ನನ್ನ ಬದುಕಿಗೆ ಹೊಸ ಆಯಾಮವನ್ನು ಕೊಟದ್ದ್ಟು ಸಂಶೋದನೆ ಅಂದರೆ ಪಿ.ಹಚ್.ಡಿ ರಿಸರ್ಚ್.ಇಲ್ಲಿ ನಾನು ಬಹಳ ಕಲಿತದ್ದಿದೆ.ನನ್ನನ್ನು ತಿದ್ದಿ,ಬದುಕಲು ಕಲಿಸುತ್ತಿರುವುದು ಇದೇ ಸಂ-ಶೋಧನೆ.
ಸಂಶೋಧನೆ ಮಾಡ ಬಯಸುವ ಪ್ರತಿಯೊಬ್ಬರಿಗೂ ಈ ಬರಹಗಳಿಂದ ಉಪಕಾರವಾಗದೀತು.ಸಂಶೋಧಕ/ಕಿ ಯರು ಬದುಕನ್ನ ಎಷ್ಟರ ಮಟ್ಟಿಗೆ ಪ್ರೀತಿಸಬಲ್ಲರು ಅಥವಾ ದೃಷ್ಟಿಕೋನ ಹೇಗಿರಬಹುದು, ಸಂಶೋಧನೆ ಅಂದರೆ ಏನೆಂದು ಈ ಲೇಖನಗಳಿಂದ ತಿಳಿಸುವ ಪ್ರಯತ್ನವಿದು.ಪ್ರತಿಯೊಬ್ಬ ಮಗುವಿನಲ್ಲೂ ಹುಟ್ಟುವ ಸಂಶೋಧಕ ವರ್ಷಗಳು ಉರುಳಿದಂತೆ ಸಂಶೊಧನೆ ಅಳಿದು ಸಂದೇಹಗಳೆ ತುಂಬಿರುತ್ತವೆ.ಇಂದಿನ ಸ್ಪರ್ಧಾತ್ಮಕ ಜಗತ್ತು ಎಷ್ಟು ಗೊಂದಲಗಳನ್ನು ಸೃಷ್ಟಿಸಿದೆಯೋ ಅಷ್ಟೆ ಅವಕಾಶಗಳನ್ನೂ ನೀಡಿದೆ. 99 ಶೇಕಡ ಪರಿಶ್ರಮ ಪಟ್ಟರೆ 1 ಶೇಕಡ ಅದೃಷ್ಟ ಒಟ್ಟಿಗಿರುತ್ತದೆ ಆದರೆ ಗುರಿ ಸ್ಪಷ್ಟವಾಗಿರಬೇಕು.ಹೆಣ್ಣಿಗೆ ಮಿತಿಗಳನ್ನು ಮೀರದೆ ಸಾಧಿಸುವಷ್ಟೆ ಅವಕಾಶ ಆದರೆ ಗಂಡಿಗೆ (ಹೆಚ್ಚಾಗಿ) ಅಂತಹ ಗೊಂದಲ ಬೇಕಿಲ್ಲ.ನನ್ನಲ್ಲಿ ಏನದರೂ ಸಾಧಿಸು ಅನ್ನುವ ಛಲ ಹುಟ್ಟಿಸಿದ್ದು ನನ್ನ ತಪ್ಪುಗಳು, ಸೋಲುಗಳು, ದೌರ್ಬಲ್ಯಗಳು ಹಾಗೂ ನನಗಾದ ಅವಮಾನಗಳು.
ಇಂದು ನಾನು ಸಸ್ಯ ಸಂಶೋಧನಾ ಕ್ಷೇತ್ರ ದಲ್ಲಿ ಬೇರೂರುವ ಭರವಸೆಯಲ್ಲಿದ್ದೇನೆ.
ಕೆಲವೊಮ್ಮೆ ನಗಿಸುವ,ಅಳಿಸುವ ಅಥವಾ ಹುಚ್ಚು ಹಿಡಿಸುವ "ಸಂಶೋಧನ' ಮಾಡಿದವರಿಗೆ ಗೊತ್ತು ಅದರ ಗತ್ತು. ನಾನು ಸಸ್ಯ ಶಾಸ್ತ್ರ ವರ್ಗೀಕರಣದಲ್ಲಿ ಸಂಶೋಧನೆಯನ್ನು ಮಾಡುತ್ತಿದ್ದೇನೆ. ನವಿರಾದ ಹಾಸ್ಯ ಸನ್ನಿವೇಶಗಳು, ಗಂಭೀರ ವಿಷಯಗಳು ಕೂಡಾ ಹಾದು ಹೋಗುವ ನನ್ನೀ ನೆಚ್ಚಿನ ಹಾದಿಯನ್ನು ನೀವೂ ತಿಳಿಯಿರಿ.
No comments:
Post a Comment