ಶೈಶವ,ಬಾಲ್ಯ,ತಾರುಣ್ಯ,ವೃಧ್ಧಾಪ್ಯ ಎಂಬುದು ಬದುಕಿನ ಹಂತಗಳು.ಆದರೆ ವೃಧ್ಧಾಪ್ಯ ವನ್ನು ಸಂತಸದಿಂದ ಸ್ವೀಕರಿಸುವ ಮಂದಿ ಬೆರಳೆಣಿಕೆ ಯಷ್ಟಿರಬಹೂದೇನೋ!. ಏನೆಲ್ಲಾ ಕಸರತ್ತುಗಳನ್ನು ಮಾಡಿಯಾದರೂ ಸುಕ್ಕುಗಟ್ಟುತ್ತಿರುವ ಚರ್ಮವನ್ನು ನಯವಾಗಿಸಿ ಮುಪ್ಪನ್ನು ಮರೆಮಾಚುವ ಚಲನಚಿತ್ರತಾರೆಯರು,ರೂಪದರ್ಶಿಗಳು ಈಗ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಬೊಟೋಕ್ಸ್ ಚುಚ್ಚುಮದ್ದನ್ನು ಕಣ್ಣಿನ ಕಪ್ಪು ವರ್ತುಲ ಚರ್ಮಕ್ಕೋ ಅಥವಾ ಹಣೆ ಭಾಗಕ್ಕೆ ಚುಚ್ಚುವ ಮೂಲಕ ನೆರಿಗೆ ಮೂಡಿದ ಚರ್ಮವನ್ನು ತಾರುಣ್ಯ ಹಾಗೂ ಕಾಂತಿಯಿಂದ ಕಾಣುವಂತೆ ಮಾಡಲಾಗುತ್ತದೆ.
Chlostridium botulinum bacter |
ಹೀಗೆ, ಎಷ್ಟೇ ಹೆಣಗಿದರೂ ಮುಪ್ಪು ಎನ್ನುವುದು ಯಾರನ್ನೂ ಬಿಡದೆ ಎಲ್ಲರಿಗೂ ಬಂದೇ ಬರುವುದಕ್ಕೆ ಒಂದು ಮೂಲ ಕಾರಣವಿರಬೇಕು ಅಲ್ಲವೇ? ಇಲ್ಲಿ ಬಹಳ ಸಂಕೀರ್ಣವಾಗಿ ನಮ್ಮ ಜೀನುಗಳ ಮಟ್ಟಕ್ಕಿಳಿದು ವಿವರಣೆ ನೀಡಬೇಕಾಗಿದೆ.ಆದರೂ ವಿಷಯವನ್ನು ಸರಳವಾಗಿಸಲು ಪ್ರಯತ್ನಿಸುತ್ತೇನೆ.
ತಾಯಿಯಿಂದ ಮತ್ತು ತಂದೆಯಿಂದ ದೊರೆತ ತಲಾ 23 ಕ್ರೋಮೋಸೋಮುಗಳು ಸೇರಿ 46 ಕ್ರೋಮೋಸೋಮುಗಳು ಒಂದು ಆರೋಗ್ಯ ಮಗುವಿನಲ್ಲಿ ಇರಬೇಕು.ಅನುವಂಶಿಕ ಗುಣಗಳು ಹಾಗೂ ವಿಭಿನ್ನತೆಗೆ ಕಾರಣವಾಗುವ ಈ ಅತಿ ಸೂಕ್ಷ್ಮರೂಪದ ಕ್ರೋಮೋಸೋಮುಗಳ ತುದಿಗಳಲ್ಲಿರುವ ಟೀಲೋಮಿಯರ್ ಟೊಪ್ಪಿಗಳೇ ಪ್ರಾಯವಗುವಿಕೆಯನ್ನು ಸೂಚಿಸುವ ಮೂಲ ಪ್ರತಿನಿಧಿಗಳು. ಈ ಟೊಪ್ಪಿಗಳ ಕೆಲಸವೆಂದರೆ ಕ್ರೋಮೋಸೋಮುಗಳು ಒಂದಕ್ಕೊಂದು ಅಂಟುವುದನ್ನ ತಡೆಯುವುದು ಮತ್ತು ಕ್ರೋಮೋಸೋಮುಗಳ ಶಿಥಿಲವಾಗುವಿಕೆಯನ್ನು ತಡೆಯುವುದು.
chromosomes with telomere |
ಮನುಷ್ಯರು ಸರಾಸರಿ 70 ರಿಂದ 80 ವರ್ಷ ಬದುಕಬಹುದು.ಹಾಗಾಗಿ ಇಲ್ಲಿ ಹೇಳಿದ ಪ್ರಕ್ರಿಯೆ ಕೂಡಾ ತುಂಬಾ ನಿಧಾನ ಗತಿಯಲ್ಲಿಯೇ ಇರುತ್ತದೆ.
ವಿಜ್ಞಾನಿಗಳು ಇದರ ಬಗ್ಗೆ ಅಧ್ಯಯನ ನಡೆಸುತ್ತಲೇ ಇದ್ದಾರೆ.ಆದರೂ ಪ್ರಕೃತಿಯ ನಿಯಮಕ್ಕೆ ವಿರುಧ್ಧವಾಗಿ ನಡೆಯಲು ನಮಗೆ ಎಂದಿಗೂ ಸಾಧ್ಯವಾಗದು
No comments:
Post a Comment