Sunday, February 28, 2016

ಸಂಶೋಧನೆಯ ಹೆಜ್ಜೆಗಳು...ಅಂಬೆಗಾಲು-2

2010 ಮಾಚರ್್ ತಿಂಗಳಿನಲ್ಲಿ  ಸ್ನಾತಕೋತ್ತರ ಪರೀಕ್ಷೆಗಳು ಮುಗಿದ ಹೊತ್ತಿಗೆ ನನಗೊಂದು ಬೇಸಿಗೆ ಸಂಶೋಧನೆಯ ಚೆಂದದ ಅವಕಾಶ ದೊರಕಿತು. ಡಾ.ರಾಘವೇಂದ್ರ ರಾವ್ ಎಂಬ ಸಸ್ಯ ತಜ್ಞರ ಬಳಿ ಸಸ್ಯ ವರ್ಗಇಕರಣ ಶಾಸ್ತೃ ಕಲಿಯುವ ಸುವರ್ಣ ಅವಕಾಶ. ಬೆಂಗಳೂರಿನಲ್ಲಿರುವ ಭಾರತೀಯ ಓéಷಧ ಮತ್ತು ಪರಿಮಳ ಸಸ್ಯಗಳ ಸಂಶೋಧನಾ ಸಂಸ್ಥೆಯಲ್ಲಿ 2 ತಿಂಗಳು ಕಲಿತದ್ದೇ ಹೆಚ್ಚು.  ಆ ಚಿಕ್ಕ ಚೊಕ್ಕ ಸಮಯಾವಕಾಶವೇ ನಾನು ಸಂಶೋಧನೆಯಲ್ಲಿ ಬೇರೂರಲು ಸಹಾಯ ಮಾಡಿದು.್ದ

Dr.R.R Rao
ಮೊದಲ ದಿನ 5-6-2010 ರಂದು 10.30 ಕ್ಕೆ ನಾನು ಆ ವಿಜ್ಷಾನಿಯನ್ನು ಭೇಟಿಯಾಗಲು ಹೋದಾಗ ತುಂತುರು ಮಳೆ ಸುರಿಯುತ್ತಿತ್ತು. ಮೂಲೆ ಛೇಂಬರಿನಿಂದ ದೊಡ್ಡ ಸ್ವರವೊಂದು ಹಿಂದಿ,ಕನ್ನಡ,ಆಂಗ್ಲ ಭಾಷೆಗಳ ಮಿಶ್ರಣದಲ್ಲಿ ಯಾರದ್ದೋ ಬೆವರಿಳಿಸುತ್ತಿದ್ದುದು ಗೊತ್ತಾಗುತ್ತಿತ್ತು. ಬಾಗಿಲ ಬಳಿ ಹೋಗಿ ವಿಚಾರಿಸಿದರೆ ಅವರೇ ನನ್ನ ಗೈಡ್. ಅವಕಾಶ ದೊರಕಿದ್ದೇ ನನಗೆ ಗತ್ತು ಬಂದಿತ್ತು.ಆದರೆ ಇಲ್ಲಿ ನಾನೇನೂ ಅಲ್ಲ ಅಂತ ಕೆಲವೇ ನಿಮಿಷದಲ್ಲಿ ಮನದಟ್ಟಾಗಿತ್ತು. "ನರಪೇತಲನಂತೆ ಇದ್ದಿ ಏನು ಮಾಡೋದು ಇಲ್ಲಿ"...... ಏನೋ ಬರೆಯುತ್ತಾ, ತನ್ನ ಪಿ.ಎ ಗೆ ಏನೋ ಗದರುತ್ತಾ ರಾವ್ ಸರ್ ಓರೆಗಣ್ಣಲ್ಲಿ ನನ್ನನ್ನೂ ಗಮನಿಸುತ್ತಿದುದು ನನಗೆ ಗೊತ್ತಾಗಿರಲಿಲ್ಲ. ಅಕ್ಕ ತೆಗೆಸಿಕೊಟ್ಟಿದ್ದ ಆ ಹೊಸ ಚೂಡಿದಾರದಲ್ಲೂ ನಾನು ಜೋಕರ್ ಥರ ಕಾಣಿಸುತ್ತಿದ್ದೆ!. "ಸಣ್ಣ ಕೊಠಡಿಯಿದು ನನ್ನ ಎದುರುಗಡೆ ಕುಚರ್ಿಯಲ್ಲಿ ಕೂರು" ಅಂಥ ಹೇಳಿ ಅಷ್ಟೇ ವೇಗದಲ್ಲಿ ನಾನು ಮಾಡಬೇಕಾದ ಕೆಲಸ,ಬೇಕಾದ ಶಿಸ್ತು ಎಲ್ಲವನ್ನೂ ಹೇಳಿ ಸರ ಸರ ಹೊರ ಹೋಗಿ ಬರೇ 5 ನಿಮಿಷ ದಲ್ಲಿ 10 ಗಿಡಗಳೊಂದಿಗೆ ಮರಳಿ ಬಂದು 5 ನಿಮಿಷದಲ್ಲಿ ನಾನು ಆ ಗಿಡಗಳ ಗುಣ ವಿಷೇಶಗಳನ್ನು ಹೇಳಬೇಕಂಬ ಆಜ್ಞೆ. ದಡ ಬಡ ಹೇಳಿ ನನಗೆ ಗೊತ್ತಿದ್ದ ಗಿಮಿಕ್ ಗಳನ್ನೆಲ್ಲಾ ಪ್ರಯೋಗಿಸಿದೆ.ಮತ್ತೆ ಅವರು ಆ ದಿನ ನನ್ನ ಮಾತನಾಡಿಸಲೇ ಇಲ್ಲ. ಸಂಜೆ 5ಕ್ಕೆ ನಾನು ಗೀಚಿದ್ದರ  ನೋಡಿದ ಸರ್ ಹೇಳಿದ್ದು. "ಅಛ್ಛ..........ಛಲೇಗಾ.. ಕಲ್ ಆಓ...ಯು ವಿಲ್ ಡು ಸಂಮ್ಥಿಂಗ್.. ಐ ಯಾಮ್ ಶುವರ್". ಮರುದಿನ ದಿಂದ ನಾನು ಹೆಚ್ಚು ಶ್ರದ್ಧೆ ವಹಿಸಿ ಕೆಲಸ ಮಾಡತೊಡಗಿದ್ದೆ. "ಒಲಿಯಾ ಡೈಯೊಕಾ" ಎಂಬ ಮಲ್ಲಿಗೆ ಕುಟುಂಬದ ಮರ ಪ್ರಭೇದವೊಂದು ನನಗೆ ಬಹಳ ಕೆಲಸ ಹಿಡಿಸಿತ್ತು. 2 ಕೇಸರ, ವಿರುಧ್ಧ ಎಲೆಗಳು ಇಷ್ಟೇ ಸಾಕು ಇದರ ಜಾಡು ಹಿಡಿಯಲು.ಸರ್ ಹೇಳಿ ಕೊಟ್ಟ ಇಂತಹ ಸೂತ್ರಗಳೆೆ ಸಸ್ಯಗಳನ್ನು ಹೆಸರಿಸಲು ನನಗೆ ಇಂದು ಸಹಕಾರಿ. ಆಪರೂಪದ ಈ ಕಲೆಯನ್ನು ನನಗೆ 2 ತಿಂಗಳಲ್ಲಿ ಧಾರೆ ಎರೆದ ಈ ಜ್ಞಾನಿಯನ್ನು ಎಂದೂ ಮರೆಯಲಾಗದು.

OLEA DIOICA Roxb. In flower

OLEA DIOICA In fruit

2 comments: