ನಮ್ಮ ಗುಲಾಬಿ ಗಿಡದ ಗೆಲ್ಲಿಗೆ ಜೋತು ಬಿದ್ದಿದ್ದ ಸಣ್ಣ ಗೂಡೊಂದು ಗಮನ ಸೆಳಯುವಂತಿತ್ತು . ಕಡ್ಡಿಗಳನ್ನು ಜೋಡಿಸಿ ತಯಾರಿಸಿದ ಆ ಪುಟ್ಟ ಗೂಡಲ್ಲಿ ವಿಶೇಷವಾಗಿ ಎರಡು ಕಡ್ಡಿಗಳು ಇತರ ಕಡ್ಡಿಗಳಿಗಂತ ತುಸು ಉದ್ದವಿತ್ತು.ತೋಟದಲ್ಲಿ ಹುಡುಕಿದಾಗ ವಿವಿಧ ರೀತಿಯ ಅಂತಹ ಗೂಡುಗಳನ್ನು ನೋಡಲು ಸಾಧ್ಯವಾಯಿತು. Lepidoptera ಕುಟುಂಬಕ್ಕೆ ಸೇರಿದ “moth” ಕೀಟಗಳನ್ನುಯಾರೂ ಅಷ್ಟಾಗಿ ಪರಿಗಣಿಸುವುದಿಲ್ಲ.Bag worms ಎಂದು ಕರೆಯಲ್ಪಡುವ ಚೀಲದ ಹುಳವನ್ನು ಹಳ್ಳಿಗಳಲ್ಲಿ "ಕೋಲು ಪುಳು" ಎನ್ನುತ್ತಾರೆ.
ಹೆಣ್ಣು ಮೋತ್ ಹುಳ(female bag worm) ತಯಾರಿಸಿದ ಕಡ್ಡಿಗಳ ಜೋಡಿಸಿದ ಗೂಡು |
ಗಂಡು ಮೋತ್ ಹುಳ |
ಹೆಣ್ಣು ಮೋತ್ ಹುಳವೊಂದು ಒಣ ಎಲೆಗಳಿಂದ ತಯಾರಿಸಿದ ಗೂಡು |
ಆದರೆ ಇದೇ ಕುಟುಂಬ ದಲ್ಲಿ ಚಿಟ್ಟೆಗಳ ಬಗ್ಗೆ ಹೆಚ್ಚು ಅಧ್ಯಯನವಾಗುತ್ತಿದೆ. ಸಂಶೋಧಕರು ಇನ್ನು ಹೆಸರಿಸಬೇಕಾದ ಈ ವರ್ಗದ ಕೀಟಗಳು ಹೆಚ್ಚಾಗಿ ಕಾಣ ಸಿಗುವುದು ಕಾಡಿನ ಅಂಚಿಗೆ ತಾಗಿಕೊಂಡಿರುವ ತೋಟಗಳಲ್ಲಿ.ಒಣ ಎಲೆಗಳು ಅಥವಾ ಕಡ್ಡಿ ಗಳನ್ನು ಮಯಣದ ಎಳೆ ನೂಲು(silk threads)ಗಳನ್ನು ಉಪಯೋಗಿಸಿ ಪುಟ್ಟ ಚೀಲದಂತಹ ಗೂಡು ನಿರ್ಮಿಸುವ ಚಾಕಚಕ್ಯತೆ ಇರುವುದು ಇಲ್ಲಿ ಹೆಣ್ಣು ಮೋತ್ ಕೀಟಗಳಿಗೆ.
ಜೀವನ ಚಕ್ರ ತುಸು ಭಿನ್ನ ಹಾಗೂ ಆಸಕ್ತಿಕರ.ಗಂಡು ಕೀಟವು ಹಾರಲು ರೆಕ್ಕೆಗಳ ಹೊಂದಿದ್ದು ನೋಡಲು ಚಿಟ್ಟೆಯ ವರ್ಗಕ್ಕೆ ಸೇರಿದಂತೆ ಅನಿಸುತ್ತದೆ.ಹೆಣ್ಣು ಕೀಟಗಳಿಗೆ ರೆಕ್ಕೆಗಳಿಲ್ಲ.(ಲಾರ್ವ)ಹುಳದ ರೂಪದಲ್ಲಿ ಗೂಡೊಳಗೆ ಇದ್ದುಕೊಂಡು ಬೆಳೆಯುವ ಇವುಗಳು ಗೂಡಿನ ಕೆಳ ಭಾಗದಲ್ಲಿ ಒಂದು ರಂದ್ರವನ್ನು ಬಿಟ್ಟಿರುತ್ತವೆ.ಈ ರಂದ್ರದ ಮೂಲಕ ಗಂಡು ಕೀಟಗಳು ಪಸರಿಸುವ
ಬೀಜಾಣುಗಳನ್ನು ಪಡೆಯಲು ಅನುಕೂಲವಾಗುವಂತೆ ಇದ್ದು ಬಿಡುತ್ತವೆ.ಗರ್ಭದಾರಣೆ ಆಗಿ ಮೊಟ್ಟೆಗಳ ಹೊರುವ ತಾಯಿ ಕೀಟವು ತನ್ನಷ್ಟಕ್ಕೇ ಅಲ್ಲಿಗೇ ಮುದುಡಿ ಸಾಯತೊಡಗಿದರೆ,ಮೊಟ್ಟೆಗಳು ಅದರೊಳಗೆ ಬೆಳೆದು ಮರಿ ಕೀಟಗಳು ಹುಟ್ಟಿರುತ್ತವೆ.ಗಂಡು ಕೀಟಗಳು ರೆಕ್ಕೆ ಮೂಡಿ ಹಸಿರು ಎಲೆಗಳ ಹರಿತ್ತನ್ನು ತಿಂದು ದೊಡ್ಡದಾದರೆ,ಹೆಣ್ಣು ಲಾರ್ವ ಹುಳಗಳು ಗಾಳಿ ಯಲ್ಲಿ ತೇಲಿ ಮರ,ಗಿಡಗಳ ಮೇಲೆ ಬಂದು ಬೀಳುತ್ತವೆ.ಮತ್ತೆ ಗೂಡುಗಳ ನಿರ್ಮಾಣ ಶುರುವಾಗುತ್ತದೆ.
ಇಲ್ಲಿ ನಮ್ಮ ರೈತರಿಗೆ ಅಂತಹ ಉಪಟಳ ನೀಡದ ಚೀಲದ ಹುಳಗಳು ಗಳು ತಮ್ಮಷ್ಟಕ್ಕೇ ಇದ್ದರೆ,ಕೆಲವು ವಿದೇಶಗಳಲ್ಲಿ ಈ ವರ್ಗಕ್ಕೆ ಸೇರಿದ ಕೀಟಗಳು ಬೆಳೆಗಳನ್ನು ನಾಶಪಡಿಸುವಷ್ಟು ಸಂಖ್ಯೆಯಲ್ಲಿ ಇವೆ.ಇನ್ನು ಅಲ್ಲಿ ಕೆಲವು ವಿಧದ ಈ ಕೀಟಗಳನ್ನು ಆಹಾರವಾಗಿಯೂ ಬಳಸುವವರಿದ್ದಾರೆ.
good info...kutUhalakaariyaagide.
ReplyDeleteNice write-up Rashmi :) I think the Moth in the 2nd picture is bit itchy if you touch it (kambali hula tara)
ReplyDeleteತುಂಬ ಒಳ್ಳೆಯ ಮಾಹಿತಿ. ವಿದೇಶಗಳಲ್ಲಿ ಬೆಳೆಗೆ ತೊಂದರೆ ಕೊಡುವ ಹುಳುಗಳು ಇವೆ ಎಂದಿರಲ್ಲಾ, ಅವುಗಳ ಬಗ್ಗೆಯೂ ಒಮ್ಮೆ ಬರೆಯಿರಿ.
ReplyDelete@ಸುಮ
ReplyDeletethank u:)
@ವನಿತಾ / Vanitha
thank u:)yes u r right.
@Subrahmanya
thank u sir:)videshi hulagala bagge mahiti sangraha maduttene
Very very interesting!!
ReplyDelete