ಬಿಸಿಲ ಹೊತ್ತಲ್ಲಿ ತಂಪಾದ ಸ್ಥಳದಲ್ಲಿ ವಿಶ್ರಾಂತಿ ಪಡೆಯುವ ಹಳದಿ ಚಿಟ್ಟೆಗಳು |
ಕಳೆದ ವಾರ ಊರಿಗೆ ಹೋಗಿದ್ದೆ.ಮಳೆಗಾಲ ಮುಗಿಯುವ ಹೊತ್ತಿಗೆ ರೆಕ್ಕೆ ಬಲಿತು ನಲಿದಾಡುವ ಚಿಟ್ಟೆಗಳ ಪೂರವೇ ಅಲ್ಲಿ ಇತ್ತು.ಫೋಟೋ ತೆಗೆಯಲು ಹೋದಾಗ ಬಿಂಕದಿಂದ ಹಾರುವ ದೊಡ್ಡ ರೆಕ್ಕೆಯ ಚಿಟ್ಟೆಗಳ ಸುದ್ದಿಗೆ ಹೋಗದೆ ಗುಂಪಾಗಿ ಒಟ್ಟಿಗೆ ಸೇರುವ ಪುಟ್ಟ ಹಳದಿ ಚಿಟ್ಟೆಗಳ ಹಿಂದೆ ಬಿದ್ದೆ. ಅಂಗಳದಲ್ಲಿ ಕುಳಿತಿದ್ದ ಚಿಟ್ಟೆಗಳ ಚಿತ್ರ ಸೆರೆಹಿಡಿಯಲು ಸುಲಭವಾಯಿತು
ಹೆಸರು Common Grass Yellow .ಕುಟುಂಬ peiridae. ಶಾಸ್ತ್ರೀಯ ನಾಮ Eurema hecabe.
ಗಂಡು ಚಿಟ್ಟೆಗಳ ರೆಕ್ಕೆಯಲ್ಲಿ ಉಬ್ಬಿ ನಿಂತ ಕೋಶ ಪದರ ವಿದ್ದರೆ, ಹೆಚ್ಚಾಗಿ ಯುಪಟೋರಿಯಮ್,ಅಕೇಶ್ಯಾ ಎಲೆಗಳ ಕೆಳ ಭಾಗದಲ್ಲಿ ಮೊಟ್ಟೆ ಇಡುವ ತಾಯಿ ಚಿಟ್ಟೆಗಳ ರೆಕ್ಕೆಯ ಅಂಚಲ್ಲಿ ಗಾಢ ಕಪ್ಪು ಬಣ್ಣದ ಗೆರೆ ಇರುತ್ತದೆ. ನಸು ಹಸುರು ಬಣ್ಣಕ್ಕೆ ತಿರುಗುವ ಲಾರ್ವ ಹಾಗೂ ಪ್ಯೂಪಾವಸ್ಥೆ ಯಲ್ಲಿ ಒಂದಕ್ಕೂ ಹೆಚ್ಚು ತಿಂಗಳು ಇದ್ದು ನಂತರ ಹಳದಿ ರೆಕ್ಕೆಗಳಲ್ಲಿ ಬೂದು ಚುಕ್ಕಿಗಳ ವಿನ್ಯಾಸ ಮೂಡ ತೊಡಗುತ್ತದೆ.ಮಳೆಗಾಲದ ತಂಪಿಗೆ ರೆಕ್ಕೆಗೆ ಕಡು ಹಳದಿ ಬಣ್ಣವಿದ್ದರೆ ಬೇಸಿಗೆ ಕಾಲದಲ್ಲಿ ನಸು ಹಳದಿ.
ಬೆಳಗ್ಗೆ ಹುಲ್ಲು ಗಿಡಗಳ ಮೇಲೆ ಹಾಯಾಗಿದ್ದು ರಾತ್ರಿಯಾಗುತ್ತಿದ್ದಂತೆ ಎತ್ತರದ ಗಿಡಗಳ ಎಲೆ ಮರೆಯಲ್ಲಿ ನಿದ್ರಿಸುವ ಚಿಟ್ಟೆಗಳ ನೋಡಲು ಸಾಧ್ಯವಾಗಲಿಲ್ಲ.
Very nice.
ReplyDelete