Sunday, September 4, 2011

ರಮ್ಯವಾದರೂ ಕೀಟಗಳ ದುಃಸ್ವಪ್ನ ಈ ಸಸ್ಯ !

ಆಕರ್ಷಕ ಹೂಗಳು

ಕೀಟಭಕ್ಷಕ ಸಸ್ಯದ ಬೇರಿನಲ್ಲಿರುವ ಚೀಲಗಳು


ತುಂತುರು ಮಳೆ ಹನಿಗಳು ಒದ್ದೆ ಮಾಡಿದ ಬಟಾ ಬಯಲುಗಳಲ್ಲಿ ಹುಟ್ಟಿವೆ ಪುಟಾಣಿ ಸಸ್ಯ ಸಂಕುಲ....
ಬಿಸಿಲ ಬೇಗೆಗೆ ಸುಡುತ್ತಿದ್ದ ಕಲ್ಲು ಬಂಡೆಗಳ ಮೇಲೂ ನೀಲಿ ಹೂಗಳ ಕಾರುಬಾರು.
ಬಿಳಿ,ನೇರಳೆ ಹಾಗೂ ನಸು ಕೆಂಪು ಬಣ್ಣದಲ್ಲೂ ಕಾಣಬಹುದು ಕಾಕ ಪೂವು ಎಂದು ಮಲಯಾಳದಲ್ಲಿ ಕರೆಯಲ್ಪಡುವ ಓಣಂ ಹಬ್ಬದ ಹೂಗಳ ರಂಗೋಲಿಗಳಿಗೆ ಹಳ್ಳಿಗಳಲ್ಲಿ ಬಳಸುವ ಈ ಹೂವು. .
ಮಳೆಯ ಜೊತೆಗೆ ಹುಟ್ಟಿ ಮಳೆಯೊಂದಿಗೆ ಸಾಯುವ ಆಕರ್ಷಕ ಸಸ್ಯ..
ಉದ್ದ ೧ ರಿಂದ ೧೦ ಸೆಂಟಿ ಮೀಟರ‍್. ಗಿಡದ ಬುಡದಲ್ಲಿ ಚಮಚೆ ಆಕಾರದ ಸಣ್ಣ ಎಲೆಗಳು..ಬೇರುಗಳಿಗೆ ಜೊತೆಯಾಗಿ ಕೀಟ ಭಕ್ಷಕ ಚೀಲಗಳು (bladders).ಸಣ್ಣ ಹುಳ(Larvae) ಗಳನ್ನು ಜೀರ್ಣಿಸಿಕೊಳ್ಳುವಂತಹ ಒಳ ರಚನೆಯನ್ನು ಹೊಂದಿವೆ ಈ ಚೀಲಗಳು.
ಗಿಡದ ಹೆಸರು utricularia.
ಕುಟುಂಬ Lentibulariaceae
ಹೂಗಳ ಬಣ್ಣ, ಎಲೆಗಳ ವಿನ್ಯಾಸ, ಹೂ ತೊಟ್ಟಿನ ರಚನೆ ಇತ್ಯಾದಿಗಳನ್ನಾದರಿಸಿ ತರ ತರದ ಪ್ರಭೇದಗಳು.ಜೂನ್-ಸೆಪ್ಟೆಂಬರ್ ಮಾಸಗಳ ಅವಧಿಯಲ್ಲಿ ತನ್ನ ಜೀವನ ಚಕ್ರವನ್ನು ಮುಗಿಸಿ ಸಾರ್ಥಕವಾಗುವ ಸುಂದರ ಸಸ್ಯ.
ಮಳೆ ಮುಗಿಯುತ್ತಿದ್ದಂತೆಯೇ ಬೀಜೋತ್ಪತ್ತಿಯೂ ಮುಗಿದಿರುತ್ತದೆ.
ಗಿಡವೊಂದರಲ್ಲೇ ನೂರಕ್ಕೂ  ಹೆಚ್ಚು ಬೀಜಗಳನ್ನು ಕಾಣಬಹುದು.ಕಪ್ಪು/ಕಂದು ಬಣ್ಣದ ಈ  ಮರಿ ಬೀಜಗಳು ಮುಂದಿನ ವರ್ಷದ ಮಳೆಗೆ ಕಾಯುತ್ತಾ ಮಣ್ಣಡಿಯಲ್ಲಿ ನಿದ್ರೆಗೆ ಜಾರುತ್ತವೆ. 

4 comments:

  1. ಓಹ್ ! ಬಹಳಷ್ಟು ವಿಷಯ ತಿಳಿದುಕೊಂಡಾಯಿತು. ಧನ್ಯವಾದ ನಿಮಗೆ

    ReplyDelete
  2. wow ! nice informative blog ... keep it up Rashmi

    ReplyDelete
  3. ಧನ್ಯವಾದಗಳು:)

    ReplyDelete