir
@prabhamani nagaraja
ReplyDeletethank u.:)
ಮೂಕಪ್ರಾಣಿಗಳ ಬೇಟೆ ಪದೇ ಪದೇ ನಡೆಯುತ್ತಲ್ಲೇ ಇರುತ್ತದೆ.... ನಾವು ಅದನ್ನು ತಡೆಯುವುದು ಹೇಗೆ ಅನ್ನೋದನ್ನ ಯಾರೂ ಯೋಚಿಸುವುದಿಲ್ಲಾ...!:(
ReplyDeleteರಶ್ಮಿ, ನನ್ನ ಕ್ಷೇತ್ರದವರನ್ನು ಕಂಡು ಬ್ಲಾಗ್ ಲೋಕದಲ್ಲಿ ಸಂತೋಷವಾಯಿತು, ನಿಮ್ಮ ಡೋ ಡೋ ಕಥನವೂ ಸೊಗಸಾಗಿದೆ.
ReplyDelete@jalanayana
ReplyDeletethank u..heege barutta iri