Thursday, December 1, 2011

ಒಂದು ಬರಗಾಲದ ಹಿಂದೆ

ಕೆಲವೊಮ್ಮೆ ಜನ-ಜೀವನ ಎಲ್ಲಾ ಸರಿಯಾದ ರೀತಿಯಲ್ಲಿ ಇರುವಾಗಲೇ ಹೇಳ ಹೆಸರಿಲ್ಲದ, ಇದುವರೆಗೆ ಗೊತ್ತಿಲ್ಲದ ಹೊಸ ರೋಗವೊಂದು ಹಠಾತ್ತನೆ ವಕ್ಕರಿಸಿಬಿಡುತ್ತದೆ.ಅಲ್ಲೆಲ್ಲೋ ಆಫ್ರಿಕಾದ ಚಿಂಪಾಂಜಿಯಲ್ಲಿದ್ದ ಸೂಕ್ಷ್ಮಜೀವಿ ವೈರಸ್ ‌ಈಗ ಇಡೀ ಜಗತ್ತೇ ಹೆದರುವ ಏಡ್ಸ್ ಆಗಿ ಕಾಡುತ್ತಿದೆ. ಐರಿಷ್ ಫೆಮೈನ್ ಎಂದೇ ಪ್ರಸಿದ್ಧವಾದ ಭೀಕರ ಬರಗಾಲವು Qurantine measures (ದಿಗ್ಬಂಧನ ಅಳತೆ)ಗಳು ಈಗ ಎಷ್ಟು ಅಗತ್ಯವಾಗಿದೆ ಎನ್ನುವುದಕ್ಕೆ ತಕ್ಕ ಉದಾಹರಣೆಯಾಗಿದೆ.
ಅವು ೧೮೪೪-೧೮೫೪ರವರೆಗೆ  ಐಯರ್ಲೇಂಡ್ ದೇಶವನ್ನು ಅತಿಯಾಗಿ ಪೀಡಿಸಿದ ಹಸಿವಿನ ದಿನಗಳು.ಈಗಿನ ಸೊಮಾಲಿಯಾದ ಬರಗಾಲಕ್ಕಿಂತಲೂ ಹೆಚ್ಚಾದ ಭೀಕರ ಬರಗಾಲ. ನಾವು ಇಲ್ಲಿ ಅನ್ನ,ರಾಗಿ,ಗೋಧಿಯನ್ನು ಎಷ್ಟು ಅವಲಂಬಿಸಿದ್ದೇವೆಯೋ ಹಾಗೆಯೇ ಅಲ್ಲಿಯ ಜನರ ಪ್ರಮುಖ ಆಹಾರ(staple food) ವಾಗಿದ್ದುದು ಬಟಾಟೆ(ಪೊಟಾಟೋ) ಮಾತ್ರ.ಗೋದಾಮುಗಳಲ್ಲಿ ಟನ್ನು ಗಟ್ಟಲೆ ದಾಸ್ತಾನಿರಿಸಿಧ್ಧ ಬಟಾಟೆಗಳು ತನ್ನಷ್ಟಕ್ಕೇ ಕೊಳೆಯಲಾರಂಭಿಸಿದ್ದವು.ಹೊಲದಲ್ಲಿ ನೆಟ್ಟ ಗಿಡಗಳೆಲ್ಲ ಸೊರಗಿ ಸಾಯತೊಡಗಿದ್ದವು.ಆಹಾರಕ್ಕಾಗಿ ಪರದಾಟ ಶುರುವಾಗಿತ್ತು.ರಾಜಕೀಯವಾಗಿಯೂ,ಆರ್ಥಿಕವಾಗಿಯೂ ದುರ್ಬಲವಾದ ಆ ದೇಶಕ್ಕೆ ಸಹಾಯ ಮಾಡಿದ ಶ್ರೀಮಂತ ದೇಶಗಳೂ ಕ್ರಮೇಣ ಕೈ ಚೆಲ್ಲರಾರಂಭಿಸಿದ್ದರು.
ಹೀಗೆ ಲಕ್ಷಗಟ್ಟಲೆ ಜನ ಆಹಾರವಿಲ್ಲದೆ ನರಳಿ ನರಳಿ ಸತ್ತುಹೋಗಲು ಮೂಲ ಕಾರಣ ಎಂಬುದು Phytophthora infestanse ಎಂಬ Oomycete ವರ್ಗಕ್ಕೆ ಸೇರಿದ ಒಂದು ಶಿಲೀಂದ್ರ(Fungi).ದಕ್ಷಿಣ ಅಮೇರಿಕಾ ಪ್ರಾಂತ್ಯದಿಂದ ಹಡಗುಗಳ ಮೂಲಕ ಅಯರ್ಲೇಂಡಿಗೆ ಆಮದು ಮಾಡಿಕೊಳ್ಳುತ್ತಿದ್ದ ಗೊಬ್ಬರದಲ್ಲಿ ಈ ಶಿಲೀಂದ್ರವೂ ಸೇರಿಕೊಂಡಿತ್ತು.ಐರಿಷ್ ನೆಲದ ಮಣ್ಣನ್ನು ಸೇರಿದ ಶಿಲೀಂದ್ರವು ಬಟಾಟೆಯ ಒಳಗೆ ಹುಲುಸಾಗಿ ಬೆಳೆದು “ಪೊಟಾಟೋ ಬ್ಲೈಟ್” ಎಂಬ ರೋಗ ವ್ಯಾಪಕವಾಯಿತು.ಈ ಕಾಟದಿಂದ ಪಾರಾಗಲು ಆ ಪುಟ್ಟ ದೇಶಕ್ಕೆ ಹಲವು ವರ್ಷಗಳೇ ಹಿಡಿದವು.
ಜಾಗತೀಕರಣ ಮಂತ್ರದ ಈ ಕಾಲದಲ್ಲಿ ನಾವು ಯಾವುದೇ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರಬೇಕು.ವಿದೇಶಿ ವಿನಿಮಯ ಪದ್ಧತಿ ಸುಲಭವಾಗುತ್ತಿದ್ದಂತೆ ಬಗೆ ಬಗೆಯ ಆಹಾರಗಳು,ತಂತ್ರಜ್ಞಾನಗಳು ಎಲ್ಲದಕ್ಕಿಂತ ಮಿಗಿಲಾಗಿ ಹೊಸ ಸಂಸ್ಕ್ರುತಿಗಳು,ವಿಚಾರಗಳು ಎಲ್ಲಾ ಬಂದವು.ಆದರೆ ಎಚ್ಚರಿಕೆಯಿಂದ ಇರಬೇಕಾದದ್ದು ಬಹಳಷ್ಟಿವೆ.


2 comments:

  1. ಉತ್ತಮ ಮಾಹಿತಿ ಕೊಟ್ಟಿದ್ದೀರಿ. ಕೊನೆಯ ವಾಕ್ಯದಲ್ಲಿ ಒಳ್ಳೆಯ ಸಂದೇಶ ಕೂಡಾ ಇದೆ.

    ReplyDelete
  2. ಸೂಚನೆ ಚೆನ್ನಾಗಿದೆ, ಶುಭಮಸ್ತು !

    ReplyDelete