ಚಳ್ಳೆ ಹಣ್ಣು ತಿಂದಿದ್ದೀರಾ !
ಆಹಾ ನೋಡೋಕೆ ಚೆನ್ನಾಗಿದೆ ಎಂದು ಇದನ್ನು ಗೊಂಚಲಿಂದ ಕಿತ್ತು ತಿಂದೀರಿ ಮತ್ತೆ. ಒಂದು ವೇಳೆ ತಿಂದರೆ ಮರುಗಬೇಕಾಗಿಯೂ ಇಲ್ಲ..
ಹೆಸರೇ ಸೂಚಿಸುವಂತೆ ಚಳ್ಳೆ ತಿನ್ನಿಸುವುದು ಈ ಹಣ್ಣು. ೮ ರಿಂದ ೧೦ ಮೀಟರುಗಳಷ್ಟು ಉದ್ದ ಬೆಳೆಯುವ ಮದ್ಯಮ ಗಾತ್ರದ ಮರವು ಬೊರಾಜಿನೇಸಿ ಕುಟುಂಬಕ್ಕೆ ಸೇರಿದೆ.
ಸಸ್ಯ ಶಾಸ್ತ್ರೀಯ ನಾಮ ಕೋರ‍್ದಿಯಾ ಒಬ್ಲೀಕ್ವ. ಎಪ್ರೀಲ್ - ಮೇ ತಿಂಗಳುಗಳಲ್ಲಿ ನಸು ಹಳದಿ ಬಣ್ಣದ ಚಿಕ್ಕ ಹೂಗಳ ಗೊಂಚಲುಗಳು ಜೂನ್ -ಜುಲೈ ಹೊತ್ತಿಗೆ ಮಾಗಿದ ಹಣ್ಣುಗಳಾಗಿರುತ್ತವೆ. ಹಸಿರು ಕಾಯಿಯ ಒಳಗೆ ತುಸು ಅಂಟಾದ ನೀರು ಇರುತ್ತದೆ. ಹಳದಿ ಬಣ್ಣದ ಕ್ಕೆ ತಿರುಗಿದ ಹಣ್ಣಿನ ಹೊರಪದರ ಸುಲಭವಾಗಿ ತೆಗೆದಾಗ ಕೈಗೆ ಅಂಟುವ ಲೋಳೆಯನ್ನು ಕಂಡು ಹೇಸದಿರಿ. ಇದು ಹಲವಾರು ಔಷಧೀಯ ಗುಣಗಳುಳ್ಳದ್ದು.
ಶ್ವಾಸಕೋಶ ಸಂಬಂಧಿ ಖಾಯಿಲೆಗಳಿಗೆ, ಕಫ, ಜ್ವರ, ಪಿತ್ತ ಕೋಶದ ಖಾಯಿಲೆಗಳಿಗೆ ಔಷಧವಾಗಿ ಬಳಸುತ್ತಾರೆ.
ಬಲಿತ ಕಾಯಿಗಳಿಂದ ತಯಾರಿಸಿದ ಉಪ್ಪಿನ ಕಾಯಿಗೆ ಪಾಶ್ಚಾತ್ಯ ದೇಶಗಳಲ್ಲಿ ಒಳ್ಳೆ ಬೇಡಿಕೆ ಇದೆಯಂತೆ. ಹಣ್ಣುಗಳಿಂದ ಪಡೆಯುವ ಗಮ್ ಅನ್ನು ಕಾಗದ ಅಂಟಿಸಲು ಕೂಡ ಬಳಸಬಹುದು.
ಇತ್ತೀಚೆಗೆ ಗೆಳತಿಯೊಂದಿಗೆ ಸುರತ್ಕಲ್ ಬೀಚ್‌ಗೆ ಹೋಗುವ ಮಾರ್ಗದ ಬದಿಯಲ್ಲಿ ಒಂದು ಚಳ್ಳೆ ಹಣ್ಣಿನ ಮರ ನೋಡಿದೆ. ಸಣ್ಣ ಹಣ್ಣುಗಳ ಆಕರ್ಷಕ ಗೊಂಚಲುಗಳ ಭಾರಕ್ಕೆ ಬಗ್ಗಿದ್ದ ರೆಂಬೆಯ ಫೋಟೋ ಕ್ಲಿಕ್ಕಿಸುತ್ತಿದ್ದಾಗ ಬೀಚ್‌ಗೆ ಹೋಗುತ್ತಿದ್ದ ಇಬ್ಬರು ಹುಡುಗಿಯರು ಕುತೂಹಲ ತಡೆಯದೆ ನಮ್ಮ ಕೈಯಿಂದ ಎರಡು ಹಣ್ಣು ಪಡೆದವರೇ ಅದೇನೆಂದು ಕೇಳುವ ಗೋಜಿಗೂ ಹೋಗದೆ ಬಾಯಿಗೆ ಹಾಕಿ ಜಗಿದೇ ಬಿಟ್ಟರು.
ಅವರ ಬದಲಾಗುತ್ತಿದ್ದ ಮುಖಾರವಿಂದ ನೋಡಿ ಚಳ್ಳೆ ಮರ ಮನದಲ್ಲೆ ನಗುತ್ತಿತ್ತು...ಒಳಗೊಳಗೇ ನಾವು ಕೂಡಾ :)
ಚಳ್ಳೆ ಹಣ್ಣಿನಲ್ಲೂ ಔಷದಿ ಗುಣಗಳು ಇದೆ ಅಂತ ಗೊತ್ತಿರಲಿಲ್ಲ. ನಾವುಗಳು ಯಾರಾದ್ರೂ ಟೋಪಿ ಹಾಕಿದಾಗ ಚಳ್ಳೆ ಹಣ್ಣು ತಿನ್ನಿಸಿದ ಅಂತ ಹೇಳುತ್ತೇವೆ. :) ಅದು ಒಂದು ಹುಳಿ ಹಣ್ಣು ಭಾವಿಸುವೆ.
ReplyDeleteಚಳ್ಳೆ ಹಣ್ಣಿನ ಬಗ್ಗೆ ನೆಟ್ ನಲ್ಲಿ ಹುಡುಕಾಡ್ತಾ ಇದ್ದೆ. ಇಗ ಒಳ್ಳೆ ಮಾಹಿತಿ ಸಿಕ್ಕಿತು. :) :)
ಧನ್ಯವಾದಗಳು:)..ಚಳ್ಳೆ ಹಣ್ಣಿಗೆ ಹೇಳತಕ್ಕಂತಹ ಯಾವುದೇ ರುಚಿ ಇಲ್ಲ..ಸಪ್ಪೆ ಅಂಟೊಂದನ್ನ ಬಾಯಿಗೆ ಹಾಕಿದಂತೆ ಪಜೀತಿಯಾಗುತ್ತದೆ..
ReplyDeleteChaLLe haNNu tinda cheluveyaru! Thanks for this info on chaLLe haNNu.
ReplyDeleteIts a plant having a anti-obesity nutraceuticals also..!
ReplyDeleteAccording to Amarakosh this tree is called by numerous names in Sanskrit.
ReplyDeleteशेलुः श्लेष्मातकः शीत उद्दालो बहुवारकः ।१५
1. शेलु
2. श्लेष्मातक
3. शीत
4. उद्दाल
5. बहुवारक
In Hindi they called it by Lasora or Gunda.
Lasora ka Achaar or Lasora pickle is indeed popular in north India.
Challe hannina article chennagidhe munduvarisi..
ReplyDelete