Monday, December 24, 2012

"ಸ್ಕಿಝೋಫ್ರೇನಿಯಾ" ಎಂಬ ಮಾನಸಿಕ ಕಾನ್ಸರ್




"ಸ್ಕಿಝೋಫ್ರೇನಿಯಾ" ಎಂಬ ಶಬ್ಧವೇ ಒಂಥರಾ ಇದೆ ಅಲ್ಲವೇ.ನೂರು ಜನರಲ್ಲಿ ಒಬ್ಬನಿಗೆ ಕಾಡುವ ಕಾನ್ಸರ್ ಇದು.ಮನಸ್ಸಿಗೆ ಸಂಬಂದಿಸಿದ್ದು ಅಂದರೆ ಮಾನಸಿಕ ಖಾಯಿಲೆ.ಪೇಲವ ಮುಖ ಹೊತ್ತು ತನ್ನೊಳಗೇ ಸಮಾಲೋಚನೆ ನಡೆಸುತ್ತಾ ವಿಚಿತ್ರ ಭಂಗಿಯಲ್ಲಿ ಕಾಣಲ್ಪಡುವ ಇವರನ್ನು ಸಮಾಜವು ನೋಡುವ ರೀತಿಯೇ ಬೇರೆ.ಶವ ಸಂಸ್ಕಾರದ ಸಮಯದಲ್ಲಿ ನೆರೆದವರೆಲ್ಲಾ ಗಂಭೀರವಾಗಿದ್ದರೆ ಈತ ಮಾತ್ರ ಅದು ಯಾವುದೋ ಹಾಸ್ಯ ಸನ್ನಿವೇಶದಂತೆ ನಗುತ್ತಿರುತ್ತಾನೆ.



ಸಣ್ಣ ಅಪಹಾಸ್ಯವನ್ನೂ ಸಹಿಸದೆ ಮಾನಸಿಕವಾಗಿ ಕುಗ್ಗುತ್ತಾ ಶಾರೀರಿಕ ಖಾಯಿಲೆಗಳೂ ಹಿಡಿದು ವ್ಯಕ್ತಿಯೊಬ್ಬ ಹುಚ್ಚನಾಗಿ ಬಿಡುವ ಈ ಅವಸ್ಥೆಗೆ ನಿಜವಾದ ಕಾರಣವೇ ಮೆದುಳಲ್ಲಿರುವ ನ್ಯೂರೋನುಗಳ ಶಿಥಿಲವಾಗುವಿಕೆ.ಇಲ್ಲಿ ಸಮಾಜದೊಂದಿಗೆ ಬೆರೆಯುವ ಹಾಗೂ ವಿಶ್ಲೇಷಣೆಗೆ ಸಂಬಂದಿಸಿ ಕೆಲಸ ಮಾಡುವ ಕೋಶಗಳು ಸಾಯತೊಡಗುತ್ತವೆ.
ನೋಡುಗರಿಗೆ ತೀರಾ ರೇಜಿಗೆ ಹುಟ್ಟಿಸುವ ಇಂತಹ ಮಂದಿ ಕಾಣಸಿಗುವುದು ಈಗ ಸಾಮಾನ್ಯ.ತಮ್ಮದಲ್ಲದ ತಪ್ಪಿಗೆ ವಂಶಪಾರಂಪರ್ಯವಾಗಿ (ಜೀನುಗಳ ಮೂಲಕ) ಹಿರಿಯರ ಬಳುವಳಿ ಉಡುಗೊರೆ ಇದು.ಇನ್ನು ಕೆಲವರಲ್ಲಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲಾಗದೆ ಅಥವಾ ನಿರಂತರವಾಗಿ ಬಾಲ್ಯದಲ್ಲಿ ಅವಮಾನಕ್ಕೊಳಗಾದರೆ ಕಾಡುವ ಹತಾಶೆಯ ಪರಿಣಾಮ.ರೋಗವನ್ನು ಆರಂಭದ ಹಂತದಲ್ಲಿ ಯೋಗ,ದ್ಯಾನಗಳಿಂದ ತಡೆಯಬಹುದು.
ಆದರೆ ಒಂದು ಹಂತ ದಾಟಿದ್ದರೆ ನಿರಂತರ ಚಿಕಿತ್ಸೆಯ ಅಗತ್ಯವಿದೆ.

ಈ ಖಾಯಿಲೆಯ ಬಗ್ಗೆ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೇ ಇವೆ."ಸ್ಕಿಝೋಫ್ರೇನಿಯಾ" ಎಂಬ ವೈಜ್ಞಾನಿಕ ಮಾಸ ಪತ್ರಿಕೆಯೇ ಮಾರುಕಟ್ಟೆಯಲ್ಲಿದೆ.
ಮಾತ್ರ ಈ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.ವಿಪಯರ್ಾಸವೆಂದರೆ ರೋಗಿಯು ತನಗಿರುವ ರೋಗದ ಅರಿವೆಯಿಲ್ಲದೆ ಅಲೆದಾಡುತ್ತಿದ್ದರೆ,ಪ್ರಜ್ಞಾವಂತ ನಾಗರೀಕರ ಸಮಾಜ ಮಾತ್ರ ಇಂಥಹ ನತದೃಷ್ಟರನ್ನು ಮರುಳನೆಂದೋ ಹುಚ್ಚನೆಂದೋ ಜರೆಯುತ್ತಾ ಮುಸಿ ಮುಸಿ ನಗುತ್ತಿದೆ.

2 comments:

  1. ಮಿದುಳಿನ ಭಾವನೆಗಳಿಗೆ ಕಾರಣವಾದ ಹಲವಾರು ಕ್ರಿಯೆಗಳನ್ನು ವಿಜ್ಞಾನ ಇನ್ನೂ ಪೂರ್ಣವಾಗಿ ಕಂಡುಕೊಂಡಿಲ್ಲ. ಮಾನಸಿಕ ಅನಾರೋಗ್ಯ ಸ್ಥಿತಿಗಳಲ್ಲಿ ಪ್ರಮುಖವಾದುದು ಸ್ಕೀಜೋಫ್ರೀನಿಯಾ...ಇದನ್ನು ಸರಳವಾಗಿ ಓದುಗನಿಗೆ ತಿಳಿಸಿಕೊಟ್ಟಿದ್ದೀರಿ...ರಶ್ಮಿ, ಪುಟ್ಟ ಮಾಹಿತಿಯುಕ್ತ ಲೇಖನಗಳು ವಿಜ್ಞಾನವನ್ನು ಸಾಮಾನ್ಯ ಓದುಗನಲ್ಲಿಗೆ ತಲುಪಿಸಲು ಬಹಳ ಸಹಕಾರಿಯಾಗುತ್ತವೆ.

    ReplyDelete